ಉತ್ತರ ಪ್ರದೇಶ ಚುನಾವಣೆಯಲ್ಲಿ ಪ್ರಿಯಾಂಕಗೆ ನಿರ್ಣಾಯಕ ಪಾತ್ರ: ಕಾಂಗ್ರೆಸ್

ಹೊಸದಿಲ್ಲಿ,ನ. 19: ತಿಂಗಳೊಳಗೆ ಉತ್ತರಪ್ರದೇಶ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಇದರಲ್ಲಿ ಪ್ರಿಯಾಂಕಾಗಾಂಧಿ ನಿರ್ಣಾಯಕ ಪಾತ್ರವಹಿಸಲಿದ್ದಾರೆಂದು ಕಾಂಗ್ರೆಸ್ ಹೇಳಿದೆ ಎಂದು ವರದಿಯಾಗಿದೆ. ರಾಹುಲ್ ಗಾಂದಿಯ ನಿವಾಸದಲ್ಲಿ ಪ್ರಿಯಾಂಕಾರ ಉಪಸ್ಥಿತಿಯಲ್ಲಿ ನಡೆದ ಸಭೆಯ ನಂತರ ಪಕ್ಷದ ಹಿರಿಯ ನಾಯಕರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಪ್ರಿಯಾಂಕಾ ಪ್ರಚಾರಕ್ಕೆ ಬರುವುದು ಪಕ್ಷಕ್ಕೆ ಮಾತ್ರವಲ್ಲ, ಉತ್ತರಪ್ರದೇಶದ ಜನರಲ್ಲಿಯೂ ಆತ್ಮವಿಶ್ವಾಸವನ್ನು ತಂದುಕೊಡಲಿದೆ ಎಂದು ನಾಯಕರು ಹೇಳಿದ್ದಾರೆ. ಸಾಧ್ಯವಾದರೆ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೂ ಪ್ರಿಯಾಂಕ ಪ್ರಚಾರ ನಡೆಸಲಿದ್ದಾರೆ.
ಗುಲಾಂ ನಬಿ ಆಝಾದ್, ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಶೀಲಾ ದೀಕ್ಷಿತ್, ರಾಜ್ ಬಬ್ಬರ್ ಸಭೆಯಲ್ಲಿ ಭಾಗವಹಿಸಿದ್ದರು. ಚುನಾವಣೆಯಲ್ಲಿ ಸ್ವೀಕರಿಸಬೇಕಾದ ತಂತ್ರಗಳು ಮತ್ತು ನೋಟು ಅಮಾನ್ಯಗೊಳಿಸಿದ ಕೇಂದ್ರ ಸರಕಾರದ ಕ್ರಮದ ವಿರುದ್ಧ ವಿರುವ ಪ್ರತಿಭಟನೆಗಳ ಬಗ್ಗೆಯೂ ಸಭೆ ಚರ್ಚಿಸಿದೆ ಎಂದು ವರದಿ ತಿಳಿಸಿದೆ.
Next Story





