ಕೆಎಸ್ಸಾರ್ಟಿಸಿ ಮೇಲ್ವಿಚಾರಕ ಹುದ್ದೆಗಳಿಗೆ ನ.20ರಂದು ಆನ್‌ಲೈನ್ ಕ್ಯಾಟ್ ಪರೀಕ್ಷೆ
ಬೆಂಗಳೂರು, ನ.17: ಕೆಎರ್ಸ್ಸಾಟಿಸಿ ಮೇಲ್ವಿಚಾರಕ ಹುದ್ದೆಗಳಿಗೆ 10,151 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ನ.20ರ ಬೆಳಗ್ಗೆ 11ರಿಂದ ಮಧ್ಯಾಹ್ನ 1ಗಂಟೆಯವರೆಗೆ ಆನ್‌ಲೈನ್ ಕ್ಯಾಟ್ ಪರೀಕ್ಷೆಗಳು ವಿವಿಧ ಜಿಲ್ಲೆಗಳ 18 ಸ್ಥಳಗಳಲ್ಲಿ, 48 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ.
ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ನಿಗದಿಯಾಗಿರುವ ಅ ಸಂಖ್ಯೆಗಳ ವಿವರಗಳನ್ನು ನಿಗಮದ ವೆಬ್‌ಸೈಟ್‌ನಲ್ಲಿ ಬಿತ್ತರಿಸಲಾಗಿದೆ. ಅಭ್ಯರ್ಥಿಗಳು ಪರೀಕ್ಷಾ ಸ್ಥಳವನ್ನು ಗುರುತಿಸಲು ಅನುಕೂಲವಾಗುವಂತೆ ನಿಗಮದ ವೆಬ್‌ಸೈಟ್ ನಲ್ಲಿ ಅಳವಡಿಸಲಾಗಿದ್ದು, ವೀಕ್ಷಿಸಬಹುದಾಗಿದೆ. ಅಭ್ಯರ್ಥಿಗಳು ಕರಪತ್ರದಲ್ಲಿ ನೀಡಿರುವ ಸೂಚನೆಗಳನ್ನು ತಪ್ಪದೇ ಓದುವುದು ಮತ್ತು ಕರಪತ್ರದ ಅಭ್ಯರ್ಥಿ ಪ್ರತಿಯನ್ನು ತಮ್ಮಿಂದಿಗೆ ಇರಿಸಿಕೊಂಡು ಮೂಲ ದಾಖಲಾತಿ ಪರಿಶೀಲನೆಯ ಸಮಯದಲ್ಲಿ ಹಾಜರುಪಡಿಸುವುದು, ಸೂಕ್ತ ಗುರುತಿನ ಚೀಟಿ ಇಲ್ಲದ ಅಭ್ಯರ್ಥಿಗಳನ್ನು ಪರೀಕ್ಷೆ ಬರೆಯಲು ಅರ್ಹರಿರುವುದಿಲ್ಲ. ಮತ್ತು ಛ್ಝಿಛ್ಚಿಠ್ಟಿಟ್ಞಜ್ಚಿ ಜಜಛಿಠಿ ಗಳನ್ನು ಪರೀಕ್ಷಾ ಕೇಂದ್ರಗಳ ಒಳಗೆ ನಿಷೇಸಲಾಗಿದೆ. ಅಭ್ಯರ್ಥಿಗಳು ಪರೀಕ್ಷೆ ಆರಂಭವಾಗುವ ಒಂದು ಗಂಟೆ ಮೊದಲು ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು. ಜ.6ರ ಅಡಿಯಲ್ಲಿ ಜಾಹೀರಾತುಗೊಳಿಸಲಾದ ಸಹಾಯಕ ಸಂಚಾರ ನಿರೀಕ್ಷಕ, ಸಹಾಯಕ ಲೆಕ್ಕಿಗ, ಸಹಾಯಕ ಉಗ್ರಾಣ ಪಾಲಕ, ಅಂಕಿ ಅಂಶ ಸಹಾಯಕ, ಕುಶಲಕರ್ಮಿ ಮತ್ತು ತಾಂತ್ರಿಕ ಸಹಾಯಕ ಹುದ್ದೆಗಳಿಗೆ ಕ್ಯಾಟ್ ಪರೀಕ್ಷೆಯ ದಿನಾಂಕವನ್ನು ಪ್ರತ್ಯೇಕವಾಗಿ ವೆಬ್‌ಸೈಟ್‌ನಲ್ಲಿ ತಿಳಿಸಲಾಗುವುದು. ಹೆಚ್ಚಿನ ಮಾತಿಗಾಗಿ ಸಂಸ್ಥೆಯ ವೆಬ್-ಸೈಟ್ ಅನ್ನು ವೀಕ್ಷಿಸುವುದು. ಅಭ್ಯರ್ಥಿಗಳು ಕಚೇರಿ ವೇಳೆಯಲ್ಲಿ ಸಹಾಯವಾಣಿ ಸಂಖ್ಯೆ 7760990051 7760990160 ಅನ್ನು ಸಂಪರ್ಕಿಸಬಹುದಾಗಿದೆ.





