ಭಾರತದಲ್ಲಿ ರಕ್ತದೊತ್ತಡದಿಂದ ಬಳಲುವವರ ಸಂಖ್ಯೆ ಎಷ್ಟು ಗೊತ್ತೇ ?

ಲಂಡನ್, ನ. 17: ಭಾರತದಲ್ಲಿ ಅಧಿಕ ರಕ್ತದೊತ್ತಡದಿಂದ ಬಳಲುವ ಸುಮಾರು 20 ಕೋಟಿ ವಯಸ್ಕರಿದ್ದಾರೆ ಎಂದು ಅಧ್ಯಯನವೊಂದು ತಿಳಿಸಿದೆ.
ಅದೇ ವೇಳೆ, ಜಗತ್ತಿನಲ್ಲಿ ಅಧಿಕ ರಕ್ತದೊತ್ತಡ ಹೊಂದಿರುವವರ ಸಂಖ್ಯೆ 113 ಕೋಟಿ ತಲುಪಿದೆ ಎಂದು ಲಂಡನ್‌ನ ಇಂಪೀರಿಯಲ್ ಕಾಲೇಜ್‌ನ ವಿಜ್ಞಾನಿಗಳ ನೇತೃತ್ವದಲ್ಲಿ ನಡೆದ ಅಧ್ಯಯನ ಹೇಳಿದೆ.
ಜಗತ್ತಿನಾದ್ಯಂತ ಅಧಿಕ ರಕ್ತದೊತ್ತಡ ಇರುವ ಜನರ ಸಂಖ್ಯೆ 40 ವರ್ಷಗಳಲ್ಲಿ ದ್ವಿಗುಣಗೊಂಡಿದೆ ಎಂದು ಅದು ತಿಳಿಸಿದೆ.
2015ರಲ್ಲಿ, ಅಧಿಕ ರಕ್ತದೊತ್ತಡ ಹೊಂದಿರುವ ಜಗತ್ತಿನ ವಯಸ್ಕರ ಪೈಕಿ ಅರ್ಧಕ್ಕೂ ಅಧಿಕ ಮಂದಿ ಏಶ್ಯದಲ್ಲಿ ವಾಸವಾಗಿದ್ದರು.
ಚೀನಾದಲ್ಲಿ ಸುಮಾರು 22.6 ಕೋಟಿ ಮಂದಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ ಎಂದು ‘ದ ಲ್ಯಾನ್ಸೆಟ್’ ಪತ್ರಿಕೆಯಲ್ಲಿ ಪ್ರಕಟಗೊಂಡ ಅಧ್ಯಯನ ತಿಳಿಸಿದೆ.
1975 ಮತ್ತು 2015ರ ನಡುವಿನ ಅವಧಿಯಲ್ಲಿ ಜಗತ್ತಿನ ಎಲ್ಲ ದೇಶಗಳಲ್ಲಿ ರಕ್ತದೊತ್ತಡ ಪ್ರವೃತ್ತಿಯಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ಸಂಶೋಧಕರು ಅಧ್ಯಯನ ಮಾಡಿದ್ದಾರೆ.
ಜಗತ್ತಿನಲ್ಲಿ 59.7 ಕೋಟಿ ಪುರುಷರು ಮತ್ತು 52.9 ಕೋಟಿ ಮಹಿಳೆಯರು ರಕ್ತದೊತ್ತಡದಿಂದ ಬಳಲುತ್ತಿದ್ದಾರೆ.







