Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ನೀವು ವಿಮೆ ಮಾಡಿಸಿದ್ದೀರಿ ಸರಿ, ಆದರೆ...

ನೀವು ವಿಮೆ ಮಾಡಿಸಿದ್ದೀರಿ ಸರಿ, ಆದರೆ ನೀವು ದಪ್ಪ ಇದ್ದೀರಾ? ಹಾಗಾದರೆ ಇದೆ "ಭಾರಿ" ಸಮಸ್ಯೆ

ವಾರ್ತಾಭಾರತಿವಾರ್ತಾಭಾರತಿ19 Nov 2016 9:18 AM IST
share
ನೀವು ವಿಮೆ ಮಾಡಿಸಿದ್ದೀರಿ ಸರಿ, ಆದರೆ ನೀವು ದಪ್ಪ ಇದ್ದೀರಾ? ಹಾಗಾದರೆ ಇದೆ ಭಾರಿ ಸಮಸ್ಯೆ

ಚೆನ್ನೈ, ನ.19: ವಿಮಾ ಪಾಲಿಸಿದಾರ ತೀರಾ ಬೊಜ್ಜು ಹೊಂದಿದ್ದರು ಎಂಬ ಕಾರಣಕ್ಕೆ ಆ ವ್ಯಕ್ತಿಯ ಕುಟುಂಬಕ್ಕೆ ವಿಮಾ ಪರಿಹಾರ ನಿರಾಕರಿಸಿದ ಪ್ರಕರಣ ವರದಿಯಾಗಿದೆ.
ಚೆನ್ನೈ ನಿವಾಸಿ ಎಸ್. ಶಾಂತಿ ಎಂಬವವರ ಮಗ ಸಹಜ ಸಾವನ್ನಪ್ಪಿದರು. ಮಗನ ವಿಮಾ ಪರಿಹಾರ ಪಡೆಯಲು ಸಾವಿಗೀಡಾದ ಮಗ ಅಧಿಕ ಬೊಜ್ಜು ಹೊಂದಿರಲಿಲ್ಲ ಎಂದು ನಿರೂಪಿಸಬೇಕಾದ ಅನಿವಾರ್ಯತೆಗೆ ಈ ಮಹಿಳೆ ಸಿಕ್ಕಿಕೊಂಡರು. ಶ್ರೀರಾಮ್ ಜೀವವಿಮಾ ಕಂಪೆನಿಗೆ ಮಗನ ಭಾವಚಿತ್ರವನ್ನು ಕೂಡಾ ಸಲ್ಲಿಸಬೇಕಾಯಿತು. ಆದರೆ ಅದಕ್ಕೆ ಕೂಡಾ ಕಂಪೆನಿ ಒಪ್ಪದಿದ್ದಾಗ ಆ ಮಹಿಳೆ ವಿಮಾ ಮಧ್ಯಸ್ಥಿಕೆದಾರರ ಮೊರೆ ಹೋಗಬೇಕಾಯಿತು. ಅಂತಿಮವಾಗಿ ಮಧ್ಯಸ್ಥಿಕೆದಾರ ಈಕೆಯ ಪರವಾಗಿ ತೀರ್ಪು ನೀಡಿ, ವಿಮಾದಾರರ ಪರಿಹಾರ ಮೊತ್ತವನ್ನು ಪಾವತಿಸುವಂತೆ ಕಂಪೆನಿಗೆ ಸೂಚಿಸಿದರು.
"ಇಲ್ಲಿ ವಿಚಿತ್ರ ಸಂಗತಿ ಎಂದರೆ ಸಾವಿಗೀಡಾದ ವ್ಯಕ್ತಿ ವಿಮಾ ಸಲಹೆಗಾರರಾಗಿ ಅದೇ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ವಾಸ್ತವವಾಗಿ 70 ಕೆ.ಜಿ. ಭಾರ ಇದ್ದರು. ಆದರೆ ಅವರ ಪಾಲಿಸಿ ದಾಖಲೆಗಳಲ್ಲಿ ಉದ್ದೇಶಪೂರ್ವಕವಾಗಿ 130 ಕೆ.ಜಿ. ಎಂದು ದಾಖಲೆ ಸೃಷ್ಟಿಸಲಾಗಿತ್ತು ಎಂದು ಐಆರ್‌ಡಿಎಐ ಸದಸ್ಯೆ ಸುಧಾ ರಘುನಾಥನ್ ವಿವರಿಸಿದ್ದಾರೆ.
ಆದರೆ ಈ ಮಹಿಳೆ ಎದುರಿಸಿದ ಆಘಾತಕಾರಿ ಸ್ಥಿತಿ ಹಲವು ಮಂದಿಗೆ ಎದುರಾಗಬಹುದು. ಬೊಜ್ಜಿನ ಕಾರಣ ನೀಡಿ ಇಂಥ ಸಂದರ್ಭಗಳಲ್ಲಿ ವಿಮಾ ಪರಿಹಾರವನ್ನು ನಿರಾಕರಿಸಬಹುದು. ಇದರಿಂದಾಗಿ ಕುಟುಂಬದವರು, ಆ ವ್ಯಕ್ತಿ ಬೊಜ್ಜು ಹೊಂದಿರಲಿಲ್ಲ ಎಂದು ನಿರೂಪಿಸಬೇಕಾದ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ.
ಚೆನ್ನೈನಲ್ಲಿ ಸಾಮಾನ್ಯವಾಗಿ ಇಂಥ ವಿಮಾ ಪರಿಹಾರ ವ್ಯಾಜ್ಯಗಳು ಪದೇ ಪದೇ ಕಂಡುಬರುತ್ತಿವೆ. ಈ ಬಹುತೇಕ ವಿವಾದಗಳಿಗೆ ವಿಮಾ ಪಾಲಿಸಿ ಮಾಡಿಸುವ ಸಂದರ್ಭದಲ್ಲಿ ವೈದ್ಯಕೀಯವಾಗಿ ಆರೋಗ್ಯ ಸ್ಥಿತಿಗತಿ ಬಗ್ಗೆ ಮಾಹಿತಿಗಳನ್ನು ನೀಡದಿರುವುದು ಕಾರಣ. ಪಾಲಿಸಿ ಮಾಡಿಸುವ ವೇಳೆ ಮಧುಮೇಹ, ಹೈಪರ್ ಟೆನ್ಷನ್‌ನಂಥ ಸಮಸ್ಯೆ ಇದ್ದರೆ ಮೊದಲೇ ಬಹಿರಂಗಪಡಿಸಿ, ಹೆಚ್ಚಿನ ವಿಮಾ ಕಂತು ಪಾವತಿಸುವುದು ಸೂಕ್ತ. ವಿಮಾ ಕಂಪೆನಿ, ವಿಮಾ ಪರಿಹಾರ ದಾವೆ ಸಲ್ಲಿಸುವ ಸಂದರ್ಭದಲ್ಲಿ ಇದನ್ನು ಪತ್ತೆ ಮಾಡಿದರೆ ಪಾಲಿಸಿದಾರರಿಗೆ ತೊಂದರೆಯಾಗುತ್ತದೆ ಎಂದು ವಿಮಾ ವ್ಯಾಜ್ಯಗಳ ಮಧ್ಯಸ್ಥಿಕೆದಾರ  ಬಿ.ಎನ್.ಮಿಶ್ರಾ ಸಲಹೆ ಮಾಡುತ್ತಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X