Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಬ್ರಿಟನ್ ನಲ್ಲೂ ಯಾರದೋ ದುಡ್ಡಿನಲ್ಲಿ...

ಬ್ರಿಟನ್ ನಲ್ಲೂ ಯಾರದೋ ದುಡ್ಡಿನಲ್ಲಿ ಎಲ್ಲಮ್ಮನ ಜಾತ್ರೆ

ವಾರ್ತಾಭಾರತಿವಾರ್ತಾಭಾರತಿ19 Nov 2016 2:50 PM IST
share
ಬ್ರಿಟನ್ ನಲ್ಲೂ  ಯಾರದೋ ದುಡ್ಡಿನಲ್ಲಿ ಎಲ್ಲಮ್ಮನ ಜಾತ್ರೆ

ಬ್ರಿಟನ್ ಅರಮನೆ ನವೀಕರಣವಾಗುತ್ತದೆ. ಈ ಕೆಲಸ ಮುಂದಿನ ಏಪ್ರಿಲ್‌ನಲ್ಲಿ ನಡೆಯುವಾಗ ರಾಣಿ ಅರಮನೆಯಲ್ಲೇ ಇರುತ್ತಾರೆ. ಹಳತಾದ ಕೇಬಲ್‌ಗಳು, ಸತುವಿನ ಪೈಪ್‌ಗಳು, ವೈರಿಂಗ್ ಮತ್ತು ಬಾಯ್ಲರ್‌ಗಳನ್ನು ಬದಲಿಸಲಾಗುತ್ತದೆ. 60 ವರ್ಷಗಳಲ್ಲಿ ಈ ನವೀಕರಣ ಮೊದಲ ಬಾರಿಗೆ ಆಗುತ್ತಿರುವ ಕಾರಣ ಬೆಂಕಿ ಮತ್ತು ನೀರಿನ ಅಪಾಯದ ಭಯವೂ ಇದೆ.

ಪ್ರಧಾನಿ ಮತ್ತು ಚಾನ್ಸಲರ್ ಸೇರಿದಂತೆ ಅರಮನೆಯ ಟ್ರಸ್ಟಿಗಳು ಈ ನವೀಕರಣದ ಕೆಲಸಗಳಿಗೆ ಅನುದಾನದಲ್ಲಿ ತಾತ್ಕಾಲಿಕವಾಗಿ ಏರಿಕೆ ಮಾಡಲು ತೀರ್ಮಾನಿಸಿದ್ದಾರೆ. ಈ ಆಸ್ತಿಯ ಒಟ್ಟು ಆದಾಯದ ಶೇ. 15ರಷ್ಟನ್ನು ಈಗ ಅನುದಾನವಾಗಿ ಅರಮನೆಗೆ ನೀಡಲಾಗುತ್ತದೆ. ಅಂದರೆ ಸುಮಾರು 43 ಮಿಲಿಯ ಪೌಂಡ್‌ಗಳನ್ನು ಕೊಡಲಾಗುತ್ತದೆ. ನವೀಕರಣ ಕೆಲಸಕ್ಕಾಗಿ ಲಾಭದಲ್ಲಿ ಶೇ. 25ರಷ್ಟನ್ನು ಅನುದಾನವಾಗಿ ನೀಡಲು ಟ್ರಸ್ಟಿಗಳು ನಿರ್ಧರಿಸಿದ್ದಾರೆ. ಇದಕ್ಕೆ ಸಂಸದರ ಅಂಗೀಕಾರದ ಅಗತ್ಯವಿದೆ.

ಹೊರಗಿನಿಂದ ಸುಂದರವಾಗಿ ಕಂಡರೂ ಬಕಿಂಗ್ಹಾಮ್ ಅರಮನೆ ಕೃಶವಾಗಿದೆ. ಹಿಂಬದಿ ಕಾರಿಡಾರ್‌ಗಳಲ್ಲಿ ನಡೆಯುವಾಗ ಅದರ ಅನುಭವವಾಗುತ್ತದೆ. ನವೀಕರಣದ ಕೆಲಸ ಬಹಳ ಹಿಂದಿನಿಂದಲೇ ವಿಳಂಬವಾಗುತ್ತಲೇ ಬಂದಿದೆ. ಈಗ ಕಟ್ಟಡದಲ್ಲಿ ಇಲೆಕ್ಟ್ರಿಕಲ್, ಪ್ಲಂಬಿಂಗ್ ಮತ್ತು ಹೀಟಿಂಗ್ ಸಮಸ್ಯೆಗಳು ಇವೆ. 1950ರ ನಂತರ ಇದನ್ನು ನವೀಕರಿಸಲಾಗಿಲ್ಲ. ಅರಮನೆಯನ್ನು ಹೀಗೆ ಕೃಶವಾಗಿ ಬಿಡುತ್ತಿರುವುದೇಕೆ ಮತ್ತು ಸೇವೆಗಳನ್ನು ಆಗಾಗ್ಗೆ ಅಪ್‌ಡೇಟ್ ಮಾಡುತ್ತಲೇ ಇದ್ದರೆ ವೆಚ್ಚದಲ್ಲೂ ಕಡಿಮೆ ಮಾಡಬಹುದು ಎನ್ನುವ ಮಾತೂ ಕೇಳಿ ಬಂದಿದೆ.

ನವೀಕರಣದ ವಿವರ ನೀಡಿದ ಅರಮನೆ ಮೂಲಗಳು ಇಂತಹ ಕಷ್ಟ ಕಾಲದಲ್ಲಿ ಅದರ ಅಗತ್ಯವೇನೂ ಎಂದು ವಿವರಿಸುವಾಗ ಬಹಳ ಜಾಗರೂಕರಾಗಿದ್ದರು. ರಾಷ್ಟ್ರಕ್ಕಾಗಿ ಈ ಖರ್ಚು ಮಾಡಲಾಗುತ್ತದೆ ಎಂದು ಜನರು ತಿಳಿದುಕೊಂಡು ಸಮಾಧಾನಕರವಾಗಿ ಸ್ವೀಕರಿಸಿದರೆ ಉತ್ತಮ ಎಂದು ಅರಮನೆ ಅಭಿಪ್ರಾಯಪಟ್ಟಿದೆ. "ಭವಿಷ್ಯದಲ್ಲಿ ದೊಡ್ಡ ಪ್ರಮಾಣದ ದುರಂತವನ್ನು ತಪ್ಪಿಸಲು ಈಗ ಈ ಕ್ರಮ ತೆಗೆದುಕೊಳ್ಳುವುದು ಅಗತ್ಯ" ಎಂದು ಟ್ರೆಶರಿ ಜಾನ್ಸ್ಟೋನ್ ಬರ್ಟ್ ಹೇಳಿದ್ದಾರೆ. "ಅಗ್ನಿ ಅನಾಹುತ, ಪ್ರವಾಹ ಮತ್ತು ಇತರ ಹಾನಿಗಳಿಂದ ಕಟ್ಟಡವನ್ನು ರಕ್ಷಿಸಲು ಈ ತುರ್ತು ನವೀಕರಣದ ಅಗತ್ಯವಿದೆ" ಎಂದು ಟ್ರೆಶರಿ ಹೇಳಿದ್ದಾರೆ.

1992ರಲ್ಲಿ ಅಗ್ನಿ ಅನಾಹುತದಿಂದ ವಿಂಡ್ಸರ್ ಕ್ಯಾಸಲ್‌ಗೆ ಹಾನಿಯಾಗಿರುವುದನ್ನು ಅವರು ಬೊಟ್ಟು ಮಾಡಿದರು. "ಅದರ ನವೀಕರಣಕ್ಕೆ ಐದು ವರ್ಷ ಹಿಡಿಯಿತು. ಬಕಿಂಗ್ ಹ್ಯಾಮ್ ಅರಮನೆಗೆ ಅಂತಹ ಹಾನಿಯಾದಲ್ಲಿ ಒಂದು ವಿಭಾಗಕ್ಕೇ 250 ಮಿಲಿಯ ಪೌಂಡ್ ಖರ್ಚಾಗಬಹುದು" ಎನ್ನುತ್ತಾರೆ ಟ್ರೆಶರಿ. "ಅರಮನೆ ಬಾಯ್ಲರ್‌ಗಳು 33 ವರ್ಷಗಳಷ್ಟು ಹಳೇಯವು ಮತ್ತು ಅವುಗಳಿಗೆ ಸ್ಪೇರ್ ಭಾಗಗಳನ್ನು ಹುಡುಕುವುದೂ ಬಹಳ ಕಷ್ಟ" ಎಂದು ಅರಮನೆ ಮೂಲಗಳು ಹೇಳಿವೆ.

ವೈರಿಂಗ್‌ನ ಬಹುತೇಕವನ್ನು ಅತೀ ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಬಹುತೇಕ ಮೆಕ್ಯಾನಿಕಲ್ ಮತ್ತು ಇಲೆಕ್ಟ್ರಿಕಲ್ ವ್ಯವಸ್ಥೆ 40 ವರ್ಷಗಳಷ್ಟು ಹಳೇಯದಾಗಿದ್ದು ಅಪಾಯಕಾರಿಯಾಗಿವೆ ಎನ್ನುವುದು ಅರಮನೆಯ ಮೂಲಗಳ ಸಮಜಾಯಿಶಿ. ಆದರೆ ರಾಜಪ್ರಭುತ್ವವನ್ನು ನಿವಾರಿಸಬೇಕು ಎಂದು ಪ್ರಚಾರಾಭಿಯಾನ ಕೈಗೊಂಡಿರುವ ರಿಪಬ್ಲಿಕ್ ಸಮೂಹದ ಪ್ರಕಾರ ನವೀಕರಣ ಎನ್ನುವುದು ಅರಮನೆ ಹಣಕಾಸು ವ್ಯವಹಾರಗಳನ್ನು ಆರು ವರ್ಷಗಳ ಕಾಲ ದುರುಪಯೋಗಪಡಿಸಿಕೊಂಡಿರುವ ಧೋಷಾರೋಪಣೆಯಾಗಿದೆ. "ವರ್ಷವಿಡೀ ಅರಮನೆಗೆ ಪ್ರವಾಸಿಗರಿಗೆ ಅವಕಾಶ ಕೊಟ್ಟು ಬರುವ ಹಣದಲ್ಲಿ ರಿಪೇರಿ ಮಾಡಿಕೊಳ್ಳಲು ಸಂಸದರು ಹೇಳುತ್ತಲೇ ಬಂದಿದ್ದರು ಅರಮನೆ ಅದನ್ನು ಒಪ್ಪಿಕೊಂಡಿಲ್ಲ" ಎಂದು ಅವರು ಹೇಳುತ್ತಾರೆ.

ಅರಮನೆಯಲ್ಲಿ ರಾಣಿ ಬಕಿಂಗ್ ಹ್ಯಾಮ್ ಅರಮನೆಯಲ್ಲಿ ದೊಡ್ಡ ದೊಡ್ಡ ಅತಿಥಿಗಳನ್ನು ಸ್ವಾಗತಿಸುತ್ತಾರೆ. ಮನೆಯಲ್ಲಿದ್ದರೆ ಅವರು ವಾರಕ್ಕೊಮ್ಮೆ ಪ್ರಧಾನಿಯನ್ನು ಭೇಟಿಯಾಗುತ್ತಾರೆ. ಪ್ರತೀ ವರ್ಷ 50,000 ಮಂದಿ ಅತಿಥಿಗಳು ಅವರನ್ನು ಬೋಜನಕೂಟಕ್ಕೆ, ಗಾರ್ಡನ್ ಪಾರ್ಟಿ ಮತ್ತು ರಿಸೆಪ್ಷನ್‌ಗಳಿಗೆಂದು ಇರುತ್ತಾರೆ. ಅರಮನೆಯಲ್ಲಿ 775 ಕೋಣೆಗಳಿವೆ. 19 ಸ್ಟೇಟ್ ರೂಂಗಳು, 52 ರಾಯಲ್ ಮತ್ತು ಅತಿಥಿ ಬೆಡ್‌ರೂಂಗಳು, 188 ಸಿಬ್ಬಂದಿ ಬೆಡ್‌ರೂಂಗಳು, 92 ಕಚೇರಿಗಳು ಮತ್ತು 78 ಬಾತ್‌ರೂಂಗಳಿವೆ. 1837ರಿಂದ ಇದು ಬ್ರಿಟಿಷ್ ರಾಜಮನೆತನದ ಅಧಿಕೃತ ಲಂಡನ್ ನಿವಾಸವಾಗಿದೆ. ಹೀಗಾಗಿ ಐತಿಹಾಸಿಕ ದಂತಕತೆಗಳು ಇಲ್ಲಿಗೆ ಭೇಟಿ ನೀಡಿದ್ದಾರೆ. ಚಾರ್ಲ್ಸ್ ಡಿಕನ್ಸ್, ಅಮೆರಿಕದ ಅಧ್ಯಕ್ಷರಾದ ವುಡ್‌ರೋ ವಿಲ್ಸನ್, ಜಾನ್ ಎಫ್ ಕೆನಡಿ, ಮಹಾತ್ಮಾ ಗಾಂಧಿ, ನೀಲ್ ಆರ್ಮಸ್ಟ್ರಾಂಗ್ ಮತ್ತು ನೆಲ್ಸನ್ ಮಂಡೇಲಾ ಇಲ್ಲಿಗೆ ಆತಿಥ್ಯ ಪಡೆದಿದ್ದಾರೆ. ದೇಶ ರಾಣಿಯ ಮೇಲಿಟ್ಟಿರುವ ನಂಬಿಕೆಗೆ ಸೂಚಕವಾಗಿದೆ ಅರಮನೆ. ಆದರೆ ಅದನ್ನು ನಿಭಾಯಿಸುವ ಹೊಣೆ ಸರ್ಕಾರದ ಮೇಲಿದೆ.

ಹಂತ ಹಂತವಾಗಿ ರಿಪೇರಿ ಕೆಲಸ ನಡೆಯಲಿದೆ. ಒಂದು ವಿಭಾಗದ ನವೀಕರಣ ಒಮ್ಮೆಗೆ ನಡೆಯಲಿದೆ. ಪ್ರತೀ ಹಂತಕ್ಕೂ ಪ್ರತ್ಯೇಕ ಕಾಂಟ್ರಾಕ್ಟ್ ಕೊಡಲಾಗುತ್ತಿದೆ. ಹೀಗೆ ಹಣಕಾಸು ಮತ್ತು ಪ್ರಾಯೋಗಿಕ ಅಪಾಯಗಳನ್ನು ನಿಭಾಯಿಸಾಗುತ್ತಿದೆ ಎಂದು ಅರಮನೆ ಹೇಳಿದೆ.

2014ರಲ್ಲಿ ಸಂಸದರು ಅರಮನೆ ನಿತ್ಯದ ಖರ್ಚಿಗೆ ಹಣಕಾಸು ದುರುಪಯೋಗದ ಆರೋಪ ಹೊರಿಸಿದ್ದರು. ರಾಷ್ಟ್ರೀಯವಾಗಿ ಮುಖ್ಯವಾಗಿರುವ ಆಸ್ತಿಯನ್ನು ಅರಮನೆ ಸರಿಯಾಗಿ ಗಮನಹರಿಸುತ್ತಿಲ್ಲ. ಅರಮನೆಯ ಶೇ. 36ರಷ್ಟು ಆಸ್ತಿ ತೃಪ್ತಿಕರ ಸ್ಥಿತಿಯಲ್ಲಿಲ್ಲ ಎಂದು ಸಾರ್ವಜನಿಕ ಖಾತೆ ಸಮಿತಿ ಹೇಳಿದೆ. ಆದರೆ ನವೀಕರಣಕ್ಕೆ ಭರಿಸಿದ ಪ್ರತೀ ವೆಚ್ಚವನ್ನೂ ಅತ್ಯುತ್ತಮವಾಗಿ ಬಳಸಿಕೊಳ್ಳುವುದಾಗಿ ಟ್ರೆಶರಿಯ ಮುಖ್ಯ ಕಾರ್ಯದರ್ಶಿ ಡೇವಿಡ್ ಗೌಕ್ ಹೇಳಿದ್ದಾರೆ. "ನಮ್ಮ ಪರಂಪರೆ, ಅರಮನೆಯ ದಂತಕತೆಗಳಿಂದಾಗಿ ಪ್ರವಾಸಿಗರು ದೇಶಕ್ಕೆ ಬರುತ್ತಾರೆ. ಪೌಂಡ್‌ಗಟ್ಟಲೆ ಖರ್ಚು ಮಾಡಿ ಇಲ್ಲಿಗೆ ಬಂದು ಸಾವಿರಾರು ಉದ್ಯೋಗಳನ್ನು ಸೃಷ್ಟಿಸಿದ್ದಾರೆ. ಹೀಗಾಗಿ ವಿಶೇಷ ವಾಸ್ತುಶೈಲಿ ಮತ್ತು ಐತಿಹಾಸಿಕವಾದ ರೀತಿಯಲ್ಲೇ ಕಟ್ಟಡ ಭವಿಷ್ಯದಲ್ಲೂ ಇರುವುದನ್ನು ನಾವು ಖಾತರಿಗೊಳಿಸಬೇಕು" ಎಂದು ಅವರು ಹೇಳೀದ್ದಾರೆ. ಈಗಿನ ನವೀಕರಣದ ನಂತರ 50 ವರ್ಷಗಳವರೆಗೆ ರಿಪೇರಿ ಕೆಲಸ ಇರುವುದಿಲ್ಲ ಎಂದು ಹೇಳಲಾಗಿದೆ.

ಕ್ರೌನ್ ಎಸ್ಟೇಟ್ ಎಂದರೇನು?

ಇದು ಒಂದು ಸ್ವತಂತ್ರ ವಾಣಿಜ್ಯ ಆಸ್ತಿ. ಇಂಗ್ಲೆಂಡಿನ ಅತೀ ದೊಡ್ಡ ಆಸ್ತಿಯಾಗಿದೆ. ಬಹುತೇಕ ಆಸ್ತಿ ಲಂಡನ್‌ನಲ್ಲೇ ಇದೆ. ಆದರೆ ಎಸ್ಟೇಟ್ ಆಸ್ತಿ ಸ್ಕಾಟ್ಲೆಂಡ್, ವೇಲ್ಸ್ ಮತ್ತು ಉತ್ತರ ಐರ್ಲೆಂಡ್‌ನಲ್ಲೂ ಇದೆ. ಇದರಲ್ಲಿ ವಿಂಡ್ಸರ್ ಗ್ರೇಟ್ ಪಾರ್ಕ್ ಮತ್ತು ಆಸ್ಕಾಟ್ ರೇಸ್‌ಕೋರ್ಸ್ ಕೂಡ ಸೇರಿದೆ. ಆದರೆ ಬಹುತೇಕ ಆಸ್ತಿಯಲ್ಲಿ ವಸತಿ ಸಮುಚ್ಛಯವಿದೆ. ವಾಣಿಜ್ಯ ಕಚೇರಿಗಳು, ಅಂಗಡಿಗಳು, ಉದ್ಯಮಗಳು ಮತ್ತು ರಿಟೇಲ್ ಪಾರ್ಕ್‌ಗಳಿವೆ. 1760ರಲ್ಲಿ ಈ ಎಸ್ಟೇಟ್ ಆರಂಭವಾಗಿದೆ. ಕ್ರೌನ್ ಎಸ್ಟೇಟ್‌ನ ಹೆಚ್ಚುವರಿ ಆದಾಯ ಟ್ರೆಶರಿಗೆ ಹೋಗುತ್ತದೆ. ಬದಲಾಗಿ ವಾರ್ಷಿಕವಾಗಿ ಅರಮನೆಗೆ ಅನುದಾನ ಪಾವತಿಯಾಗುತ್ತದೆ. ಅರಮನೆ ರಾಣಿಯ ಮನೆತನಕ್ಕೆ ಸೇರಿದ್ದರೂ ಅವರು ಅದನ್ನು ಮಾರುವಂತಿಲ್ಲ ಮತ್ತು ಅದರ ಲಾಭವೂ ಟ್ರಶರಿಗೆ ಹೋಗುತ್ತದೆ. ಮನೆತನಕ್ಕೆ ಶೇ. 15ರಷ್ಟು ವಾರ್ಷಿಕ ಆದಾಯವನ್ನು ರಾಜಧನವಾಗಿ ಕೊಡಲಾಗುತ್ತದೆ.

ಕೃಪೆ:www.bbc.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X