ಮೋದಿಗೆ ಕೇರಳ ಪಾಠ ಕಲಿಸಲಿದೆ: ಸಚಿವ ಥಾಮಸ್ ಐಸಾಕ್

ತಿರುವನಂತಪುರಂ, ನ. 19: ಯುಕ್ತಿಯಿಂದ ನರೇಂದ್ರ ಮೋದಿಗೆ ಕೇರಳ ಪಾಠಕಲಿಸಲಿದೆ ಎಂದು ಕೇರಳ ವಿತ್ತಸಚಿವ ಥಾಮಸ್ ಐಸಾಕ್ ಹೇಳಿದ್ದಾರೆಂದು ವರದಿಯಾಗಿದೆ. ಸಹಕಾರಿ ಬ್ಯಾಂಕುಗಳನ್ನುನಾಶಪಡಿಸುವ ಕೇಂದ್ರ ಸರಕಾರದ ಕ್ರಮದ ವಿರುದ್ಧ ತಿರುವನಂತಪುರಂ ರಿಸರ್ವ್ ಬ್ಯಾಂಕ್ ಮುಂಭಾಗದಲ್ಲಿ ನಡೆದ ಸತ್ಯಾಗ್ರಹದಲ್ಲಿ ಅವರು ಮಾತಾಡುತ್ತಿದ್ದರು. ಜನರನ್ನು ಅಲೆಯುವಂತೆ ಮಾಡಿದ ಮೋದಿ ಸರಕಾರದ ತಂತ್ರಕ್ಕೆ ಕೇರಳ ಬದಲಿ ತಂತ್ರವನ್ನು ಹೂಡಲಿದೆ. ಸಹಕಾರಿ ಬ್ಯಾಂಕ್‌ನಿಂದ ಹಣ ಪಡೆಯಲು ಆಗದ ಪರಿಸ್ಥಿತಿಯಲ್ಲಿ ಬದಲಿ ಚೆಕ್ ನೀಡಿ ವಿನಿಮಯ ನಡೆಸುವ ರೀತಿಯನ್ನು ಕೇರಳದಲ್ಲಿ ಜಾರಿಗೆ ತರಲಾಗುವುದು.
ಶನಿವಾರ ಜಿಲ್ಲಾ ಬ್ಯಾಂಕ್ ಅಧ್ಯಕ್ಷರು ಮತ್ತು ಸಹಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು. ಮುಖ್ಯಮಂತ್ರಿ ಹೋಗಿ ಮನವಿ ಸಲ್ಲಿಸಿ ಮರಳಿ ಬರುವ ಮೊದಲೇ ವಿರುದ್ಧ ಆದೇಶ ಹೊರಡಿಸಿದ ಹಠಮಾರಿತನವನ್ನು ಕೇರಳ ಅಂಗೀಕರಿಸುವುದಿಲ್ಲ.ರಾಜ್ಯಸರಕಾರಗಳ ಅಧಿಕಾರವನ್ನು ಮರೆತು ತಾವು ಏನು ಬೇಕಾದರೂ ತೀರ್ಮಾನಿಸುತ್ತೇವೆ. ನಮ್ಮ ತೀರ್ಮಾನದಂತೆ ನಡೆದುಕೊಳ್ಳಬೇಕು ಎಂದು ದಿಲ್ಲಿ ತೀರ್ಮಾನಿಸಿದರೆ ಅದನ್ನು ಕೇಳಲು ಕೇರಳ ಸಿದ್ಧವಿಲ್ಲ. ಅದನ್ನೆಲ್ಲ ಜನರನ್ನುಸೇರಿಸಿ ಪ್ರತಿರೋಧಿಸಲಾಗುವುದು. ಸಹಕಾರಿ ಬ್ಯಾಂಕ್‌ಗಳನ್ನು ನಾಶಪಡಿಸುವ ಬಿಜೆಪಿಯ ಷಡ್ಯಂತ್ರ ನಡೆಯುತ್ತಿದೆ. ಸಹಕಾರಿ ಬ್ಯಾಂಕಿನಲ್ಲಿ ಕಳ್ಳನೋಟು ಇವೆ ಎಂದಾದರೆ ಇಕಾನಮಿಕ್ ಎನ್‌ಫೋರ್ಸ್‌ಮೆಂಟ್ ವಿಭಾಗವನ್ನು ಹೊಂದಿರುವ ಬಿಜೆಪಿಸರಕಾರ ಅದನ್ನು ಪತ್ತೆ ಹಚ್ಚುವ ಕೆಲಸವನ್ನು ಮಾಡಬಹುದು.
ಅರುಣ್‌ಜೈಟ್ಲಿಮತ್ತುಮುಖ್ಯಮಂತ್ರಿ ಪಿಣರಾಯಿವಿಜಯನ್‌ರ ಭೇಟಿಯಿಂದ ಸಮಸ್ಯೆ ಪರಿಹಾರವಾಗಬಹುದೆಂದು ಭಾವಿಸಿದ್ದೆವು. ಆದರೆ ಅಂದು ಸಂಜೆ ಜಿಲ್ಲಾ ಸಹಕಾರಿ ಬ್ಯಾಂಕ್‌ಗಳಿಗಿರುವ ಅಧಿಕಾರವನ್ನು ಕೂಡಾ ಹಿಂದೆಗೆದು ರಿಸರ್ವ್‌ಬ್ಯಾಂಕ್ ಆದೇಶ ಹೊರಡಿಸಿತು. ಅಂಬಾನಿ,ಅದಾನಿ ರಿಸರ್ವ್‌ಬ್ಯಾಂಕ್ ಡೆಪ್ಯುಟಿ ಗವರ್ನರ್ ಆಗಿದ್ದಾರೆ. ಅವರಿಗೆ ಕೇರಳದ ಸಹಕಾರಿ ಕ್ಷೇತ್ರ ಕಣ್ಣಿನಹುಣ್ಣಾಗಿದೆ ಎಂದು ಥಾಮಸ್ ಐಸಾಕ್ ಹೇಳಿದ್ದಾರೆಂದು ವರದಿ ತಿಳಿಸಿದೆ.







