ಈ ರಿಯಲ್ ಲವ್ ಸ್ಟೋರಿಯ ಎದುರು ಎಲ್ಲಾ ಸಿನಿಮಾ ಸ್ಟೋರಿಗಳೂ ಸಪ್ಪೆ
8 ತಿಂಗಳು ಸೈಕಲ್‌ನಲ್ಲಿ ಸುತ್ತಿ ಪತ್ನಿಯನ್ನು ಪತ್ತೆ ಹಚ್ಚಿದ

ಆನ್‌ಲೈನ್‌ನಲ್ಲಿ ವೈರಲ್ ಆಗಿರುವ ಆಘಾತಕಾರಿ ವರದಿಯ ಪ್ರಕಾರ ಮೀರತ್ ಮೂಲದ ದಿನಗೂಲಿ ಕಾರ್ಮಿಕ ತಾಪೇಶ್ವರ ಸಿಂಗ್ ಒಂಭತ್ತು ತಿಂಗಳ ಹಿಂದೆ ಕಾಣೆಯಾದ ತಮ್ಮ ಪತ್ನಿ ಬಬಿತಾರಿಗಾಗಿ ಹುಡುಕುತ್ತಿದ್ದರು. ಕೊನೆಗೆ ಬಬಿತಶ ಹರಿದ್ವಾರದ ರಸ್ತೆಯಲ್ಲಿ ಭಿಕ್ಷೆ ಬೇಡುತ್ತಿದ್ದಾಗ ಪತ್ತೆಯಾಗಿದ್ದಾರೆ. ಈ ಪ್ರೇಮಕತೆ ಎಷ್ಟೊಂದು ರೋಮಾಂಚಕವಾಗಿದೆ ಎಂದರೆ ಇದೊಂದು ಸಿನಿಮಾವಾದರೆ ಅಚ್ಚರಿ ಪಡಬೇಕಾಗಿಲ್ಲ!
ತಾಪೇಶ್ವರ ಸಿಂಗ್ ಬಿಹಾರದಿಂದ ವಲಸೆ ಬಂದವರು. ಮಾನಸಿಕ ರೋಗಿಯಾಗಿದ್ದ ಬಬಿತಾರನ್ನು ಅವರು ಮದುವೆಯಾಗಿದ್ದರು. ಮೂರು ವರ್ಷಗಳ ಹಿಂದೆ ಬಬಿತಾಳ ಕುಟುಂಬ ಆಕೆಯನ್ನು ಉತ್ತರ ಪ್ರದೇಶದ ಬ್ರಿಜ್ಘಾಟ್‌ನ ಧರ್ಮಶಾಲೆಯಲ್ಲಿ ಬಿಟ್ಟು ಹೋಗಿದ್ದರು. ಹಾಗೆ ಭೇಟಿಯಾದ ಬಬಿತಾರನ್ನು ಸಿಂಗ್ ಮದುವೆಯಾಗಿದ್ದರು. ಆದರೆ ಕೆಲವು ತಿಂಗಳ ಹಿಂದೆ ಬಬಿತಾ ಕಣ್ಮರೆಯಾದಾಗ ಏನು ಮಾಡಬೇಕೆಂದೇ ಅವರಿಗೆ ತಿಳಿಯಲಿಲ್ಲ. ಆಕೆಯ ಪೋಸ್ಟರ್‌ಗಳನ್ನು ಹಿಡಿದು ಸೈಕಲ್ ಹೊಡೆಯುತ್ತಾ ದಣಿವರದೆ ಸುತ್ತಾಡಿ ಹುಡುಕಲಾರಂಭಿಸಿದರು. ಕೆಲವೊಮ್ಮೆ ಅನ್ನ ನೀರಿಲ್ಲದೆಯೇ ಬಬಿತಾರನ್ನು ಭೇಟಿಯಾಗುವ ಆಶಯದಲ್ಲಿ ಹುಡುಕಿದ್ದಾರೆ.
ಹೀಗೆ ಪತ್ನಿಗಾಗಿ ಸೈಕಲ್ ಹೊಡೆಯುತ್ತಾ ಮೈಲಿಗಟ್ಟಲೆ ಹುಡುಕುವುದು ಇದೇ ಮೊದಲೇನೂ ಆಗಿರಲಿಲ್ಲ. 1978ರಲ್ಲಿ ವ್ಯಕ್ತಿಯೊಬ್ಬರು ಖಂಡಗಳನ್ನೇ ದಾಟಿ ದಿಲ್ಲಿಯಿಂದ ಸ್ವೀಡನ್‌ನ ಗುಟೆನ್‌ಬರ್ಗ್‌ಗೆ ಹೋಗಿದ್ದರು. ನಾಲ್ಕು ತಿಂಗಳು ಮತ್ತು ಮೂರು ವಾರಗಳ ನಂತರ ಪತ್ನಿಯನ್ನು ವಾಪಸು ಪಡೆದಿದ್ದರು.
ಸಿಂಗ್ ವಿಷಯದಲ್ಲಿ ಅವರು ಇನ್ನೂ ಹೆಚ್ಚು ಕಾಲ ಕಾದ ಕಾರಣ ಚಿಂತೆ ಇನ್ನೂ ಹೆಚ್ಚಿನದಾಗಿತ್ತು. ಜನರಿಗೆ ಸುದ್ದಿ ಗೊತ್ತಾದಾಗ ಮಧ್ಯವರ್ತಿಯೊಬ್ಬ ಮಾನವ ಸಾಗಾಟಕ್ಕಾಗಿ ಬಬಿತಾರನ್ನು ಕರೆದೊಯ್ದಿರುವುದಾಗಿ ಆಪ್ತರೊಬ್ಬರು ಸುದ್ದಿ ಕೊಟ್ಟರು. ಹೀಗಾಗಿ ಬಬಿತಾರನ್ನು ಹುಡುಕಲು ಎಲ್ಲಾ ವೇಶ್ಯಾವಾಟಿಕೆ ಮತ್ತು ಕೆಂಪು ದೀಪ ಪ್ರಾಂತ ತಿರುಗಿದರು. ಆದರೆ ಆಕೆಯ ಮಾನಸಿಕ ರೋಗದಿಂದಾಗಿ ಇದರಿಂದ ಏನೂ ಫಲ ಸಿಗಲಿಲ್ಲ. ಸಿಂಗ್ ಪೊಲೀಸರಿಗೆ ದೂರು ಕೂಡ ಕೊಟ್ಟಿದ್ದಾರೆ. ಆದರೆ ಏನೂ ಪ್ರಯೋಜನವಾಗಲಿಲ್ಲ.
ನವೆಂಬರ್ 13ರಂದು ಸಿಂಗ್‌ಗೆ ಬೃಜ್‌ಘಾಟ್‌ನ ವ್ಯಕ್ತಿಯೊಬ್ಬರಿಂದ ಕರೆ ಬಂದಿತ್ತು. ಬಬಿತಾರನ್ನು ಹರಿದ್ವಾರದಲ್ಲಿ ಭಿಕ್ಷೆ ಬೇಡುತ್ತಿದ್ದಾಗ ಕಂಡಿದ್ದಾಗಿ ಅವರು ಹೇಳಿದ್ದರು. ಸಿಂಗ್ ತಕ್ಷಣವೇ ಅಲ್ಲಿಗೆ ಹೋದರೂ ಇಡೀ ದಿನ ಬಬಿತಾರನ್ನು ಕಾಣಲು ಸಾಧ್ಯವಾಗಲಿಲ್ಲ. ಹಿಂದಿ ಸಿನಿಮಾದ ಕ್ಲೈಮಾಕ್ಸ್‌ನಂತೆ ಸಂಜೆ ಸಿಂಗ್ ಕೊನೆಗೂ ಬಬಿತಾ ಹರಿದ ಬಟ್ಟೆಯಲ್ಲಿ ಕುಳಿತಿರುವುದನ್ನು ಕಂಡರು.
ಮೊದಲಿಗೆ ನನಗೆ ನಂಬಲೇ ಸಾಧ್ಯವಾಗದೆ ಕಣ್ಣುಗಳನ್ನು ಉಜ್ಜಿಕೊಂಡೆ. ಆಕೆ ಹರಿದು ಹೋದ ಬಟ್ಟೆಗಳಲ್ಲಿದ್ದರು. ಆಕೆಯನ್ನು ಕಾಣುತ್ತಲೇ ನಿಶ್ಚೇತನಾಗಿಬಿಟ್ಟೆ. ಎಂಟು ತಿಂಗಳಿಂದ ಹಗಲು ರಾತ್ರಿ ಆಕೆಯನ್ನು ಹುಡುಕಿದ್ದೇನೆ. ನನ್ನ ಬಳಿ ಇದ್ದ ಸಣ್ಣ ಉಳಿತಾಯವನ್ನೂ ಬಳಸಿಕೊಂಡು ಹುಡುಕಿದ್ದೇನೆ. ಕೊನೆಗೂ ಆಕೆ ಸಿಕ್ಕಳು ಎನ್ನುತ್ತಾರೆ ಸಿಂಗ್.
ಈ ಕತೆ ನಿಜವೇ ಎಂದು ತಿಳಿದುಕೊಳ್ಳಲು ಸಿಂಗ್ ಮತ್ತು ಬಬಿತಾರ ಇರವು ಯಾರಿಗೂ ಗೊತ್ತಿಲ್ಲ. ಆದರೆ ಅಂತರ್ಜಾಲದಲ್ಲಿ ಈ ಕತೆ ನಿಜ ಪ್ರೀತಿಯ ಕುರುಹಾಗಿ ಶೇರ್ ಆಗುತ್ತಿದೆ.
ಕೃಪೆ:indianexpress.com







