ಬಾಲಪ್ರತಿಭೆಗಳಿಂದ ಗೀತಲಹರಿ

ಮೂಡುಬಿದಿರೆ,ನ.18 : ನುಡಿಸಿರಿಯ ಅಂಗವಾಗಿ ಮೊದಲ ದಿನದ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಇಲ್ಲಿನ ಕೆ.ವಿ.ಸುಬ್ಬಣ್ಣ ಬಯಲು ರಂಗ ಮಂದಿರದಲ್ಲಿ ಶುಕ್ರವಾರ ಸಂಜೆ ರಮೇಶ್ಚಂದ್ರ ಬೆಂಗಳೂರು ಅವರ ಸಂಯೋಜನೆಯಲ್ಲಿ ಟಿ.ವಿ ವಾಹಿನಿ ರಿಯಾಲಿಟಿ ಶೋ ವಿಜೇತ ಬಾಲಪ್ರತಿಭೆಗಳಿಂದ ನಡೆದ ಗೀತ ಲಹರಿಯಲ್ಲಿ ಪ್ರತಿಭೆಗಳು ವಿವಿಧ ಹಾಡುಗಲನ್ನು ಹಾಡಿ ರಸದೌತಣ ನೀಡಿದರು.
ರತ್ನಾಕರ ವರ್ಣಿ ವೇದಿಕೆಯಲ್ಲಿ ಪೂರ್ಣಿಮಾ ಭಟ್ ಕುಲಕರ್ಣಿ ಹಾಗೂ ಭರತಿ ಪ್ರತಾಪ್ ಮತ್ತು ತಂಡ ಬೆಂಗಳೂರು ಇವರ ತಂಡದಿಂದ ಹಿಂದೂಸ್ಥಾನಿ ಜುಗಲ್‌ಬಂದಿ ಗಾಯನ, ವಿದ್ವಾನ್ ಬಾಲ ಕೃಷ್ಣ ಮಂಜೇಶ್ವರ ಇವರ ನಿರ್ದೇಶನದಲ್ಲಿ ನಾಟ್ಯನಿಲಯಂ, ಹಾಗೂ ಆಳ್ವಾಸ್ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ನಡೆಯಿತು.
ಡಾ. ಶಿವರಾಮ ಕಾರಂತ ವೇದಿಕೆಯಲ್ಲಿ ಗಿರೀಶ್ ಕಾರ್ನಾಡ್ ರಚಿಸಿ ಜಯತೀರ್ಥ ಜೋಷಿ ನಿದೇರ್ಶನದ ಮೈಸೂರಿನ ರಂಗಾಯಣ ಅಭಿನಯದ ’ತಲೆದಂಡ’ ನಾಟಕ ನಡೆಯಿತು.
Next Story





