ಇಂತಹ ವೈಭವೀಕರಣ ನಾಚಿಗೆಗೆೇಡು
ಮಾನ್ಯರೆ,
ಗಾಲಿ ಜನಾರ್ದನ ರೆಡ್ಡಿ ಮಗಳ ವೈಭವದ ಮದುವೆ ಬಗ್ಗೆ ವರದಿ ಮಾಡಲು ನಮ್ಮ ರಾಜ್ಯದ ಮಾಧ್ಯಮಗಳು ತೀವ್ರ ಪೈಪೋಟಿ ನಡೆಸಿರುವುದು ಖಂಡನೀಯ. ಸಾವಿರಾರು ಜನರು ತಮ್ಮ ದಿನನಿತ್ಯದ ಕೆಲಸವನ್ನು ಬಿಟ್ಟು ಉದ್ದುದ್ದ ಸಾಲುಗಳಲ್ಲಿ ನಿಂತು ತಮ್ಮ ದಿನನಿತ್ಯದ ಆಹಾರದ ಖರ್ಚಿಗಾಗಿ ಪರದಾಡುವುದು ಈ ಮಾಧ್ಯಮಗಳ ಕಣ್ಣಿಗೆ ಕಾಣದಂತಾಗಿದೆ. ಯಾವುದನ್ನು ಬಿಂಬಿಸಬೇಕೋ ಅದನ್ನು ಬಿಟ್ಟು ಲಾಭದ ದುರಾಸೆಗಾಗಿ ಉಳ್ಳವರ ವೈಭವಗಳನ್ನು ಇಲ್ಲದವರಿಗೆ ತೋರಿಸುತ್ತಿರುವುದು ಹೇಸಿಗೆಯೆನಿಸುತ್ತದೆ. ಉಳ್ಳವರ ಗಮನವನ್ನು ಸೆಳೆಯಲು ಹೆಣಗಾಡುವ ಮಾಧ್ಯಮಗಳು ಇದ್ದರೇನು ಇಲ್ಲದಿದ್ದರೇನು?
ಮಾಧ್ಯಮಗಳು ಶೋಷಿತ ಜನರ ಆಸರೆಯಾಗಬೇಕೇ ಹೊರತು ಹೊರೆಯಾಗ ಬಾರದು. ಮಾಧ್ಯಮ, ಶ್ರೀಮಂತ ವರ್ಗಕ್ಕೆ ಸೇರಿದವರ ಕೈಗೊಂಬೆಯಾಗದೆ ತುಳಿತಕ್ಕೊಳಗಾದ ಜನರ ಉಸಿರಾಗುವುದು ಎಂದು?
Next Story





