ಪೊಲೀಸ್ ಸಿಬ್ಬಂದಿಗೆ ಶೇ.25ರಷು್ಟವೇತನ ಹೆಚ್ಚಳ ಸಾಧ್ಯತೆ
ಬೆಂಗಳೂರು, ನ. 17: ಪೊಲೀಸ್ ಸಿಬ್ಬಂದಿ ವೇತನ ಹೆಚ್ಚಳ ಬೇಡಿಕೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರಕಾರ, ಶೇ.25ರಷ್ಟು ವೇತನವನ್ನು ಹೆಚ್ಚಳ ಮಾಡಿ ನಾಳೆ(ನ.18) ಅಕೃತವಾಗಿ ಘೋಷಿಸುವ ಸಾಧ್ಯತೆಗಳಿವೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ. ಪರಮೇಶ್ವರ್ ನಾಳೆ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಜಂಟಿ ಸುದ್ದಿಗೋಷ್ಠಿ ಕರೆದಿದ್ದು, ಈ ಸಂಬಂಧ ಅಕೃತವಾಗಿ ಪ್ರಕಟಿಸಲಿದ್ದಾರೆಂದು ಗೃಹ ಇಲಾಖೆ ವಿಶ್ವಾಸನೀಯ ಮೂಲಗಳು ತಿಳಿಸಿವೆ.
ತೀವ್ರ ಕಾರ್ಯ ಒತ್ತಡದಿಂದ ಪೊಲೀಸ್ ಅಕಾರಿಗಳು ಮತ್ತು ಸಿಬ್ಬಂದಿ ಆತ್ಮಹತ್ಯೆಗೆ ಶರಣಾಗುತ್ತಿದ್ದುದಲ್ಲದೆ, ರಾಜೀನಾಮೆಯನ್ನೂ ನೀಡುತ್ತಿದ್ದರು. ಹೀಗಾಗಿ ಗೃಹ ಇಲಾಖೆ ಸಿಬ್ಬಂದಿ ವೇತನ ಹೆಚ್ಚಳ ಸಂಬಂಧ ಸಮಿತಿಯೊಂದನ್ನು ರಚಿಸಿ ವರದಿ ಪಡೆದಿತ್ತು. ಆ ಸಮಿತಿ ಸಿಬ್ಬಂದಿಗೆ ಶೇ.30ರಿಂದ 35ರಷ್ಟು ಹೆಚ್ಚಳ ಮಾಡುವಂತೆ ಶಿಾರಸು ಮಾಡಿತ್ತು.
ಆರ್ಡರ್ಲಿ ರದ್ದು: ಸಶಸ ತರಬೇತಿ ಪಡೆದ ಸಿಬ್ಬಂದಿಯನ್ನು ಆರ್ಡರ್ಲಿ ಪದ್ಧ್ದತಿ ಹೆಸರಿನಲ್ಲಿ ಹಿರಿಯ ಅಕಾರಿಗಳ ಮನೆಗಳಲ್ಲಿ ಕಸ ಗುಡಿಸುವ, ಪಾತ್ರೆ ತೊಳೆಯುವ ಕೆಲಸಕ್ಕೆ ಬಳಸಿಕೊಳ್ಳುವುದನ್ನು ರದ್ದುಪಡಿಸುವ ಬಗ್ಗೆಯೂ ಅಕೃತವಾಗಿ ಪ್ರಕಟಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.





