ದಾಸರ ಕೀರ್ತನೆಗಳು ವೆಬ್ ಸೈಟ್‌ಗೆ: ಸಚಿವೆ ಉಮಾಶ್ರೀ

ಬೆಂಗಳೂರು, ನ.17: ದಾಸರ ಕೀರ್ತನೆಗಳು, ವಚನ ಸಾಹಿತ್ಯ ಹಾಗೂ ಇನ್ನಿತರ ಶ್ರೇಷ್ಠ ಸಾಹಿತ್ಯವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜನ ಸಾಮಾನ್ಯರಿಗೆ ತಲುಪಿಸಲು ವೆಬ್ಸೈಟ್‌ಗೆ ಅಳವಡಿಸುವ ಕೆಲಸ ನಡೆಯುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಹೇಳಿದ್ದಾರೆ.
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಇಲಾಖೆಯಿಂದ ಆಯೋಜಿಸಲಾಗಿದ್ದ ‘ಕನಕ ಜಯಂತಿ’ಯಲ್ಲಿ ಪ್ರಾಸ್ತಾವಿಕ ಮಾತನಾಡಿದ ಅವರು, ಈಗಾಗಲೇ 137 ದಾಸರ 13,961 ಕೀರ್ತನೆಗಳನ್ನು, 257 ವಚನಕಾರರ 21,694 ವಚನಗಳನ್ನು, ಡಿವಿಜಿ ಅವರ 954 ಮಂಕುತಿಮ್ಮನ ಕಗ್ಗಗಳನ್ನ್ನು ವೆಬ್ಸೈಟ್‌ಗೆ ಅಳವಡಿಸಲಾಗಿದೆ ಎಂದರು.
ಕನಕರ ಸಮಗ್ರ ಸಾಹಿತ್ಯವನ್ನು ಕನಕ ಅಧ್ಯಯನ ಪೀಠದಿಂದ 15 ಭಾಷೆಗಳಿಗೆ ಭಾಷಾಂತರಿಸುವ ಕೆಲಸ ಪ್ರಗತಿಯಲ್ಲಿದ್ದು, ಶೀಘ್ರಉ ಲೋಕಾರ್ಪಣೆ ಮಾಡಲಾಗುವುದು. ಮಂಗಳೂರು, ಉಡುಪಿಯಲ್ಲಿ ಕನಕ ಅಧ್ಯಯನ ಪೀಠ ಸ್ಥಾಪಿಸಲಾಗಿದೆ ಎಂದು ಸಚಿವೆ ಅವರು ಹೇಳಿದರು.
ಕನಕದಾಸರದ್ದು ಕರ್ನಾಟಕ ಶಾಸೀಯ ಸಂಗೀತ ಕ್ಷೇತ್ರದಲ್ಲಿ ಅಮೋಘ ಸಾಧನೆ. ದಾಸರ ಕೀರ್ತನೆಗಳು ಕರ್ನಾಟಕ ಹಾಗೂ ಶಾಸೀಯ ಸಂಗೀತಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಕನಕದಾಸರ ಜೀವನ ಚರಿತ್ರೆ ಸಾರುವ ಸಲುವಾಗಿ ಕರ್ನಾಟಕ ಯಕ್ಷಗಾನ ಅಕಾಡಮಿಯು ತೊಗಲುಗೊಂಬೆ ಪ್ರದರ್ಶನ ಮಾಡಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕನಕದಾಸರು ಎಂದಿಗೂ ಜಾತಿಗೆ ಸೀಮಿತರಾದವರಲ್ಲ. ಮೇಲುವರ್ಗದವರು ಮಾಡುತ್ತಿದ್ದ ಶೋಷಣೆ ವಿರುದ್ಧ ಹೋರಾಡಿದವರು. ಸಮಾಜದಲ್ಲಿದ್ದ ಡೊಂಕನ್ನು ತನ್ನ ಕೀರ್ತನೆಗಳ ಮೂಲಕ ಜನಸಾಮಾನ್ಯರಲ್ಲಿ ಪಸರಿಸಿದ್ದು ವಿಶಿಷ್ಟವಾಗಿದೆ ಎಂದು ಅವರು ತಿಳಿಸಿದರು.







