ಪತ್ರಿಕೆಯ ಚಂದಾದಾರರ ಸಂಖ್ಯೆಯಲ್ಲಿ ಭಾರಿ ಹೆಚ್ಚಳ
ಟ್ರಂಪ್‌ಗೆ ‘ನ್ಯೂಯಾರ್ಕ್ ಟೈಮ್ಸ್’ ತಿರುಗೇಟು

ನ್ಯೂಯಾರ್ಕ್, ನ. 18: ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ತಿರುಗೇಟು ನೀಡಿರುವ ‘ನ್ಯೂಯಾರ್ಕ್ ಟೈಮ್ಸ್’, ಚುನಾವಣೆಯ ಬಳಿಕ ತನ್ನ ಹಣ ಪಾವತಿಸುವ ಚಂದಾದಾರರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ಹೇಳಿದೆ.
‘ಟ್ರಂಪ್ ವಿದ್ಯಮಾನ’ದ ಬಗ್ಗೆ ವರದಿ ಮಾಡದಿರುವುದು ಹಾಗೂ ಸರಿಯಲ್ಲದ ವರದಿಗಾರಿಕೆಗಳಿಂದಾಗಿ ನ್ಯೂಯಾರ್ಕ್ ಟೈಮ್ಸ್ ಸಾವಿರಾರು ಚಂದಾದಾರರನ್ನು ಕಳೆದುಕೊಂಡಿದೆ ಎಂಬುದಾಗಿ ಟ್ರಂಪ್ ರವಿವಾರ ಟ್ವೀಟ್ ಮಾಡಿದ್ದರು.
ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಟ್ರಂಪ್, ಈ ಪತ್ರಿಕೆಯ ಬಗ್ಗೆ ಆರು ಬಾರಿ ಟ್ವೀಟ್ ಮಾಡಿದ್ದಾರೆ.
ಚುನಾವಣಾ ದಿನದ ಬಳಿಕದ ಒಂದು ವಾರದ ಅವಧಿಯಲ್ಲಿ ತನ್ನ ವೃತ್ತಪತ್ರಿಕೆ ಹಾಗೂ ಡಿಜಿಟಲ್ ಉತ್ಪನ್ನಗಳಿಗೆ ಹೊಸದಾಗಿ 41,000 ಮಂದಿ ಚಂದಾ ಪಾವತಿಸಿದ್ದಾರೆ ಎಂದು ಪತ್ರಿಕೆ ಹೇಳಿದೆ.
ಒಂದು ವಾರದಲ್ಲಿ ಪತ್ರಿಕೆ ಇಷ್ಟೊಂದು ಏರಿಕೆ ಕಂಡಿರುವುದು 2011ರ ಬಳಿಕ ಮೊದಲ ಬಾರಿಯಾಗಿದೆ ಎಂದು ‘ನ್ಯೂಯಾರ್ಕ್ ಟೈಮ್ಸ್ ಕೊ’ ಹೇಳಿದೆ. 2011ರಲ್ಲಿ ಪತ್ರಿಕೆ ತನ್ನ ಡಿಜಿಟಲ್ ಚಂದಾ ಮಾದರಿಯನ್ನು ಆರಂಭಿಸಿತ್ತು.





