ನೋಟು ನಿಷೇಧದ ಬಿಸಿ; ಇಂಫಾಲ್‌ನಲ್ಲಿ ಪತ್ರಿಕೆಗಳ ಪ್ರಕಟಣೆ ಶುಕ್ರವಾರದಿಂದ ಬಂದ್

ಇಂಫಾಲ್,ನ.17: ಕೇಂದ್ರ ಸರಕಾರ ಐನೂರು ಮತ್ತು ಸಾವಿರ ರೂ.ಗಳ ಚಲಾವಣೆಯನ್ನು ನಿಷೇಧಿಸಿದ ಪರಿಣಾಮವಾಗಿ ಉಂಟಾಗಿರುವ ಸಮಸ್ಯೆಯಿಂದ ಮಣಿಪುರದ ರಾಜಧಾನಿ ಇಂಫಾಲ್‌ನಲ್ಲಿ ಪತ್ರಿಕಾ ಕಚೇರಿಗಳು ಬಂದ್ ಆಗಿದ್ದು, ಶುಕ್ರವಾರದಿಂದ ಪತ್ರಿಕೆಗಳ ಪ್ರಕಟಣೆ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ.
" ಐನೂರು ಮತ್ತು ಸಾವಿರ ರೂಪಾಯಿ ನೋಟು ನಿಷೇಧ ಮತ್ತು ಇತರ ನೋಟುಗಳ ಅಭಾವದಿಂದಾಗಿ ಪತ್ರಿಕೆಗಳ ಪ್ರಕಟಣೆಯನ್ನು ನಿಲ್ಲಿಸಲಾಗುವುದು ಎಂದು ಮಣಿಪುರದ ಪತ್ರಿಕೆಗಳ ಪ್ರಕಾಶಕರ ಸಂಘ(ಎಎಂಎನ್‌ಪಿಎ) ಮತ್ತು ಮಣಿಪುರ ಪತ್ರಿಕೆಗಳ ಮಾರಾಟ ಮತ್ತು ವಿತರಕರ ಸಂಘ(ಎಎಂಎನ್‌ಎಸ್‌ಡಿಎ) ತಿಳಿಸಿದೆ.
ಶುಕ್ರವಾರ ಇಂಫಾಲ್‌ನಲ್ಲಿ ಪತ್ರಕರ್ತರು , ಪತ್ರಿಕೆಗಳ ಪ್ರಕಾಶಕರು , ಮಾರಾಟಗಾರರು ಮತ್ತು ವಿತರಕರು ಪ್ರತಿಭಟನೆ ನಡೆಸಲಿದ್ದಾರೆ.
ಮಣಿಪುರದಲ್ಲಿ 12ಕ್ಕೂ ಅಧಿಕ ಪತ್ರಿಕೆಗಳು ಆರ್ಥಿಕ ಬೆಂಬಲವಿಲ್ಲದೆ ಸಮಸ್ಯೆ ಎದುರಿಸುತ್ತಿದೆ.
Next Story





