ಪಂಜಿಕಲ್ಲು : ಮಕ್ಕಳ ದಿನಾಚರಣೆ

ಬಂಟ್ವಾಳ, ನ. 17: ಉತ್ತಮ ಶಿಕ್ಷಣದ ಜೊತೆ ಮಕ್ಕಳ ಸಮಗ್ರ ಅಭಿವೃದ್ಧಿ ಶಿಶು ಅಭಿವೃದ್ಧಿ ಇಲಾಖೆಯಿಂದ ಮಾತ್ರ ಸಾಧ್ಯ ಎಂದು ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಹೇಳಿದರು.
ದ.ಕ. ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಇಲಾಖೆ ಬಂಟ್ವಾಳ, ಲಯನ್ಸ್ ಮತ್ತು ಲಯನ್ಸ್ ಕ್ಲಬ್ ಬಂಟ್ವಾಳ ಇದರ ಸಂಯುಕ್ತ ಆಶ್ರಯದಲ್ಲಿ ಪಂಜಿಕಲ್ಲು ವಲಯ ಮಟ್ಟದ ಅಂಗನವಾಡಿ ಕೇಂದ್ರಗಳ ಮಕ್ಕಳ ದಿನಾಚರಣೆ- 2016 ಕಾರ್ಯಕ್ರಮವನ್ನು ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಂಗನವಾಡಿ ಕೇಂದ್ರಗಳು ಕೇವಲ ಶಿಕ್ಷಣ ನೀಡುವ ಸಂಸ್ಥೆಯಲ್ಲ, ಮಕ್ಕಳ ಶಾರೀರಿಕ ಬೆಳವಣಿಗೆಯ ಜೊತೆ ಬುದ್ಧಿಶಕ್ತಿ ಹೆಚ್ಚಿಸುವ ಪೌಷ್ಠಿಕ ಆಹಾರ ನೀಡುವ ಕೇಂದ್ರ ಎಂದು ಹೇಳಿದರು.
ವೇದಿಕೆಯಲ್ಲಿ ಅಮ್ಟಾಡಿ ಗ್ರಾಪಂ ಅಧ್ಯಕ್ಷ ಹರೀಶ್ ಶೆಟ್ಟಿ ಪಡು, ಡಾ. ವಸಂತ ಬಾಳಿಗಾ, ಲಯನ್ಸ್ ಅಧ್ಯಕ್ಷ ಲಕ್ಷ್ಮಣ ಕುಲಾಲ್, ಲಯನೆಸ್ ಅಧ್ಯಕ್ಷೆ ದೇವಿಕಾ ದಾಮೋದರ್, ಸಿಡಿಪಿಒ ಮಲ್ಲಿಕಾ, ಲಯನ್ಸ್ ಕ್ಲಬ್‌ನ ಅನಿತಾ ಶೆಟ್ಟಿ, ಪುರಸಭಾ ಸದಸ್ಯ ಮುಹಮ್ಮದ್ ಇಕ್ಬಾಲ್ ಐಎಂಆರ್ ಗೂಡಿನಬಳಿ, ಪ್ರಬಾ ಆರ್. ಸಾಲ್ಯಾನ್, ಲಯನ್ಸ್ ಕ್ಲಬ್ ಕಾರ್ಯದರ್ಶಿ ಉಮೇಶ್ ಆಚಾರ್ಯ, ಗ್ರಾಪಂ ಸದಸ್ಯ ಮಧುಸೂದನ್, ಲಯನ್ಸ್ ದಾಮೋದರ್ ಉಪಸ್ಥಿತರಿದ್ದರು. ಗಾಯತ್ರಿ ಕಂಬಳಿ ಪ್ರಸ್ತಾವಿಸಿ, ಸ್ವಾಗತಿಸಿದರು. ವಸಂತಿ ವಂದಿಸಿದರು. ವಿಶಾಲಾಕ್ಷಿ ಕಾರ್ಯಕ್ರಮ ನಿರೂಪಿಸಿದರು.







