ಕುವೈಟ್: ಇನ್ನು ಊರಿಗೆ ಕಳುಹಿಸುವ ಹಣಕ್ಕೆ ತೆರಿಗೆ

ಕುವೈಟ್ ಸಿಟಿ, ನ. 18: ಅನಿವಾಸಿಗಳು ತಮ್ಮ ದೇಶಗಳಿಗೆ ಕಳುಹಿಸುವ ಹಣಕ್ಕೆ ತೆರಿಗೆ ವಿಧಿಸಲು ಕುವೈಟ್ ಸರಕಾರ ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿದೆ. ಮಾತ್ರವಲ್ಲ ಖಾಸಗಿ ಕ್ಷೇತ್ರಗಳ ಕಂಪೆನಿಗಳಿಗೂ ತೆರಿಗೆ ಬರುತ್ತಿದೆ. ಆರೋಗ್ಯ ಕ್ಷೇತ್ರ, ವಿದ್ಯಾಭ್ಯಾಸ ಕ್ಷೇತ್ರಗಳನ್ನು ಖಾಸಗೀಕರಣ ನಡೆಸುವ ಚಿಂತನೆಯೂ ನಡೆಯುತ್ತಿದೆ.
ಆರ್ಥಿಕ ಬಿಕ್ಕಟ್ಟನ್ನು ದಾಟಲು ಅರ್ಥ ತಜ್ಞರಿರುವ ವಿಶೇಷ ಸಮಿತಿ ರೂಪಿಸಿದ ವಿಶೇಷ ಪ್ಯಾಕೇಜನ್ನು ಹೊಸ ಕ್ಯಾಬಿನೆಟ್‌ನಲ್ಲಿ ಮಂಡಿಸಲಾಗುವುದು ಎಂದು ಸರಕಾರದ ವಕ್ತಾರ ತಿಳಿಸಿದ್ದಾರೆ. ಡಿಸೆಂಬರ್ ತಿಂಗಳ ಮಧ್ಯಾರ್ಧದಲ್ಲಿ ಆರಂಭವಾಗುವ ಹೊಸಕ್ಯಾಬಿನೆಟ್ ಅಧಿವೇಶನದಲ್ಲಿ ಇದಕ್ಕೆ ಸಂಬಂಧಿಸಿದ ಕರಡು ಮಸೂದೆ ಮಂಡನೆಗೊಳ್ಳಲಿದೆ. ಈಗ ಸರಕಾರದ ಮುಂದೆ ಇರುವ ಪ್ರಧಾನ ವಿಷಯದ ಆರ್ಥಿಕ ಸುಧಾರಣೆ ಮಸೂದೆ ಆಗಿದೆ ಎಂದು ವರದಿ ತಿಳಿಸಿದೆ.
Next Story





