‘ಶಾಸಕರ ಶಿಫಾರಸಿನಿಂದ ರಸ್ತೆ ಅಭಿವೃದ್ಧಿಗೆ ಹಣ ಮಂಜೂರು’
ಬೆಳ್ತಂಗಡಿ, ನ.18: ತಾಲೂಕಿಗೆ ಕೇಂದ್ರ ರಸ್ತೆ ಅಭಿವೃದ್ಧಿ ನಿಧಿಯಿಂದ 25 ಕೋ.ರೂ. ಅನುದಾನ ಮಂಜೂರಾಗಿರುವುದು ಶಾಸಕರ ಕೋರಿಕೆಯಂತೆ ಸರಕಾರ ಮಾಡಿರುವ ಶಿಫಾರಸಿನಂತೆ ಆಗಿದೆ. ಈಗ ಕೆಲವರು ಬಿಂಬಿಸುವಂತೆ ಸಂಸದರ ಶಿಫಾರಸ್ಸಿನಿಂದಾಗಿ ಬಂದಿರುವುದಲ್ಲ ಎಂದು ಶಾಸಕ ಕೆ.ವಸಂತ ಬಂಗೇರ ತಿಳಿಸಿದ್ದಾರೆ. ಬೆಳ್ತಂಗಡಿಯ ಕಚೇರಿಯಲ್ಲಿ ಶುಕ್ರವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಚಾರ ತಿಳಿಸಿದರು.
ತಾಲೂಕಿನ ಮೂರು ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಕೇಂದ್ರ ರಸ್ತೆ ಅಭಿವೃದ್ಧಿ ನಿಧಿಯಿಂದ ಅನುದಾನ ಬಂದಿದೆ ಇದು ಕೇಂದ್ರ ಸರಕಾರದ ಹಣ ಹೌದು ಆದರೆ ಅದು ಶಾಸಕರ ರಾಜ್ಯ ಸರಕಾರದ ಶಿಫಾರಸಿನಂತೆ ಬಿಡುಗಡೆಯಾಗುತ್ತದೆ. ಏನೂ ಮಾಡದೆ ಅನುದಾನ ಬಿಡುಗಡೆಯಾದಾಗ ಅದನ್ನು ತಾವು ಮಾಡಿದ್ದು ಎಂದು ಬೆನ್ನು ತಟ್ಟಿಕೊಳ್ಳುವುದು ಒಳ್ಳೆಯ ಲಕ್ಷಣವಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಅಭಿವೃದ್ಧಿಯ ವಿಚಾರದಲ್ಲಿ ಇಂತಹ ಸಣ್ಣ ರಾಜಕೀಯ ಮಾಡುವುದು ಯಾಕೆ ಎಂದು ಅವರು ಪ್ರಶ್ನಿಸಿದರು.
Next Story





