ನೋಟು ರದ್ದಾಗಿದ್ದು ಟೆನ್ಷನ್ ತಂದಿದೆಯೇ?
ಈ ಹತ್ತು ದೇಶಗಳಲ್ಲಿ ನಗದು ಬಹುತೇಕ ಇಲ್ಲವೇ ಇಲ್ಲ, ಸಮಸ್ಯೆಯೂ ಇಲ್ಲ

ಕಳೆದ ವಾರ ಪ್ರಧಾನಿ ಮೋದಿಯವರ ನೋಟು ಅಮಾನ್ಯ ಕ್ರಮ ನಮಗೆ ಬಹಳಷ್ಟು ಸಮಸ್ಯೆ ಒಡ್ಡಿರುವ ಹಿನ್ನೆಲೆಯಲ್ಲಿ ನಾವು ನಗದಿಲ್ಲದ ವ್ಯವಹಾರದ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕಾಗಿ ಬಂದಿದೆ. ಓಲಾ ಹಣ ತುಂಬುವ ಜೊತೆಗೆ ಪೇಟಿಎಂ ಖಾತೆಗಳನ್ನು ತೆರೆಯುವವರೆಗೂ, ಇಂಟರ್‌ನೆಟ್ ಬ್ಯಾಂಕಿಂಗ್‌ನಲ್ಲಿ ಬಾಡಿಗೆ ಕಟ್ಟುವುದು ಮೊದಲಾದ ರೀತಿಯಲ್ಲಿ ನಮ್ಮ ಪಾಕೆಟುಗಳಲ್ಲಿ ನಗದಿಲ್ಲದೆ ಇರುವುದನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ.
ಆದರೆ ಕೆಲವು ದೇಶಗಳಲ್ಲಿ ನಗದಿಲ್ಲದೇ ಜೀವನ ಸಾಗುತ್ತಿದೆ. ಎಷ್ಟೆಂದರೆ ಕೆಲವು ದೇಶಗಳಲ್ಲಿ ನಗದಿಲ್ಲದೆ ವ್ಯವಹಾರ ಮಾಡಿ ಎಂದೇ ನೀತಿಗಳನ್ನು ರೂಪಿಸಲಾಗಿದೆ. ಅಂತಹ ಕೆಲವು ದೇಶಗಳ ವಿವರಗಳು ಇಲ್ಲಿವೆ.
ಸ್ವೀಡನ್
ಈ ದೇಶದಲ್ಲಿ ನಗದು ವ್ಯವಹಾರವು ರಾಷ್ಟ್ರೀಯ ಅರ್ಥ ವ್ಯವಸ್ಥೆಯಲ್ಲಿ ಕೇವಲ ಶೇ.3ರಷ್ಟು ಮಾತ್ರ ಇದೆ. ಜನರು ಸಾರ್ವಜನಿಕ ಬಸ್ಸುಗಳಲ್ಲಿ ಪ್ರಯಾಣಿಸುವಾಗ ಮತ್ತು ಚರ್ಚ್‌ಗಳಿಗೆ ಅನುದಾನ ನೀಡುವಾಗಲೂ ಆನ್‌ಲೈನ್ ಬ್ಯಾಂಕ್ ಮೂಲಕವೇ ವ್ಯವಹರಿಸಬೇಕು. ಇದರಿಂದಾಗಿ ದೇಶದಲ್ಲಿ ಬ್ಯಾಂಕ್ ಸುಲಿಗೆಯೂ ಕಡಿಮೆಯಾಗಿದೆ. ಬಹಳಷ್ಟು ಬ್ಯಾಂಕುಗಳಲ್ಲಿ ನಗದೇ ಇಲ್ಲ.
ನಾರ್ವೆ
ಈ ದೇಶ ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಮುಂಚೂಣಿಯಲ್ಲಿದೆ. ರಸ್ತೆ ಬದಿಯ ಆಹಾರ ಮತ್ತು ದಿನ ಪತ್ರಿಕೆಯನ್ನೂ ಮೊಬೈಲ್ ಬ್ಯಾಂಕಿಂಗ್ ಮೂಲಕವೇ ಮಾಡಬೇಕು. ನಾರ್ವೆಯ ದೊಡ್ಡ ಬ್ಯಾಂಕ್ ಡಿಎನ್‌ಬಿ ಸಾರ್ವಜನಿಕರನ್ನು ನಗದು ತ್ಯಜಿಸುವಂತೆ ಹೇಳಿದೆ. ನಗದು ರದ್ದು ಕಪ್ಪು ಹಣವನ್ನು ಕಡಿಮೆಗೊಳಿಸಿ ಹಣ ದುರುಪಯೋಗ ಕಡಿಮೆ ಮಾಡಲಿದೆ ಎನ್ನಲಾಗಿದೆ. ನಾರ್ವೆಯಲ್ಲಿ ಹಲವು ಬ್ಯಾಂಕುಗಳು ಗ್ರಾಹಕರಿಗೆ ನಗದೇ ಕೊಡುವುದಿಲ್ಲ.
ಡೆನ್ಮಾರ್ಕ್
ಬಹುತೇಕ ಇಲ್ಲಿನ ಮೂರನೇ ಒಂದರಷ್ಟು ಜನಸಂಖ್ಯೆ ಫೋನಿನಲ್ಲೇ ಮೊಬೈಲ್ ಪೇ ವ್ಯವಹಾರ ಮಾಡುತ್ತಾರೆ. ಬಟ್ಟೆ ರಿಟೇಲ್ ಮಳಿಗೆ, ಪೆಟ್ರೋಲ್ ಪಂಪ್ ಮೊದಲಾದವು ಗ್ರಾಹಕರಿಂದ ನಗದು ಸ್ವೀಕರಿಸುವುದಿಲ್ಲ. ಆದರೆ ಆಸ್ಪತ್ರೆ ಮತ್ತು ಅಂಚೆ ಕಚೇರಿಗೆ ಇದು ಅನ್ವಯಿಸುವುದಿಲ್ಲ. 2030ರೊಳಗೆ ನಗದು ವ್ಯವಹಾರ ನಿಲ್ಲಿಸಲು ಸರ್ಕಾರ ನಿರ್ಧರಿಸಿದೆ.
ಬೆಲ್ಜಿಯಂ
ಸರಾಸರಿ ಶೇ. 93ರಷ್ಟು ಜನಸಂಖ್ಯೆ ಬೆಲ್ಜಿಯಂನಲ್ಲಿ ನಗದಿಲ್ಲದೆ ವ್ಯವಹರಿಸುತ್ತದೆ. ಶೇ. 86ರಷ್ಟು ಮಂದಿ ಡೆಬಿಟ್ ಕಾರ್ಡ್ ಹೊಂದಿದ್ದಾರೆ. ಅಲ್ಲದೆ ಬೆಲ್ಜಿಯಂ ಸರ್ಕಾರವು ದೇಶದಲ್ಲಿ 3000 ಯೂರೋಗಳನ್ನಷ್ಟೇ ನಗದು ಪಾವತಿ ಮಾಡಬೇಕೆನ್ನುವ ನಿಯಮ ಹೇರಿದೆ. ಇದರಿಂದಾಗಿ ಜನರು ಡಿಜಿಟಲ್ ವ್ಯವಹಾರವನ್ನೇ ಮಾಡುತ್ತಾರೆ. ಮೊಬೈಲ್ ಆಪ್ ಸಿಕ್ಸಡಾಟ್ಸ್ ಬಹಳ ವ್ಯಾಪಕವಾಗಿ ಬಳಕೆಯಾಗುತ್ತದೆ. ಇದನ್ನು ಬೆಲ್ಜಿಯಂ ಬ್ಯಾಂಕ್‌ಗಳು ಸಪೋರ್ಟ್ ಮಾಡಿವೆ.
ಫ್ರಾನ್ಸ್
ಫ್ರೆಂಚರು ಮೊಬೈಲ್ ಪಾವತಿಯನ್ನು ಬಿಟ್ಟಿಲ್ಲ. ಸಂಪರ್ಕವಿಲ್ಲದ ಕಾರ್ಡ್‌ಗಳು ಮತ್ತು ಎಂಪಿಒಎಸ್‌ಗಳನ್ನು ನಿತ್ಯದ ವ್ಯವಹಾರಕ್ಕೆ ಬಳಸುತ್ತಾರೆ. ಬೆಲ್ಜಿಯಂ, ಫ್ರಾನ್ಸ್‌ನ ಸರಾಸರಿ ಶೇ. 92ರಷ್ಟು ಜನಸಂಖ್ಯೆ ನಗದಿಲ್ಲದೆ ವ್ಯವಹರಿಸುತ್ತದೆ.
ಇಂಗ್ಲೆಂಡ್
ಇಂಗ್ಲೆಂಡಿನ ಕೆಲವೆಡೆ ನಗದಿಲ್ಲದ ಪಾವತಿಯೇ ಹೆಚ್ಚು. ಸರಾಸರಿ ಶೇ. 89ರಷ್ಟು ಜನಸಂಖ್ಯೆ ಡಿಜಿಟಲ್ ಬ್ಯಾಂಕ್ ವ್ಯವಹಾರ ಮಾಡುತ್ತದೆ. ಪೇಎಂ ಇಂಗ್ಲೆಂಡಿನ ಜನಪ್ರಿಯ ಮೊಬೈಲ್ ಪಾವತಿ ವ್ಯವಸ್ಥೆಯಾಗಿದೆ. ಅದು 26 ಮಿಲಿಯನ್ ಪೌಂಡ್‌ಗಳಷ್ಟು ವ್ಯವಹಾರವನ್ನು ನಡೆಸುತ್ತದೆ. ಜನಸಂಖ್ಯೆಯ ಮೂರನೇ ಎರಡರಷ್ಟು ಮಂದಿ ಡಿಜಿಟಲ್ ವ್ಯವಹಾರ ಮಾಡುತ್ತಾರೆ.
ಸೋಮಾಲಿಲ್ಯಾಂಡ್
ಆಫ್ರಿಕಾದ ಅತೀ ಬಡ ರಾಷ್ಟ್ರವಾಗಿದ್ದರೂ ಜನರು ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ಮಾಡುತ್ತಾರೆ. ಮಾರುಕಟ್ಟೆಗಳಲ್ಲಿ ನಗದು ಬಹಳ ಕಡಿಮೆ. ರಸ್ತೆಬದಿಯ ವ್ಯಾಪಾರಿಗಳೂ ಮೊಬೈಲ್ ಪಾವತಿ ಪಡೆಯುತ್ತಾರೆ. ಕಾರ್ಡುಗಳೂ ಇಲ್ಲಿ ಬಳಕೆ ಕಡಿಮೆ. 2012ರ ಸಮೀಕ್ಷೆ ಪ್ರಕಾರ ಸರಾಸರಿ ಗ್ರಾಹಕ 34 ಅಂತರ್ಜಾಲ ವ್ಯವಹಾರವನ್ನು ಮಾಸಿಕವಾಗಿ ಬಳಸುತ್ತಾನೆ. ಜಗತ್ತಿನ ಇತರ ಯಾವುದೇ ವ್ಯವಹಾರಕ್ಕಿಂತ ಇದು ಅಧಿಕ.
ಕೀನ್ಯಾ
ಇಲ್ಲಿ 15 ಮಿಲಿಯ ಮಂದಿ ಮೊಬೈಲ್ ಹಣ ವ್ಯವಹಾರದ ಆ್ಯಪ್ ಎಂ-ಪೀಸಾದ ಗ್ರಾಹಕರು.ಗ್ರಾಮೀಣ ಪ್ರದೇಶಗಳಲ್ಲೂ ಬಿಲ್ ಪಾವತಿ, ಶಾಲಾ ಶುಲ್ಕಗಳನ್ನು ಎಂ- ಪೀಸಾದಲ್ಲಿ ಪಾವತಿಸುತ್ತಿದ್ದಾರೆ. ಕೀನ್ಯಾದಲ್ಲಿ ನಗದು ವ್ಯವಹಾರವೇ ಕಡಿಮೆಯಾಗಿದೆ.
ಕೆನಡಾ
ಕೆನಡಾದಲ್ಲಿ ಶೇ. 90ರಷ್ಟು ಜನರು ನಗದಿಲ್ಲದೆ ವ್ಯವಹಾರ ಮಾಡುತ್ತಾರೆ. ಶೇ. 70ರಷ್ಟು ಕಾರ್ಡುಗಳನ್ನು ಬಳಸುತ್ತಾರೆ. 2013ರಲ್ಲಿ ಕೆನಡಾದಲ್ಲಿ ಹೊಸ ಕರೆನ್ಸಿ ಮುದ್ರಿಸಲಾಗಿದೆ. ಹೊಸ ಕರೆನ್ಸಿ ಮಾರುಕಟ್ಟೆಯಲ್ಲಿ ಇಲ್ಲ ಎಂದು ಈ ಕ್ರಮ ಕೈಗೊಳ್ಳಲಾಗಿತ್ತು. ಪೇಪಾಲ್ ಕೆನಡಾ ಸಮೀಕ್ಷೆಲ್ಲಿ ಶೇ. 56ರಷ್ಟು ಜನರು ಡಿಜಿಟಲ್ ವಾಲೆಟ್ ಬಳಸಲು ಇಚ್ಛಿಸಿದ್ದರು.
ದಕ್ಷಿಣ ಕೊರಿಯ
ದಕ್ಷಿಣ ಕೊರಿಯ ಏಷ್ಯಾದಲ್ಲಿ ನಗದಿಲ್ಲದ ವ್ಯವಹಾರದ ಕಡೆಗೆ ಸಾಗುತ್ತಿರುವ ಪ್ರಮುಖ ದೇಶ. ಕಾರ್ಡು ಬಳಸುವ ಜನರಿ ತೆರಿಗೆೆ ಶುಲ್ಕ ವಿಧಿಸಿದ ಕ್ರಮವನ್ನೂ ಸರ್ಕಾರ ಪ್ರೋತ್ಸಾಹಿಸಿದೆ.
ವಿರುದ್ಧ ದಿಕ್ಕಿನಲ್ಲಿ ಹೋಗುವ ದೇಶಗಳೂ ಇವೆ
ಜರ್ಮನಿ ನಗದು ವ್ಯವಹಾರವೇ ಬೇಕೆನ್ನುತ್ತದೆ. ಕೆಫೆ ಮತ್ತು ಸಣ್ಣ ರೆಸ್ಟೊರಂಟ್‌ಗಳೂ ಕಾರ್ಡುಗಳನ್ನು ಪಡೆದುಕೊಳ್ಳುವುದಿಲ್ಲ. ನಗದು ವ್ಯವಹಾರ ಬೇಡ ಎನ್ನುವುದೇ ದೊಡ್ಡ ಹಗರಣ ಎಂದು ಚಳವಳಿಗಾರರು ಇಲ್ಲಿ ಅಭಿಪ್ರಾಯ ಹೊಂದಿದ್ದಾರೆ.
ನಿಮಗೆ ಎಟಿಎಂನಲ್ಲಿ ದುಡ್ಡು ಸಿಗುತ್ತಿಲ್ಲ ಎಂದು ಬೇಸರವಿದ್ದಲ್ಲಿ ಈ ದೇಶಗಳಿಂದ ಪ್ರೋತ್ಸಾಹ ಪಡೆದುಕೊಳ್ಳಿ.
ಕೃಪೆ:indiatoday.intoday.in







