ಬಣ್ಣ ಮಾಸಿದ ಹೊಸ 500 ರೂ. ನೋಟು ?

ಮುಂಬೈ, ನ. 19 : ಹಳೆ 500, 1000 ರೂ. ನೋಟುಗಳ ರದ್ದತಿ ಬಳಿಕ ಜನರು ಹೊಸ 500 ರೂ. ನೋಟಿಗೆ ಕಾತರರಾಗಿ ಕಾಯುತ್ತಿರುವಂತೆಯೇ ಈಗ ಇನ್ನೊಂದು ಕಹಿ ಸುದ್ದಿ ಬಂದಿದೆ. ದೇಶಾದ್ಯಂತ ಇನ್ನೂ ಹೊಸ 500 ರೂ. ನೋಟು ಸಿಗಲು ಪ್ರಾರಂಭವಾಗಿಲ್ಲ. ಯಾವಾಗ ಎಲ್ಲೆಡೆ ಸಿಗುತ್ತದೆ ಎಂಬ ಖಚಿತ ಮಾಹಿತಿಯೂ ಇಲ್ಲ. ಆದರೆ ಮುಂಬೈ ಎಟಿಎಂ ಒಂದರಲ್ಲಿ ಬಂದಿರುವ ಹೊಸ 500 ರೂ. ನೋಟು ಸಮರ್ಪಕ ಮುದ್ರಣವಾಗಿಲ್ಲ ಅಥವಾ ಆಗಿರುವ ಮುದ್ರಣ ಗುಣಮಟ್ಟ ಸರಿಯಿಲ್ಲ ಎಂಬ ಮಾತು ಕೇಳಿ ಬಂದಿದೆ.
ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರು ಈ ಬಗ್ಗೆ ತಮ್ಮ ಫೇಸ್ ಬುಕ್ ನಲ್ಲಿ ಚಿತ್ರ ಸಹಿತವಾಗಿ ಬರೆದಿದ್ದಾರೆ. ಅವರ ಪ್ರಕಾರ ಮುಂಬೈಯ ಎಚ್ ಡಿ ಎಫ್ ಸಿ ಬ್ಯಾಂಕ್ ಒಂದರ ಎಟಿಎಂ ಒಂದರಲ್ಲಿ ಸಿಕ್ಕಿರುವ ಹೊಸ 500 ರೂ. ನೋಟು ಪೂರ್ಣ ಮುದ್ರಣವಾಗಿಲ್ಲ ಅಥವಾ ಮುದ್ರಿತ ಬಣ್ಣ ಆಗಲೇ ಮಾಸಿ ಹೋಗಿದೆ !
ಇಂತಹ ಮೂರು ನೋಟುಗಳ ಚಿತ್ರವನ್ನೂ ಅವರು ಪೋಸ್ಟ್ ಮಾಡಿದ್ದಾರೆ . ಅದು ಇಲ್ಲಿದೆ. ಅಧಿಕೃತವಾಗಿ ಇನ್ನೂ ಇದು ದೃಢವಾಗಿಲ್ಲ ಹಾಗು ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.
Next Story







