ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಚುನಾವಣಾ ಕಾರ್ಯಗಾರ

ಕೊಣಾಜೆ,ನ.18 : ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ವತಿಯಿಂದ ಡಿವಿಷನ್ ಮಟ್ಟದ ಚುನಾವಣಾ ಕಾರ್ಯಗಾರವು ಡಿವಿಷನ್ ಕೋಶಾಧಿಕಾರಿ ಫಾರೂಕ್ ಸಖಾಫಿ ಅವರ ಅಧ್ಯಕ್ಷತೆಯಲ್ಲಿ ಅಲ್-ಮದೀನಾ ಹಾಲ್ ತಿಬ್ಲೆಪದವಿನಲ್ಲಿ ಇತ್ತೀಚೆಗೆ ನಡೆಯಿತು.
ದೇರಳಕಟ್ಟೆ ರೇಂಜ್ ಅಧ್ಯಕ್ಷ ಇಸ್ಮಾಯಿಲ್ ಸಅದಿ ಉರುಮಣೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್ಸೆಸ್ಸೆಫ್ ದ.ಕ ಜಿಲ್ಲಾಧ್ಯಕ್ಷ ಹಾಫಿಳ್ ಯಾಕೂಬ್ ಸಅದಿ ನಾವೂರು ಸದಸ್ಯತನ ಅಭಿಯಾನದ ಚುನಾವಣಾ ಕಾರ್ಯಗಾರದ ಬಗ್ಗೆ ತರಗತಿಯನ್ನು ನಡೆಸಿದರು.
ಡಿವಿಷನ್ ನಾಯಕರಾದ ಮುನೀರ್ ಸಖಾಫಿ ಉಳ್ಳಾಲ ಪ್ರಾಸ್ತಾವಿಕ ಭಾಷಣ ಮಾಡಿದರು. ಜಿಲ್ಲಾ ಕೋಶಾಧಿಕಾರಿ ಅಲ್ತಾಫ್ ಕುಂಪಲ, ಡಿವಿಷನ್ ಉಪಾಧ್ಯಕ್ಷ ಮುಸ್ತಫ ಝುಹ್ರಿ ತಲಪಾಡಿ, ಡಿವಿಷನ್ ಕಾರ್ಯದರ್ಶಿ ಸಯ್ಯಿದ್ ಖುಬೈಬ್ ತಂಙಳ್ ಉಳ್ಳಾಲ್, ಶರೀಫ್ ಮುಡಿಪು, ಡಿವಿಷನ್ ನಾಯಕರುಗಳಾದ ಇಬ್ರಾಹೀಂ ಅಹ್ಸನಿ ಮಂಜನಾಡಿ, ಮಜೀದ್ ಕೊಣಾಜೆ, ಹಮೀದ್ ತಲಪಾಡಿ, ಜಿ.ಎ ಇಬ್ರಾಹೀಂ ಅಜ್ಜಿನಡ್ಕ, ಹನೀಫ್ ಸಖಾಫಿ ನಾಟೆಕಲ್ಲು, ಇಲ್ಯಾಸ್ ಪೊಟ್ಟೊಳಿಕೆ, ಅಶ್ರಫ್ ಸಅದಿ ಪಡಿಕ್ಕಲ್, ಸಿದ್ದೀಕ್ ಮದನಿ ಮದ್ಪಾಡಿ, ಸಫೀರ್ ರೇಂಜಾಡಿ ಮೊದಲಾದವರು ಉಪಸ್ಥಿತರಿದ್ದರು. ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು ಸ್ವಾಗತಿಸಿ ವಂದಿಸಿದರು.





