ರಾಜಕಾರಣಿಗಳು ಯಾಕೆ ಕ್ಯೂ ನಿಲ್ಲುತ್ತಿಲ್ಲ..?
ಮಾನ್ಯರೆ,
500, 1000 ರೂ. ಹಳೆನೋಟುಗಳ ಚಲಾವಣೆ ರದ್ದು ವಿಚಾರ ನೇರವಾಗಿ ಶ್ರೀಸಾಮಾನ್ಯನಿಗೆ ತೊಂದರೆ ಉಂಟು ಮಾಡಿದೆಯೇ ಹೊರತು ಶ್ರೀಮಂತ ವ್ಯಕ್ತಿಗಳಿಗೆ ಯಾವುದೇ ಬಿಸಿ ತಟ್ಟಿಲ್ಲ. ಇದಕ್ಕೆ ಸಾಕ್ಷಿ ಮಾಜಿ ಸಚಿವ ಜನಾರ್ದನ ರೆಡ್ಡಿ ಪುತ್ರಿ ಮದುವೆ. ಈ ಆದೇಶ ಹೊರಡಿಸಿ ಹತ್ತು ದಿನಗಳೇ ಕಳೆದರೂ ಬೆಂಗಳೂರಲ್ಲಿ ನೋಟುಗಳ ಬದಲಾವಣೆಗೆ ಹಾಗೂ ಹಣಕ್ಕಾಗಿ ಎಟಿಎಂ ಮುಂದೆ ಜಾಗರಣೆ ಮಾಡುವ ಜನರ ಸಂಖ್ಯೆ ಇನ್ನಷ್ಟು ಹೆಚ್ಚಾಗುತ್ತಿದೆ. ಆದರೆ ಈ ವರೆಗೆ ಸರದಿ ಸಾಲಿನಲ್ಲಿ ನಿಂತವರು ಸಾಮಾನ್ಯ ಜನರೇ ಹೊರತು ಜನಪ್ರತಿನಿಧಿಗಳಲ್ಲ. ಹಾಗಾದರೆ ರಾಜಕಾರಣಿಗಳು ಹಣಕ್ಕಾಗಿ ಏನು ಮಾಡಿದರು ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತೆ.
ಬೆಂಗಳೂರಲ್ಲಿರುವ ಹೆಚ್ಚಿನ ರಾಜಕಾರಣಿಗಳು ತಮ್ಮ ಅಧಿಕಾರ ಬಲ ಬಳಸಿ ಲಕ್ಷ-ಲಕ್ಷ ಹಳೆ ನೋಟುಗಳನ್ನು ತಮ್ಮ ಬೆಂಬಲಿಗರು, ಸಿಬ್ಬಂದಿಯ ಮೂಲಕ ಬದಲಿಸಿ ಬ್ಯಾಂಕ್‌ನಿಂದ ಹೊಸ ನೋಟುಗಳನ್ನು ಪಡೆಯುತ್ತಿದ್ದಾರೆ. ಜನಪ್ರತಿನಿಧಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು ಹಣ ವಿನಿಮಯಕ್ಕೆ ಅಡ್ಡ ದಾರಿ ಹಿಡಿದು ಅಧಿಕ ಪ್ರಮಾಣದ ಹಣವನ್ನು ಪಡೆಯುತ್ತಿದ್ದಾರೆ. ಇದಕ್ಕಾಗಿ ಬ್ಯಾಂಕ್, ಅಂಚೆಕಚೇರಿ ಸಿಬ್ಬಂದಿ ಕಮಿಷನ್ ಆಸೆಗೆ ಸಹಕರಿಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ಹಾಗಾದರೆ ಜನರಿಗೊಂದು ಕಾನೂನು, ರಾಜಕಾರಣಿಗಳಿಗೊಂದು ಕಾನೂನೇ..? ಇದು ಕಪ್ಪುಹಣವನ್ನು ನಿರ್ನಾಮ ಮಾಡುವ ವಿಧಾನವೇ..? ನಿಜಕ್ಕೂ ಇದು ಶತಮಾನದ ವ್ಯಂಗ್ಯ