ಫೇಸ್‌ಬುಕ್‌ನಲ್ಲಿ ನಕಲಿ ಪೋಸ್ಟ್ ಹಾಕಿ ಹಣ ಸಂಗ್ರಹಿಸಿದ ಪ್ರಿನ್ಸಿಪಾಲ್ ಬಂಧನ

ಬಾಲುಶ್ಶೇರಿ, ನ. 18: ನಿರ್ಗತಿಕ ಮಕ್ಕಳಿಗೆ ಸಹಾಯ ಮಾಡಲಾಗುವುದು ಎಂದು ಸುಳ್ಳು ಫೇಸ್ ಬುಕ್ ಪೋಸ್ಟ್ ಹಾಕಿ ಧನಸಂಗ್ರಹ ನಡೆಸಿದ ಆರೋಪದಲ್ಲಿ ಪ್ರಿನ್ಸಿಪಾಲ್ ಒಬ್ಬರನ್ನು ಪೊಲೀಸರು ಬಂಧಿಸಿದ್ದಾರೆಂದುವರದಿಯಾಗಿದೆ. ವಾಕಯಾಡ್ ಬ್ಲೂಬೆಲ್ ಇಂಗ್ಲಿಷ್ ಮೀಡಿಯಂ ಶಾಲೆಯ ಪ್ರಿನ್ಸಿಪಾಲ್ ಸುಲ್ತಾನ್ ಬತ್ತೇರಿ ಕಣ್ಣಂಚೇರಿ ಬೇಬಿ ಜೊಸೇಫ್‌ರನ್ನು (29) ಬಾಲುಶ್ಶೇರಿ ಪೊಲೀಸರು ಬಂಧಿಸಿ ಪೆರಂಬ್ರಕೋರ್ಟಿಗೆ ಹಾಜರುಪಡಿಸಿದ್ದು, ಕೋರ್ಟು ಆರೋಪಿಗೆ ಹದಿನಾಲ್ಕು ದಿವಸಗಳ ರಿಮಾಂಡ್ ವಿಧಿಸಿದೆ.
ಬೇಬಿ ಜೋಸೆಫ್ ಈ ಹಿಂದೆ ನಡುವಣ್ಣೂರು ಮಹಾತ್ಮ ವಿದ್ಯಾನಿಕೇತನ್ ಸ್ಕೂಲ್‌ನ ಪ್ರಿನ್ಸಿಪಾಲ ಆಗಿದ್ದಾಗ ಬಡಮಕ್ಕಳಿಗೆ ನೆರವಾಗುವುದಕ್ಕೆಂದು ಪೊಸ್ಟ್ ಹಾಕಿ ಹಣಸಂಗ್ರಹಿಸಿದ್ದು, ತನ್ನ ಬ್ಯಾಂಕ್ ಖಾತೆಯನ್ನು ಪೋಸ್ಟ್‌ನಲ್ಲಿ ನಮೂದಿಸಿದ್ದರು. ಆನಂತರ ಅವರು ವಾಕಯಾಡ್ ಬ್ಲೂಬೆಲ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಪ್ರಿನ್ಸಿಪಾಲ್ ಆಗಿ ನೇಮಕವಾಗಿದ್ದರು. ಆದ್ದರಿಂದ ಜೋಸೆಫ್ ವಿರುದ್ಧ ಆರೋಪ ಕೇಳಿಬರತೊಡಗಿತ್ತು.
ಫೇಸ್‌ಬುಕ್ ಪೋಸ್ಟ್ ಮೂಲಕ ಇವರ ಖಾತೆಗೆ ಜಮೆ ಆದ ಮತ್ತು ವಾಪಸು ಪಡೆದ ಲೆಕ್ಕವನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಸ್ಕೂಲ್ ಪ್ರಿನ್ಸಿಪಾಲ್ ಕೆಲಸಕ್ಕೆ ಅರ್ಹವಾದ ಯೋಗ್ಯತೆ ಜೋಸೆಫ್ ಹೊಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆಂದು ವರದಿ ತಿಳಿಸಿದೆ.





