ಸುದ್ದಿ ಮಾಧ್ಯಮ ವರದಿಗಳ ಅಪ್ರಸ್ತುತತೆ
ಮಾನ್ಯರೆ,
ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳಲ್ಲಿ ಬರುವ ಸುದ್ದಿಗಳನ್ನು ಗಮನಿಸಿದಾಗ ಸಿನಿಕತನಗಳು ಆವಶ್ಯಕತೆಗಳಿಗಿಂತ ಹೆಚ್ಚಾಗಿ ಕಂಡುಬರುತ್ತಿದೆ. ವರದಿಗಳಲ್ಲಿ ಯಾವುದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂಬುವದರಲ್ಲಿ ಕೆಲವು ವರದಿಗಾರರಲ್ಲಿ ಗೊಂದಲಗಳಿರುವಂತೆ ಕಂಡುಬರುತ್ತಿದೆ. ತಾವು ಸಮುದಾಯಕ್ಕೆ, ಓದುಗರಿಗೆ, ವೀಕ್ಷಕರಿಗೆ ಏನನ್ನು ನೀಡುತ್ತಿದ್ದೇವೆ ಎಂಬುದರ ಬಗ್ಗೆ ಅವರಿಗೆ ಸ್ಪಷ್ಟತೆ ಇಲ್ಲ. ಉದಾಹರಣೆಗೆ ಯಾರೋ ಮಂತ್ರಿಗಳು ಅಥವಾ ವಿಐಪಿಗಳು ಯಾವುದಾದರೂ ಊರಿಗೆ ಬಂದಾಗ ಅದನ್ನು ವರದಿ ಮಾಡುವ ಭರದಲ್ಲಿ ಅವರ ದೈನಂದಿನ ಎಲ್ಲಾ ಚಟುವಟಿಕೆಗಳನ್ನು ವರದಿ ಮಾಡುತ್ತಾರೆ. ಉದಾಹರಣೆಗೆ ಅವರ ಸ್ನೇಹಿತರ ಮನೆಗೆ ಬೆಳಗ್ಗಿನ ಉಪಾಹಾರಕ್ಕೆ ಹೋಗುವುದು, ಅವರ ಮನೆಯ ತಿಂಡಿಯ ಮೆನು ಪ್ರಸಾರವಾಗುವುದು, ಅವರು ತಿಂಡಿ ತಿನ್ನುವುದನ್ನೂ ಪ್ರಸಾರ ಮಾಡುವುದು... ಇವೆಲ್ಲ ಆವಶ್ಯಕತೆ ಇರುವ ಸುದ್ದಿಗಳೇ? ಜನಪ್ರತಿನಿಧಿಗಳ ಇಂತಹ ಖಾಸಗಿ ವಿಷಯಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುವ ಅಗತ್ಯವಿದೆಯೇ?
ಕೆಲವು ದೃಶ್ಯ ಮಾಧ್ಯಮಗಳಲ್ಲಿ ಬರುವ ಸುದ್ದಿಗಳ ವೈಭವೀಕರಣ ಅತಿರೇಕವೆನಿಸುತ್ತಿದೆ. ಯಾವುದೋ ಘಟನೆಯನ್ನು ವರದಿ ಮಾಡುವಾಗ ವಸ್ತುನಿಷ್ಠವಾಗಿ ಮಾಡದೆ ತಮ್ಮದೇ ರೀತಿಯ ವ್ಯಾಖ್ಯಾನ, ವಿಶ್ಲೇಷಣೆಗಳಿಂದ ವೀಕ್ಷಕರಲ್ಲಿ ಮುಜುಗರವನ್ನು ಸೃಷ್ಟಿಸುತ್ತಿದ್ದಾರೆ. ಅತ್ಯಾಚಾರದಂತಹ ಕೆಲವು ಅಮಾನವೀಯ ಘಟನೆಗಳನ್ನು ಪ್ರಸಾರ ಮಾಡುವ ರೀತಿ ನೋಡಿದಾಗ ಇವರ ಬಗ್ಗೆ ಹೇಸಿಗೆ ಹುಟ್ಟುತ್ತಿದೆ. ಘಟನೆಯನ್ನು ನೂರಾರು ಬಾರಿ ಪ್ರಸಾರ ಮಾಡಿ ಬಲಿಪಶುಗಳಾದವರನ್ನು ಮಾನಸಿಕವಾಗಿ ಮತ್ತಷ್ಟು ಕುಗ್ಗುವಂತೆ ಮಾಡುತ್ತಿವೆ ಇಂತಹ ಮಾಧ್ಯಮಗಳು.
ಬ್ರೇಕಿಂಗ್ ನ್ಯೂಸ್ ನೀಡುವ ಭರದಲ್ಲಿ ಅದರ ಸೂಕ್ಷ್ಮ ಪರಿಣಾಮಗಳ ಬಗ್ಗೆ ಯೋಚಿಸದಿರುವುದು ವಿಷಾದಕರ





