ಮೊಝಾಂಬಿಕ ದಲ್ಲಿ ಪೆಟ್ರೋಲ್ ಟ್ಯಾಂಕರ್ ಸ್ಫೋಟ ;73 ಮಂದಿ ಸಾವು

ಮಾಪುಟೊ, ನ.18: ಪಶ್ಚಿಮ ಮೊಝಾಂಬಿಕ್ ನ ಗ್ರಾಮವೊಂದರಲ್ಲಿ ಆಯಿಲ್ ಟ್ಯಾಂಕ್ ಟ್ರಕ್ ಸ್ಫೋಟಗೊಂಡ ಪರಿಣಾಮವಾಗಿ 73ಕ್ಕೂ ಅಧಿಕ ಜನರು ಸಾವಿಗೀಡಾಗಿದ್ದಾರೆ. 110ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಗುರುವಾರ ನಡೆದಿದೆ.
ಮೊಝಾಂಬಿಕ್ ನ ಕ್ಯಾಫ್ರಿಡ್ ಝಾಂಗ್ ಗ್ರಾಮದ ಮಾಲ್ವಿ ಎಂಬಲ್ಲಿ ನಾಗರಿಕರೊಬ್ಬರು ಆಯಿಲ್ ಟ್ಯಾಂಕ್ ಟ್ರಕ್ ನಿಂದ ಪೆಟ್ರೋಲ್ ತೆಗೆಯುವ ಯತ್ನದಲ್ಲಿದ್ದಾಗ ಟ್ಯಾಂಕ್ ಸಿಡಿದು ಟ್ರಕ್ ಗೆ ಬೆಂಕಿ ಹತ್ತಿಕೊಂಡಿತು ಎನ್ನಲಾಗಿದೆ. ಮೃತಪಟ್ಟವರಲ್ಲಿ ಹಲವು ಮಂದಿ ಮಕ್ಕಳು ಸೇರಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
Next Story





