Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ಆಂಗ್ಲರ ಮೇಲೆ ಭಾರತದ ಬಿಗಿ ಹಿಡಿತ

ಆಂಗ್ಲರ ಮೇಲೆ ಭಾರತದ ಬಿಗಿ ಹಿಡಿತ

ದ್ವಿತೀಯ ಟೆಸ್ಟ್‌:ರವಿಚಂದ್ರನ್ ಅಶ್ವಿನ್ ಆಲ್‌ರೌಂಡ್ ಪ್ರದರ್ಶನ

ವಾರ್ತಾಭಾರತಿವಾರ್ತಾಭಾರತಿ18 Nov 2016 5:07 PM IST
share
ಆಂಗ್ಲರ ಮೇಲೆ ಭಾರತದ ಬಿಗಿ ಹಿಡಿತ

ವಿಶಾಖಪಟ್ಟಣ, ನ.18: ರವಿಚಂದ್ರನ್ ಅಶ್ವಿನ್ ಆಲ್‌ರೌಂಡ್ ಪ್ರದರ್ಶನದ ನೆರವಿನಲ್ಲಿ ಭಾರತ ಇಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್‌ನ ಎರಡನೆ ದಿನ ಇಂಗ್ಲೆಂಡ್‌ನ ಮೇಲೆ ಬಿಗಿ ಹಿಡಿತ ಸಾಧಿಸಿದೆ.

ಡಾ.ವೈ.ಎಸ್.ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ದಿನದ ಆಟ ಕೊನೆಗೊಂಡಾಗ ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 49 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 103 ರನ್ ಗಳಿಸಿದೆ.
ಬೆನ್ ಸ್ಟೋಕ್ಸ್ 12 ರನ್ ಮತ್ತು ಬೈರ್‌ಸ್ಟೋವ್ 12 ರನ್ ಗಳಿಸಿ ಔಟಾಗದೆ ಕ್ರೀಸ್‌ನಲ್ಲಿದ್ದಾರೆ. ಭಾರತದ ಮೊತ್ತವನ್ನು ಸರಿಗಟ್ಟಬೇಕಾದರೆ ಇನ್ನೂ 352 ರನ್ ಗಳಿಸಬೇಕಾಗಿದೆ.
ಭಾರತವನ್ನು ಮೊದಲ ಇನಿಂಗ್ಸ್‌ನಲ್ಲಿ 129.4 ಓವರ್‌ಗಳಲ್ಲಿ 455 ರನ್‌ಗಳಿಗೆ ನಿಯಂತ್ರಿಸಿದ ಇಂಗ್ಲೆಂಡ್‌ಗೆ ಮೊದಲ ಇನಿಂಗ್ಸ್ ಆರಂಭಿಸಿದಾಗ ಬಹಳ ಬೇಗನೆ ಆಘಾತ ಕಾದಿತ್ತು. ಆರಂಭಿಕ ದಾಂಡಿಗ ಅಲಿಸ್ಟರ್ ಕುಕ್(2) ಅವರ ವಿಕೆಟ್‌ನ್ನು ವೇಗಿ ಮುಹಮ್ಮದ್ ಶಮಿ ಬೇಗನೆ ಉರುಳಿಸಿದರು.
ಜೋ ರೂಟ್ ಮತ್ತು ಯುವ ದಾಂಡಿಗ ಹಸೀಬ್ ಹಮೀದ್ ತಂಡದ ಬ್ಯಾಟಿಂಗನ್ನು ಮುಂದುವರಿಸಿದರು. ಎರಡನೆ ವಿಕೆಟ್‌ಗೆ 47 ರನ್‌ಗಳ ಜೊತೆಯಾಟ ನೀಡಿದರು.
82 ನಿಮಿಷಗಳ ಬ್ಯಾಟಿಂಗ್‌ನಲ್ಲಿ ಹಮೀದ್ 50 ಎಸೆತಗಳನ್ನು ಎದುರಿಸಿದರು. 13 ರನ್ ಗಳಿಸಿದ ಅವರು 20.6ನೆ ಓವರ್‌ನಲ್ಲಿ ರನೌಟಾಗಿ ಪೆವಿಲಿಯನ್ ಸೇರಿದರು. ಕಳೆದ ಪಂದ್ಯದಲ್ಲಿ ಒಂಟಿ ಮತ್ತು ಅವಳಿ ರನ್‌ಗಳಿಗೆ ಹೆಚ್ಚು ಅವಕಾಶ ನೀಡಿದ್ದರಿಂದ ಇಂಗ್ಲೆಂಡ್‌ನ ಮೊತ್ತ ಬೆಳೆದಿತ್ತು. ಆದರೆ ಈ ಟೆಸ್ಟ್‌ನಲ್ಲಿ ಭಾರತ ಚುರುಕಿನ ಫೀಲ್ಡಿಂಗ್ ಕಡೆಗೆ ಗಮನ ಹರಿಸಿದಂತಿದೆ.
ಕಳೆದ ಟೆಸ್ಟ್‌ನಲ್ಲಿ ಶತಕ ದಾಖಲಿಸಿದ್ದ ರೂಟ್ ಈ ಟೆಸ್ಟ್‌ನಲ್ಲೂ ಶತಕ ಬಾರಿಸುವ ಚಿಂತನೆ ನಡೆಸಿದ್ದರು. ಆದರೆ 53 ರನ್ ಗಳಿಸಿದ ರೂಟ್‌ಗೆ ಅಶ್ವಿನ್ ಪೆವಿಲಿಯನ್ ದಾರಿ ತೋರಿಸಿದರು.ಬಳಿಕ ಬೆನ್ ಡಕೆಟ್‌ಗೂ ಪೆವಿಲಿಯನ್ ಹಾದಿ ತೋರಿಸಿದರು.
 ಆಲ್‌ರೌಂಡರ್ ಮೊಯಿನ್ ಅಲಿ ತಂಡವನ್ನು ಆಧರಿಸುವ ನಿಟ್ಟಿನಲ್ಲಿ ಹೋರಾಟ ನಡೆಸಿದರು. 28 ನಿಮಿಷಗಳ ಕಾಲ ಕ್ರೀಸ್‌ನಲ್ಲಿದ್ದ ಅವರು 21 ಎಸೆತ ಎದುರಿಸಿದ್ದರೂ, ಅವರ ಖಾತೆಗೆ 1 ರನ್ ಸೇರ್ಪಡೆಗೊಂಡಿತು. ಚೊಚ್ಚಲ ಟೆಸ್ಟ್ ಆಡುತ್ತಿರುವ ಜಯಂತ್ ಯಾದವ್ ಅವರು ಅಲಿ ಅವರನ್ನು ಎಲ್‌ಬಿಡಬ್ಲು ಬಲೆಗೆ ಬೀಳಿಸುವುದರೊಂದಿಗೆ ತನ್ನ ಖಾತೆಗೆ ಮೊದಲ ಟೆಸ್ಟ್ ವಿಕೆಟ್ ಜಮೆ ಮಾಡಿದರು.34.2 ಓವರ್‌ನಲ್ಲಿ 80ಕ್ಕೆ 5 ವಿಕೆಟ್ ಪಡೆದಿದ್ದ ಇಂಗ್ಲೆಂಡ್‌ಗೆ ಇನ್ನಷ್ಟು ಅಪಾಯವಾಗುವುದನ್ನು ಸ್ಟೋಕ್ಸ್ ಮತ್ತು ಬೈರ್‌ಸ್ಟೋವ್ ತಪ್ಪಿಸಿದರು.
ಅಶ್ವಿನ್ 20ಕ್ಕೆ 2, ಶಮಿ 15ಕ್ಕೆ 1 ಮತ್ತು ಜಯಂತ್ ಯಾದವ್ 11ಕ್ಕೆ 1 ವಿಕೆಟ್ ಪಡೆದರು.
ಭಾರತ 455ಕ್ಕೆ ಆಲೌಟ್: ಇದಕ್ಕೂ ಮೊದಲು ಆರ್.ಅಶ್ವಿನ್ ಬಾರಿಸಿದ ಅರ್ಧಶತಕದ ನೆರವಿನಲ್ಲಿ ಭಾರತ 129.4 ಓವರ್‌ಗಳಲ್ಲಿ 455 ರನ್ ಗಳಿಸಿತ್ತು.
ಅಶ್ವಿನ್ 58 ರನ್ (146ನಿ, 95ಎ, 6ಸಿ) ಗಳಿಸಿದರು. ಎಂಟನೆ ವಿಕೆಟ್‌ಗೆ ಅಶ್ವಿನ್ ಮತ್ತು ಜಯಂತ್ ಯಾದವ್ 64 ರನ್‌ಗಳ ಜೊತೆಯಾಟ ನೀಡಿದರು. ತಂಡದ ಸ್ಕೋರ್‌ನ್ನು 123.5 ಓವರ್‌ಗಳಲ್ಲಿ 427ಕ್ಕೆ ಏರಿಸಿದರು.
  ಮೊದಲ ದಿನದಾಟದಂತ್ಯಕ್ಕೆ ಭಾರತ 90 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 317 ರನ್ ಗಳಿಸಿತ್ತು.
ಔಟಾಗದೆ 151 ರನ್ ಗಳಿಸಿರುವ ನಾಯಕ ವಿರಾಟ್ ಕೊಹ್ಲಿ ಮತ್ತು 1 ರನ್ ಗಳಿಸಿರುವ ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್ ಔಟಾಗದೆ ಕ್ರೀಸ್‌ನಲ್ಲಿದ್ದರು.

ಇಂದು ಇವರು ಬ್ಯಾಟಿಂಗ್ ಮುಂದುವರಿಸಿ ಈ ಮೊತ್ತಕ್ಕೆ 34 ರನ್ ಸೇರಿಸಿದರು. ವೈಯಕ್ತಿಕ ಸ್ಕೋರ್‌ನ್ನು 167ಕ್ಕೆ ಏರಿಸಿದ ಕೊಹ್ಲಿ ದ್ವಿಶತಕದ ಯೋಜನೆಯಲ್ಲಿದ್ದರು. ಆದರೆ ಮೊಯಿನ್ ಅಲಿ ಅವರು ಕೊಹ್ಲಿಯ ದ್ವಿಶತಕದ ಪ್ರಯತ್ನವನ್ನು ವಿಫಲಗೊಳಿಸಿದರು.ಅಲಿ ಎಸೆತದಲ್ಲಿ ಕೊಹ್ಲಿ ಅವರು ಸ್ಟೋಕ್ಸ್‌ಗೆ ಕ್ಯಾಚ್ ನೀಡುವುದರೊಂದಿಗೆ 5ನೆ ವಿಕೆಟ್‌ಗೆ ಕೊಹ್ಲಿ ಮತ್ತು ಅಶ್ವಿನ್ ಅವರ 35 ರನ್‌ಗಳ ಜೊತೆಯಾಟ ಕೊನೆಗೊಂಡಿತು.
  ಕೊಹ್ಲಿ ನಿರ್ಗಮನದ ಬಳಿಕ ಅಲಿ ಅವರು ವೃದ್ಧಿಮಾನ್ ಸಹಾ(3) ಮತ್ತು ರವೀಂದ್ರ ಜಡೇಜ(0) ಅವರನ್ನು ಎಲ್‌ಬಿಡಬ್ಲು ಬಲೆಗೆ ಬೀಳಿಸುವುದರೊಂದಿಗೆ ಭಾರತಕ್ಕೆ ಆಘಾತ ನೀಡಿದರು.
  ಜಡೇಜ ನಿರ್ಗಮನದ ಬಳಿಕ ಜಯಂತ್ ಯಾದವ್ ಅವರು ಅಶ್ವಿನ್ ಜೊತೆಯಾದರು. ಎಂಟನೆ ವಿಕೆಟ್‌ಗೆ ಇವರ ಜೊತೆಯಾಟದಲ್ಲಿ 64 ರನ್ ಭಾರತದ ಖಾತೆಗೆ ಸೇರ್ಪಡೆಗೊಂಡಿತು. ರಾಜ್‌ಕೋಟ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ 70 ರನ್ ಮತ್ತು 32 ರನ್ ಗಳಿಸಿದ್ದ ಅಶ್ವಿನ್ ಎರಡನೆ ಟೆಸ್ಟ್‌ನಲ್ಲೂ ಅದೇ ಪ್ರದರ್ಶನ ಮುಂದುವರಿಸಿ ಮೊದಲ ಇನಿಂಗ್ಸ್‌ನಲ್ಲಿ 58 ರನ್ (146ನಿ, 95ಎ, 6ಬೌ) ಗಳಿಸಿದರು. ಜಯಂತ್ ಯಾದವ್ (35), ಉಮೇಶ್ ಯಾದವ್(13) ಮತ್ತು ಮುಹಮ್ಮದ್ ಶಮಿ(ಔಟಾಗದೆ 7) ತಂಡದ ಸ್ಕೋರ್‌ನ್ನು 455ಕ್ಕೆ ತಲುಪಿಸಲು ನೆರವಾದರು.
ಇಂಗ್ಲೆಂಡ್‌ನ ಜೇಮ್ಸ್ ಆ್ಯಂಡರ್ಸನ್ 62ಕ್ಕೆ 3, ಮೊಯಿನ್ ಅಲಿ 98ಕ್ಕೆ 3, ಎ.ರಶೀದ್ 110ಕ್ಕೆ 2, ಬ್ರಾಡ್ 49ಕ್ಕೆ 1 ಮತ್ತು ಸ್ಟೋಕ್ಸ್ 73ಕ್ಕೆ 1 ವಿಕೆಟ್ ಪಡೆದರು.

ದಾಖಲೆ ವಂಚಿತ ವಿರಾಟ್ ಕೊಹ್ಲಿ
ಭಾರತದ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ವರ್ಷವೊಂದರಲ್ಲಿ ಮೂರು ದ್ವಿಶತಕಗಳನ್ನು ಗಳಿಸಿದ ಮೊದಲ ಭಾರತೀಯ ದಾಂಡಿಗ ಎಂಬ ದಾಖಲೆ ಬರೆಯುವ ಅವಕಾಶದಿಂದ ವಂಚಿತಗೊಂಡರು.
ಕೊಹ್ಲಿ 167 ರನ್(401ನಿ, 267ಎ, 18ಬೌ) ಗಳಿಸಿ ಔಟಾದರು. ಅವರು ಜುಲೈ 21ರಂದು ನಾರ್ತ್ ಸ್ಟಾಂಡ್‌ನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ 200 ರನ್ ಗಳಿಸಿದ್ದರು. ಬಳಿಕ ಅವರು ನ್ಯೂಝಿಲೆಂಡ್ ವಿರುದ್ಧ ಅಕ್ಟೋಬರ್ 8ರಂದು ದ್ವಿಶತಕ (211) ದಾಖಲಿಸಿದ್ದರು.

ಸ್ಕೋರ್ ವಿವರ

ಭಾರತ ಪ್ರಥಮ ಇನಿಂಗ್ಸ್:

129.4 ಓವರ್‌ಗಳಲ್ಲಿ 455

ವಿಜಯ್ ಸಿ ಸ್ಟೋಕ್ಸ್ ಬಿ ಆ್ಯಂಡರ್ಸನ್ 20

ರಾಹುಲ್ ಸಿ ಸ್ಟೋಕ್ಸ್ ಬಿ ಬ್ರಾಡ್ 00

ಚೇತೇಶ್ವರ ಪೂಜಾರ ಸಿ ಬೈರ್‌ಸ್ಟೋವ್ ಬಿ ಆ್ಯಂಡರ್ಸನ್ 119

ವಿರಾಟ್ ಕೊಹ್ಲಿ ಸಿ ಸ್ಟೋಕ್ಸ್ ಬಿ ಅಲಿ 167

ಅಜಿಂಕ್ಯ ರಹಾನೆ ಸಿ ಬೈರ್‌ಸ್ಟೋವ್ ಬಿ ಆ್ಯಂಡರ್ಸನ್ 23

ಆರ್.ಅಶ್ವಿನ್ ಸಿ ಬೈರ್‌ಸ್ಟೋವ್ ಬಿ ಸ್ಟೋಕ್ಸ್ 58

ಸಹಾ ಎಲ್‌ಬಿಡಬ್ಲು ಅಲಿ 03

ರವೀಂದ್ರ ಜಡೇಜ ಎಲ್‌ಬಿಡಬ್ಲು ಅಲಿ 00

ಜಯಂತ್ ಯಾದವ್ ಸಿ ಆ್ಯಂಡರ್ಸನ್ ಬಿ ರಶೀದ್ 35

ಉಮೇಶ್ ಯಾದವ್ ಸಿ ಅಲಿ ಬಿ ರಶೀದ್ 13

ಮುಹಮ್ಮದ್ ಶಮಿ ಅಜೇಯ 07

ಇತರ 10

ವಿಕೆಟ್ ಪತನ: 1-6, 2-22, 3-248, 4-316, 5-351, 6-363, 7-363, 8-427, 9-440, 10-455.

ಬೌಲಿಂಗ್ ವಿವರ:

ಆ್ಯಂಡರ್ಸನ್ 20-3-62-3

ಬ್ರಾಡ್ 16-02-49-1

ಸ್ಟೋಕ್ಸ್ 20-4-73-1

ಅನ್ಸಾರಿ 12-1-45-0

ರಶೀದ್ 34.4-2-110-2

ಮೊಯಿನ್ ಅಲಿ 25-1-98-3

ರೂಟ್ 2-0-9-0.

ಇಂಗ್ಲೆಂಡ್ ಪ್ರಥಮ ಇನಿಂಗ್ಸ್: 49 ಓವರ್‌ಗಳಲ್ಲಿ 103/5

ಅಲಿಸ್ಟರ್ ಕುಕ್ ಬಿ ಶಮಿ 02

ಹಮೀದ್ ರನೌಟ್ 13

ರೂಟ್ ಸಿ ಯಾದವ್ ಬಿ ಅಶ್ವಿನ್ 53

ಡಕೆಟ್ ಬಿ ಅಶ್ವಿನ್ 05

ಮೊಯಿನ್ ಅಲಿ ಎಲ್‌ಬಿಡಬ್ಲು ಯಾದವ್ 01

ಸ್ಟೋಕ್ಸ್ ಅಜೇಯ 12

ಬೈರ್‌ಸ್ಟೋ ಅಜೇಯ 12

ಇತರ 05

ವಿಕೆಟ್ ಪತನ: 1-4, 2-51, 3-72, 4-79, 5-80.

ಬೌಲಿಂಗ್ ವಿವರ:

ಮುಹಮ್ಮದ್ ಶಮಿ 8-2-15-1

ಉಮೇಶ್ ಯಾದವ್ 6-1-14-0

ರವೀಂದ್ರ ಜಡೇಜ 15-3-38-0

ಅಶ್ವಿನ್ 13-5-20-2

ಜಯಂತ್ ಯಾದವ್ 7-3-11-1.

ಅಂಕಿ-ಅಂಶ

80: ಇಂಗ್ಲೆಂಡ್ 80 ರನ್ ಗಳಿಸುವಷ್ಟರಲ್ಲಿ ಮೊದಲ ಐದು ವಿಕೆಟ್‌ಗಳನ್ನು ಕಳೆದುಕೊಂಡಿದೆ. ಭಾರತದಲ್ಲಿ ಐದನೆ ಬಾರಿ ಅಗ್ರ ಐವರು ಬ್ಯಾಟ್ಸ್‌ಮನ್‌ಗಳನ್ನು ಬೇಗನೆ ಕಳೆದುಕೊಂಡಿದೆ. 2012ರಲ್ಲಿ ಅಹ್ಮದಾಬಾದ್ ಟೆಸ್ಟ್‌ನಲ್ಲಿ ಆಂಗ್ಲರು ಇದೇ ರೀತಿಯ ಪರಿಸ್ಥಿತಿ ಎದುರಿಸಿದ್ದರು. ಆಗ 69 ರನ್‌ಗೆ 5 ವಿಕೆಟ್ ಪತನವಾಗಿತ್ತು.

02: ಅಲಿಸ್ಟರ್ ಕುಕ್ ಏಶ್ಯಾಖಂಡದ ಪಿಚ್‌ನಲ್ಲಿ ಎರಡನೆ ಬಾರಿ ವೇಗದ ಬೌಲರ್‌ಗೆ ಕ್ಲೀನ್‌ಬೌಲ್ಡ್ ಆಗಿದ್ದಾರೆ. ಕುಕ್ 2006ರಲ್ಲಿ ನಾಗ್ಪುರದಲ್ಲಿ ಆಡಿದ್ದ ತನ್ನ ಚೊಚ್ಚಲ ಪಂದ್ಯದಲ್ಲಿ ಇರ್ಫಾನ್ ಪಠಾಣ್‌ಗೆ ಕ್ಲೀನ್‌ಬೌಲ್ಡ್ ಆಗಿದ್ದರು.

 8: ಜೋ ರೂಟ್ ಭಾರತ ವಿರುದ್ಧ ಆಡಿರುವ 12 ಇನಿಂಗ್ಸ್‌ಗಳಲ್ಲಿ 8ನೆ ಬಾರಿ 50ಕ್ಕೂ ಅಧಿಕ ರನ್ ಗಳಿಸಿದ್ದಾರೆ. ಇದು ಭಾರತ ವಿರುದ್ಧ ರೂಟ್ ಅವರ ಶ್ರೇಷ್ಠ ಸಾಧನೆಯಾಗಿದೆ. ಆಸ್ಟ್ರೇಲಿಯದ ವಿರುದ್ಧ 27 ಇನಿಂಗ್ಸ್‌ಗಳಲ್ಲಿ 7 ಬಾರಿ 50 ಪ್ಲಸ್ ಸ್ಕೋರ್ ದಾಖಲಿಸಿದ್ದಾರೆ.

02: ಭಾರತ ತಂಡ ಪ್ರಸ್ತುತ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಎರಡು ಬಾರಿ ಡಿಆರ್‌ಎಸ್‌ನಲ್ಲಿ ಲಾಭ ಪಡೆದಿದೆ. ಕಳೆದ ಟೆಸ್ಟ್‌ನಲ್ಲಿ ಚೇತೇಶ್ವರ ಪೂಜಾರ ಎಲ್ಬಿಡಬ್ಲು ತೀರ್ಪಿನಲ್ಲಿ ಔಟಾಗುವುದರಿಂದ ಬಚಾವಾದರೆ, 2ನೆ ಪಂದ್ಯದಲ್ಲಿ ಜಯಂತ್ ಯಾದವ್ ಅವರು ಮೊಯಿನ್ ಅಲಿ ಅವರನ್ನು ಡಿಆರ್‌ಎಸ್ ಸಹಾಯದಿಂದ ಔಟ್ ಮಾಡಿದರು.

61.14: ಆರ್.ಅಶ್ವಿನ್ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 61.14ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಅಶ್ವಿನ್ ಈ ತನಕ 2 ಶತಕ ಹಾಗೂ 2 ಅರ್ಧಶತಕ ಬಾರಿಸಿದ್ದಾರೆ. ಇಂಗ್ಲೆಂಡ್‌ನ ವಿರುದ್ಧ ನಾಲ್ಕನೆ ಬಾರಿ ಅರ್ಧಶತಕ ಬಾರಿಸಿದರು. ಆಂಗ್ಲರ ವಿರುದ್ಧ ಗರಿಷ್ಠ ಅರ್ಧಶತಕ ಬಾರಿಸಿರುವ ಅಶ್ವಿನ್ ಆ ತಂಡದ ವಿರುದ್ಧ 50.90 ಸರಾಸರಿ ಕಾಯ್ದುಕೊಂಡಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X