ಸೌದಿ ಅರೇಬಿಯ: ಎರಡೂವರೆ ಲಕ್ಷ ಮಾದಕವಸ್ತು ಮಾತ್ರೆಗಳು ವಶ

ಜಿದ್ದ, ನ. 19: ಮಹಿಳೆಯರ ಪಾದರಕ್ಷೆಯೊಳಗೆ ಅಡಗಿಸಿ ಮಾದಕವಸ್ತು ಮಾತ್ರೆಗಳನ್ನು ಕಳ್ಳಸಾಗಾಟನ ನಡೆಸುವ ಪ್ರಯತ್ನವನ್ನು ಕಸ್ಟಂಸ್ ಅಧಿಕಾರಿಗಳು ವಿಫಲಗೊಳಿಸಿದ್ದಾರೆಂದು ವರದಿಯಾಗಿದೆ. ಎರಡೂವರೆ ಲಕ್ಷ ಅಂಫಿಟಮಿನ್ ಮಾತ್ರೆಗಳನ್ನು ಜಿದ್ದ ಬಂದರಿನಿಂದ ವಶಪಡಿಸಿಕೊಳ್ಳಲಾಗಿದೆ. ಪಾದರಕ್ಷೆಯ 346 ಪೆಟ್ಟಿಗೆಗಳಲ್ಲಿ ಈಮಾತ್ರೆಗಳನ್ನು ಇರಿಸಲಾಗಿತ್ತು.
ಪೆಟ್ಟಿಗೆಗಳೊಳಗಿದ್ದ ಎಲ್ಲ ಪಾದರಕ್ಷೆಗಳಲ್ಲಿ ಮಾತ್ರೆಗಳನ್ನು ಅಡಗಿಸಿಡಲಾಗಿತ್ತು. ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಪಶ್ಚಿಮ ವಲಯ ಕಸ್ಟಂಸ್ ಜನರಲ್ ಹೇಳಿದ್ದಾರೆ. ಜೊತೆ ಕಸ್ಟಂಸ್ ಅಧಿಕಾರಿಗಳ ಕರ್ತವ್ಯಪ್ರಜ್ಞೆಯನ್ನು ಅವರು ಪ್ರಶಂಸಿದ್ದಾರೆಂದು ವರದಿ ತಿಳಿಸಿದೆ.
Next Story





