ನೋಟು ರದ್ದು ಮಾಡಿದ ಎಲ್ಲ ದೇಶಗಳು ಗೆದ್ದು ಬಿಟ್ಟವೆ?
ಇಲ್ಲ, ಈ 6 ದೇಶಗಳಲ್ಲಿ ವಿಫಲವಾಯಿತು

ಕರೆನ್ಸಿ ಸುಧಾರಣೆ ಹಿನ್ನೆಲೆಯಲ್ಲಿ ಹತಾಶೆ ಆವರಿಸಿರುವುದು ಇದೇ ಮೊದಲೇನಲ್ಲ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಇಂತಹ ಕಾರ್ಯಾಚರಣೆಗಳು ಹಿಂದೆಯೂ ನಡೆದಿವೆ. 1971ರಲ್ಲಿ ಬ್ರಿಟಿಷ್ ಪೌಂಡ್ ವಿಚಾರದಲ್ಲಿ ಮತ್ತು 2002ರಲ್ಲಿ ಯೂರೋ ಪರಿಚಯಿಸಿದ ಸಂದರ್ಭದಲ್ಲಿ ವ್ಯವಸ್ಥಿತವಾಗಿ ಕಾರ್ಯಾಚರಣೆ ನಡೆಸಲಾಗಿದೆ. ಆದರೆ ಇತರ ಅಭಿವೃದ್ಧಿ ಹೊಂದುತ್ತಿರುವ ಮಾರುಕಟ್ಟೆಗಳಲ್ಲಿ ಹೀಗೇ ಆಗಿದೆ ಎಂದು ಹೇಳಲು ಸಾಧ್ಯವಿಲ್ಲ. ಇಲ್ಲಿ ಕೆಲವು ಉದಾಹರಣೆಗಳು ಇವೆ.
ಸೋವಿಯತ್ ಒಕ್ಕೂಟ
![]()
ಸೋವಿಯತ್ ಒಕ್ಕೂಟ ಒಡೆದು ಚೂರಾಗುವ ಕೆಲವು ವರ್ಷಗಳ ಮೊದಲು 1991 ಜನವರಿಯಲ್ಲಿ ರೂಬಲ್ ಬಿಲ್‌ಗಳನ್ನು ಹಿಂತೆಗೆದುಕೊಂಡು ಕಪ್ಪು ಹಣದ ಅರ್ಥವ್ಯವಸ್ಥೆಯ ಮೇಲೆ ಕ್ರಮ ಕೈಗೊಳ್ಳಲು ಪ್ರಯತ್ನಿಸಿದೆ. ಆದರೆ ಈ ಸುಧಾರಣೆ ಹಣದುಬ್ಬರ ತಡೆಯಲು ವಿಫಲವಾಯಿತು. ಸರ್ಕಾರದ ಮೇಲೆ ಸಾರ್ವಜನಿಕರ ನಂಬಿಕೆಯೂ ಕುಸಿಯಿತು. ರಾಜಕೀಯ ಬಿಕ್ಕಟ್ಟು ಜೊತೆಗೆ ಅರ್ಥವ್ಯವಸ್ಥೆ ಕುಸಿತವು ಗೋರ್ಬಚೇವ್ ಅವರು ನಾಗರಿಕ ಕ್ರಾಂತಿ ಎದುರಿಸುವಂತೆ ಮಾಡಿತು. ಇದು ಮುಂದಿನ ವರ್ಷ ಸೋವಿಯತ್ ಒಕ್ಕೂಟ ಮುರಿದು ಬೀಳುವಲ್ಲಿ ಕೊನೆಯಾಯಿತು. ಆದರೆ 1998ರಲ್ಲಿ ರಷ್ಯಾ ರೂಬಲ್‌ನ್ನು ರಿಡಿನೊಮಿನೇಶನ್ ಮಾಡಿ ಮೂರು ಸೊನ್ನೆಗಳನ್ನು ತೆಗೆದ ಕ್ರಮ ವ್ಯವಸ್ಥಿತವಾಗಿ ನಡೆಯಿತು.
ಉತ್ತರ ಕೊರಿಯ
![]()
2010ರಲ್ಲಿ ಆಗಿನ ಸರ್ವಾಧಿಕಾರಿ ಕಿಮ್ ಜಾಂಗ್ 11 ಸುಧಾರಣಾ ಕ್ರಮವಾಗಿ ಹಳೇ ಕರೆನ್ಸಿಯ ಮುಖ ಬೆಲೆಯಿಂದ ಎರಡು ಸೊನ್ನೆಗಳನ್ನು ತೆಗೆದರು. ಕಪ್ಪು ಹಣದ ಮಾರುಕಟ್ಟೆ ನಿವಾರಿಸಲು ಮತ್ತು ಅರ್ಥವ್ಯವಸ್ಥೆಯ ಮೇಲೆ ನಿಯಂತ್ರಣ ಹೇರಲು ಈ ಕ್ರಮ ಕೈಗೊಳ್ಳಲಾಗಿತ್ತು. ಆದರೆ ಉತ್ತಮ ಬೆಳೆಯಾಗದ ಸ್ಥಿತಿಯಿಂದಾಗಿ ದೇಶದಲ್ಲಿ ಆಹಾರದ ಕೊರತೆ ತೀವ್ರವಾಗಿತ್ತು. ಬೆಲೆ ಏರಿಕೆ ಉಂಟಾಗಿ ಅಶಾಂತಿಯ ವಾತಾವರಣ ಸೃಷ್ಟಿಯಾಗಿ ಕಿಮ್ ಜನರ ಬಳಿ ಕ್ಷಮೆಯಾಚಿಸಿದ್ದರು.
ಝೈರ್
![]()
ಸರ್ವಾಧಿಕಾರಿ ಮೊಬುಟು ಸೆಸೆ ಸೆಕೋ 1990ರಲ್ಲಿ ಆರ್ಥಿಕ ಬಿಕ್ಕಟ್ಟುಗಳನ್ನು ಎದುರಿಸಿದ ಕಾರಣ ಅವರ ಆಡಳಿತ ನಿರಂತರವಾಗಿ ಬ್ಯಾಂಕ್‌ನೋಟ್ ಸುಧಾರಣೆಗಳನ್ನು ತಂದಿದೆ. 1993ರಲ್ಲಿ ವ್ಯವಸ್ಥೆಯಿಂದ ಕರೆನ್ಸಿಯನ್ನೇ ಹಿಂತೆಗೆದುಕೊಳ್ಳುವ ಪ್ರಯತ್ನ ಹಣದುಬ್ಬರಕ್ಕೆ ಕಾರಣವಾಯಿತು. ಡಾಲರ್ ಮುಂದೆ ವಿನಿಮಯ ದರ ಇಳಿಯಿತು. ನಾಗರಿಕ ಯುದ್ಧಕ್ಕೆ ಕಾರಣವಾಗಿ 1997ರಲ್ಲಿ ಮೊಬಟು ಅಧಿಕಾರ ತೊರೆದರು.
ಮ್ಯಾನ್ಮಾರ್
![]()
1987ರಲ್ಲಿ ದೇಶದ ಸೇನಾ ಆಡಳಿತ ಚಲಾವಣೆಯಲ್ಲಿದ ಹಣದ ಶೇ. 80ರಷ್ಟು ಮೌಲ್ಯವನ್ನು ಅಮಾನ್ಯ ಮಾಡಿತು. ಅಲ್ಲದೆ ಇನ್ನೂ ಕೆಲವು ಸಮಾನ ಕ್ರಮಗಳನ್ನು ಕೈಗೊಂಡಿತ್ತು. ಇದೆಲ್ಲವನ್ನೂ ಕಪ್ಪು ಹಣದ ಅರ್ಥವ್ಯವಸ್ಥೆ ನಿವಾರಿಸಲೇ ಕೈಗೊಳ್ಳಲಾಗಿತ್ತು. ಹೀಗಾಗಿ ವರ್ಷಗಳ ನಂತರ ಮೊದಲ ವಿದ್ಯಾರ್ಥಿ ಚಳವಳಿ ನಡೆಯಿತು. ಆರ್ಥಿಕ ಅಸ್ಥಿರತೆ ತೀವ್ರವಾಗಿ ಸಾಮೂಹಿಕ ಪ್ರತಿಭಟನೆಗಳು ನಡೆದವು. ಮರು ವರ್ಷವೇ ಸರ್ಕಾರವು ಚಳವಳಿಗಾರರ ಮೇಲೆ ಕ್ರಮ ಕೈಗೊಂಡಾಗ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡರು.
ಘಾನಾ
1982ರಲ್ಲಿ ಘಾನಾ ದೇಶದಲ್ಲಿ 50 ಸಿಡಿ ನೋಟ್‌ಗಳನ್ನು ಹಿಂತೆಗೆದುಕೊಳ್ಳಲಾಯಿತು. ತೆರಿಗೆ ತಪ್ಪಿಸುವವರನ್ನು ಹಿಡಿಯಲು ಈ ಕ್ರಮ ಕೈಗೊಳ್ಳಲಾಗಿತ್ತು. ಭ್ರಷ್ಟಾಚಾರ ಮತ್ತು ನಗದೀಕರಣ ಹೆಚ್ಚಿರುವುದು ಸರಿದೂಗಿಸುವ ಚಿಂತನೆ ಇತ್ತು. ಇದು ಜನರಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಮೇಲೆ ಆತ್ಮವಿಶ್ವಾಸ ಕಳೆದು ಹೋಗುವಂತೆ ಮಾಡಿದ ಜನರು ವಿದೇಶಿ ಕರೆನ್ಸಿ ಅಥವಾ ಭೌತಿಕ ಆಸ್ತಿಗಳನ್ನು ವಿನಿಮಯ ಮಾಡಿಕೊಳ್ಳಲು ಕಾರಣವಾಯಿತು. ಕರೆನ್ಸಿಗಾಗಿ ಕಪ್ಪು ಹಣದ ಮಾರುಕಟ್ಟೆ ವ್ಯಾಪಕವಾಗಿ ಬೆಳೆಯಿತು. ಗ್ರಾಮೀಣ ವಾಸಿಗಳು ಮೈಲುಗಟ್ಟಲೆ ನಡೆದು ಬ್ಯಾಂಕಿನಲ್ಲಿ ಕರೆನ್ಸಿ ವಿನಿಮಯ ಮಾಡಿಕೊಂಡರು. ಅಂತಿಮ ಗಡುವು ದಾಟಿದ ಮೇಲೂ ವ್ಯಾಪಕ ಹಣ ತ್ಯಾಜ್ಯವಾಗಿ ಬಿದ್ದಿತ್ತು.
ನೈಜೀರಿಯ
1984ರಲ್ಲಿ ಮುಹಮ್ಮದು ಬುಹಾರಿ ನೇತೃತ್ವದ ಸೇನಾ ಸರ್ಕಾರ ಹೊಸ ಬ್ಯಾಂಕ್ ನೋಟುಗಳನ್ನು ಪರಿಚಯಿಸುವ ಮೂಲಕ ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಳ್ಳಲು ಪ್ರಯತ್ನಿಸಿತು. ಹಳೇ ನೋಟುಗಳನ್ನು ಹೊಸತರ ಜೊತೆಗೆ ಸೀಮಿತ ಅವಧಿಗೆ ಬದಲಿಸಲು ಪ್ರಯತ್ನಿಸಿತು. ಆದರೆ ಇದರಿಂದಾಗಿ ಹಣದುಬ್ಬರದ ಅರ್ಥವ್ಯವಸ್ಥೆಯನ್ನು ನಿಭಾಯಿಸುವುದು ಕಷ್ಟವಾಯಿತು. ಬುಹಾರಿಯನ್ನು ನಾಗರಿಕ ದಂಗೆಯಲ್ಲಿ ಅಧಿಕಾರದಿಂದ ತೆಗೆದು ಹಾಕಲಾಯಿತು.
ಕೃಪೆ:economictimes.indiatimes.com







