ಕಡಬ: ಸ್ಕೂಟಿಗೆ ರಿಕ್ಷಾ ಢಿಕ್ಕಿ
ಕಡಬ, ನ.17: ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಸ್ಕೂಟಿಯೊಂದಕ್ಕೆ ರಿಕ್ಷಾವೊಂದು ಢಿಕ್ಕಿ ಹೊಡೆದು ಪರಾರಿಯಾದ ಘಟನೆ ಕೊಡಿಂಬಾಳ ಪೇಟೆಯ ಹಾಲಿನ ಸೊಸೈಟಿ ಸಮೀಪ ಗುರುವಾರ ಸಂಜೆ ನಡೆದಿದೆ.
ಪೆಲತ್ತೋಡಿ ಧರ್ಮಪಾಲ ಗೌಡ ಎಂಬುವರು ತನ್ನ ಸ್ಕೂಟಿಯನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಸಂದರ್ಭ ಕಡಬದಿಂದ ಕೋಡಿಂಬಾಳದತ್ತ ಬರುತ್ತಿದ್ದ ಅಪರಿಚಿತ ರಿಕ್ಷಾ ಢಿಕ್ಕಿ ಹೊಡೆದು ಪರಾರಿಯಾಗಿದೆ. ಢಿಕ್ಕಿ ಹೊಡೆದ ರಭಸಕ್ಕೆ ನೆಲಕ್ಕುರುಲಿದ ಧರ್ಮಪಾಲ ಗೌಡರನ್ನು ಸ್ಥಳೀಯರು ಕಡಬ ಸಮುದಾಯ ಅಸ್ಪತ್ರೆಗೆ ದಾಖಲಿಸಿದ್ದಾರೆ.
ಢಿಕ್ಕಿ ಹೊಡೆದು ಪರಾರಿಯಾದ ರಿಕ್ಷಾವನ್ನು ಸ‍್ಥಳಿಯರು ಬೆನ್ನಟ್ಟಿದ್ದರೂ ಪ್ರಯೋಜನವಾಗಿಲ್ಲ. ರಿಕ್ಷಾವು ಕಡಬದ ಮೂಲದ್ದೆಂದು ತಿಳಿದುಬಂದಿದ್ದು, ಕಡಬ ಪೇಟೆಯ ಮಾಡ ರಿಕ್ಷಾ ನಿಲ್ದಾಣದಲ್ಲಿ ನಿಲ್ಲಿಸಿ ಬಾಡಿಗೆ ಮಾಡಲಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
Next Story





