ರಸ್ತೆ ಅಭಿವೃದ್ಧಿ ಕಾಮಗಾರಿ ವೀಕ್ಷಣೆ: ನ್ಯೂನತೆ ಸರಿಪಡಿಸುವಂತೆ ಸೂಚನೆ

ಪುತ್ತೂರು,ನ.18 : ಪುತ್ತೂರು ಬಸ್ ನಿಲ್ದಾಣದ ಬಳಿಯಿಂದ ಮುಖ್ಯರಸ್ತೆಯಲ್ಲಿ ಬೊಳುವಾರುವರೆಗೆ ರಸ್ತೆ ಡಾಂಬರೀಕರಣ ಕಾಮಗಾರಿ ಶುಕ್ರವಾರ ಪ್ರಾರಂಭಗೊಂಡಿದ್ದು, ಕಾಮಗಾರಿಯನ್ನು ನಗರಸಭಾ ಅಧ್ಯಕ್ಷೆ ಜಯಂತಿ ಬಲ್ನಾಡು, ಸದಸ್ಯರಾದ ಎಚ್.ಮಹಮ್ಮದ್‌ಆಲಿ, ಶಕ್ತಿಸಿನ್ಹ, ಮುಖೇಶ್‌ಕೆಮ್ಮಿಂಜೆ, ಅನ್ವರ್ ಖಾಸಿಂ, ಜಯಲಕ್ಷ್ಮೀಸುರೇಶ್, ಜೆಸಿಂತಾ ಮಸ್ಕರೇಂಜಸ್ ಹಾಗೂ ನಾಮನಿರ್ದೇಶಿತ ಸದಸ್ಯರಾದ ಕೇಶವ ಪೂಜಾರಿ, ಮಹೇಶ್‌ಕಲ್ಲೇಗ ಅವರು ವೀಕ್ಷಿಸಿದರು.
ಕೆಲವು ನ್ಯೂನತೆಗಳನ್ನು ಗಮನಿಸಿದ ಅವರು ನ್ಯೂನತೆಗಳನ್ನು ಸರಿಪಡಿಸಿಕೊಂಡು ಉತ್ತಮ ರೀತಿಯಲ್ಲಿ ಕಾಮಗಾರಿ ನಿರ್ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ನಗರಸಭಾ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಬಿ.ಪಿ.ಚಂದ್ರಶೇಖರ್, ಕಿರಿಯ ಇಂಜಿನಿಯರ್ ತುಳಸಿದಾಸ್, ಗುತ್ತಿಗೆದಾರ ಮುಗರೋಡಿ ಕನ್ಸ್‌ಸ್ಟ್ರಕ್ಷನ್ಸ್ ನ ದಾಮೋದರ ಮತ್ತಿತರರು ಇದ್ದರು.
Next Story





