ನಿಮ್ಮ ಮನೆಯಲ್ಲೇ ತಯಾರಿಸಿ ನೈಸರ್ಗಿಕ ಟೂತ್ ಪೇಸ್ಟ್

ಹೊಸದಿಲ್ಲಿ,ನ.18 : ಟೂತ್ ಪೇಸ್ಟ್ ಎಲ್ಲರಿಗೂ ಅತ್ಯಗತ್ಯ. ಇಂದು ಮಾರುಕಟ್ಟೆಯಲ್ಲಿ ಬಗೆಬಗೆಯ ವಿವಿಧ ಔಷಧೀಯ ಗುಣಗಳುಳ್ಳ ಹಾಗೂ ಹಲ್ಲುಗಳನ್ನು ಕಾಪಾಡುವಂತಹದ್ದೆಂದು ಹೇಳಲಾಗುವ ಟೂತ್ ಪೇಸ್ಟ್ ಗಳು ಹಲವು ಲಭ್ಯವಿವೆ. ಆದರೆ ಮನೆಯಲ್ಲಿಯೇ ತಯಾರಿಸಬಹುದಾದಂತಹ ನೈಸರ್ಗಿಕ ಟೂತ್ ಪೇಸ್ಟ್ ಬಗ್ಗೆ ಯಾರಾದರೂ ಯೋಚಿಸಿದ್ದಾರೆಯೇ ?
ಇತ್ತೀಚೆಗೆ ನ್ಯಾಷನಲ್ ಜಿಯೋಗ್ರಾಫಿಕ್ ಚಾನೆಲ್ ಶೇರ್ ಮಾಡಿದ ವೀಡಿಯೊದಲ್ಲಿ ಕೆಮಿಸ್ಟ್ ಒಬ್ಬ ಮನೆಯಲ್ಲಿಯೇ ಹೇಗೆ ಟೂತ್ ಪೇಸ್ಟ್ ತಯಾರುಗೊಳಿಸಬಹುದೆಂಬ ಬಗ್ಗೆ ಮಾಹಿತಿ ನೀಡಿದ್ದಾರೆ.
ಮೊದಲಾಗಿ ಟೂತ್ ಪೇಸ್ಟ್ ಗಳಲ್ಲಿ ಸಾಮಾನ್ಯವಾಗಿ ಉಪಯೋಗಿಸಲಾಗುವ ಹಲ್ಲುಗಳ ಪ್ಲಾಕ್ ತೆಗೆಯುವಂತಹ ಅಬ್ರೇಸಿವ್ಸ್,ಹುಮೆಕ್ಟೆಂಟ್ಸ್, ಕೃತಕ ಫ್ಲೇವರ್ ಗಳು, ಫೋಮಿಂಗ್ ಏಜಂಟ್ ಗಳು ಹಾಗೂ ಥಿಕ್ಕನರ್ಸ್ ಬಗ್ಗೆ ಮಾತನಾಡಿದ ಅವರು ನಂತರ ನೈಸರ್ಗಿಕ ಟೂತ್ ಪೇಸ್ಟ್ ಮಾಡುವ ವಿಧಾನದ ಮಾಹಿತಿ ನೀಡಿದ್ದಾರೆ. ಅಂದ ಹಾಗೆ ಈ ನೈಸರ್ಗಿಕ ಟೂತ್ ಪೇಸ್ಟ್ ನಲ್ಲಿ ಏನೆಲ್ಲಾ ಉಪಯೋಗಿಸಲಾಗುತ್ತಿದೆ ಗೊತ್ತೇ ? ಚಾಕ್ ಪೀಸ್, ಕ್ಸೈಲಿಟೊಲ್, ಪೆಪ್ಪರ್ ಮಿಂಟ್ ಆಯಿಲ್, ಗ್ಲಿಸರಿನ್ ಹಾಗೂ ಇತರ ಗಿಡ ಉತ್ಪನ್ನಗಳು. ಇದು ಸಂಪೂರ್ಣವಾಗಿ ಆರೋಗ್ಯಕರ ಹಾಗೂ ಸಾವಯವ ಪೇಸ್ಟ್ ಎಂದು ಅವರು ಹೇಳಿಕೊಂಡಿದ್ದಾರೆ.
ಟೂತ್ ಪೇಸ್ಟ್ ತಯಾರಿಸುವ ವೀಡಿಯೊ ಇಲ್ಲಿದೆ ನೋಡಿ :
Ancient toothpaste used stuff like rocks and bones—and modern toothpaste isn’t all that different. Watch a chemist make homemade toothpaste. pic.twitter.com/K2w4LW1grS
— Nat Geo Channel (@NatGeoChannel) November 5, 2016







