2000 ರೂ. ಹೊಸ ನೋಟು ಬಣ್ಣ ಕಳೆದುಕೊಳ್ಳುತ್ತದೆಯೇ?
ಇಲ್ಲಿದೆ ಖಚಿತ ಮಾಹಿತಿ ಮತ್ತು ಈ ನೋಟಿನ ಇತರ ವಿಶೇಷತೆಗಳು

ಕಪ್ಪು ಮತ್ತು ಬಿಳಿ ಹಣದ ವ್ಯವಹಾರದ ನಡುವೆ ಅಂತರ್ಜಾಲದಲ್ಲಿ ಹೊಸ ರೂ 2000 ನೋಟಿನ ಜೊತೆಗೆ ಸೆಲ್ಫಿಗಳು ಜನಪ್ರಿಯವಾಗಿದೆ. ಹೊಸ ಬ್ಯಾಂಕ್ ನೋಟಿನ ವಿಶಿಷ್ಟ ಬಣ್ಣ ಹಲವರು ಸಾಮಾಜಿಕ ತಾಣಗಳಲ್ಲಿ ಅದು ಬಣ್ಣ ಬಿಡುತ್ತಿರುವ ಬಗ್ಗೆ ಬರೆಯುವಂತೆ ಮಾಡಿದೆ. ಇನ್‌ಡೆಲಿಬಲ್ ಇಂಕ್ ಪ್ರಯೋಗ ಇಂಟರ್ನೆಟ್‌ನಲ್ಲಿ ಬಹಳ ಜನಪ್ರಿಯವಾಗಿದೆ. ಯುಟ್ಯೂಬ್‌ನಲ್ಲಿ ಟಾಪ್ ಟ್ರೆಂಡ್ ಆಗುತ್ತಿರುವ ವಿಡಿಯೋ ಈ ನೋಟು ಬಣ್ಣ ಬಿಡುತ್ತದೆ ಎನ್ನುವುದನ್ನು ಸಾಬೀತು ಮಾಡಿದೆ.
ಈ ವಿಡಿಯೋವನ್ನು ಜನರು 8.9 ಮಿಲಿಯಕ್ಕೂ ಹೆಚ್ಚು ಬಾರಿ ನೋಡಿದ್ದಾರೆ. ಆದರೆ ಈ 2000 ರೂಪಾಯಿ ನೋಟನ್ನು ಚೆನ್ನಾಗಿ ತಯಾರಿಸಲಾಗಿದೆ ಮತ್ತು ದ್ರವದಲ್ಲಿ ಬಿದ್ದರೂ ಹಾಳಾಗುವುದಿಲ್ಲ ಎಂದು ತಜ್ಞರು ಹೇಳಿದ ಹಿನ್ನೆಲೆಯಲ್ಲಿ ನೋಟು ಪರೀಕ್ಷಿಸುವ ಹುಚ್ಚು ಜನರಿಗೆ ಬಂದಿದೆ. ಹೀಗಾಗಿ ನೋಟನ್ನು ಉಜ್ಜುವುದು ಮತ್ತು ತೊಳೆದು ಅದರ ಬಣ್ಣ ಹೋಗುತ್ತದೆ ಎಂದು ಸಾಬೀತು ಮಾಡುವವರ ಸಂಖ್ಯೆ ಅಂತರ್ಜಾಲದಲ್ಲಿ ಹೆಚ್ಚಾಗಿದೆ.
ಆದರೆ, "ಈ ಕರೆನ್ಸಿ ನೋಟನ್ನು ಉಜ್ಜಿದಾಗ ಮತ್ತು ತೊಳೆದಾಗ ಬಣ್ಣ ಹೋಗುವಂತೆಯೇ ವಿನ್ಯಾಸ ಮಾಡಲಾಗಿದೆ. ನೋಟನ್ನು ತೊಳೆದಾಗ ಅಥವಾ ಉಜ್ಜಿದಾಗ ಬಣ್ಣ ಹೋದಲ್ಲಿ ಚಿಂತೆ ಮಾಡಬೇಕಾಗಿಲ್ಲ. ಅದು ಅಸಲಿ ನೋಟೇ ಆಗಿರುತ್ತದೆ" ಎಂದು ಆರ್ಥಿಕ ವ್ಯವಹಾರಗಳ ಕಾಯದರ್ರ್ಶಿ ಶಕ್ತಿಕಾಂತ ದಾಸ್ ಹೇಳಿದ್ದಾರೆ.
ಬಣ್ಣ ಬಿಡುವ ಜೊತೆಗೆ 2000 ರೂಪಾಯಿ ಬ್ಯಾಂಕ್ ನೋಟಿನ ಗಾತ್ರವೂ ಭಿನ್ನವಾಗಿದೆ. ಇದು x 166mm ಗಾತ್ರವಿದೆ. ಮತ್ತು ಕಡುಗುಲಾಬಿ ಬಣ್ಣ ಹೊಂದಿದೆ. ಹಿಂದಿನ ಕರೆನ್ಸಿ ನೋಟುಗಳಲ್ಲಿರುವಂತೆ ಮಹಾತ್ಮಾಗಾಂಧಿ ಚಿತ್ರ ಮುಂಭಾಗದಲ್ಲಿದ್ದರೆ, ಹಿಂಬದಿ ಮಂಗಳಯಾನದ ಚಿತ್ರವಿದೆ. ಭಾರತ ಬಾಹ್ಯಾಕಾಶದಲ್ಲಿ ಮಾಡಿರುವ ಯಶಸ್ಸನ್ನು ಇದು ಸೂಚಿಸುತ್ತದೆ.
ಪ್ರಾಣಿಗಳ ಸಣ್ಣ ಚಿತ್ರಗಳೂ ಇವೆ. ಒಟ್ಟಾರೆ ಬಣ್ಣದ ಸ್ಕೀಮ್‌ಗಳ ಜೊತೆಗೆ ಸರತಿಯಲ್ಲಿ ಜಿಯೋಮೆಟ್ರಿಕಲ್ ಪ್ಯಾಟರ್ನ್‌ಗಳನ್ನೂ ಹೊಂದಿದೆ. ಭದ್ರತಾ ಗೆರೆಯಲ್ಲಿ ಆರ್‌ಬಿಐ, ಭಾರತ್ ಮತ್ತು 2000 ಎನ್ನುವ ಮೂರು ಅಕ್ಷರಗಳಿವೆ.
ಕೃಪೆ:www.firstpost.com







