ಯುನೈಟೆಡ್ ಟೊಯೋಟಾ: ಹೊಸ ಫಾರ್ಚುನರ್ ಕಾರಿನ ಕೀಲಿಕೈ ಗ್ರಾಹಕರಿಗೆ ಹಸ್ತಾಂತರ

ಮಂಗಳೂರು, ನ.19: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಗ್ರಾಹಕರಿಗೆ ನಿರಂತರ ಸೇವೆ ನೀಡುತ್ತಾ ಜನಪ್ರಿಯವಾಗಿರುವ ಟೊಯೋಟಾ ಕಾರುಗಳ ಅಧಿಕೃತ ಮಾರಾಟಗಾರರೂ, ಸೇವಾದಾರರೂ ಆದ ಯುನೈಟೆಡ್ ಟೊಯೋಟಾ ತನ್ನ ಮೊದಲ ಮೂರು ಗ್ರಾಹಕರಿಗೆ ಇತ್ತೀಚೆಗೆ ಮಾರುಕಟ್ಟೆಗೆ ಬಿಡುಗಡೆಯಾದ ಹೊಸ ಟೊಯೋಟಾ ಫಾರ್ಚುನರ್ ಕಾರಿನ ಕೀಲಿಕೈಯನ್ನು ಹಸ್ತಾಂತರಿಸಿದರು. ಸಂಸ್ಥೆಯ ಅಧ್ಯಕ್ಷ ಎ.ಪ್ರಭಾಕರ ರಾವ್, ಫೈನಾನ್ಸ್ ಡೈರೆಕ್ಟರ್ ಎ.ಪ್ರಕಾಶ್ ರಾವ್, ಆಡಳಿತ ನಿರ್ದೇಶಕ ಎ.ಗಣೇಶ್ ರಾವ್, ಸೇಲ್ಸ್ ಮತ್ತು ಮಾರ್ಕೆಟಿಂಗ್ ಡೈರೆಕ್ಟರ್ ಎ. ರಾಮ್‌ಗೋಪಾಲ್ ರಾವ್, ನಿರ್ದೇಶಕ ಎ.ವರುಣ್‌ರಾವ್ ಮತ್ತು ಎ.ವಿಕ್ರಮ್ ರಾವ್ ಉಪಸ್ಥಿತರಿದ್ದರು.
ಯುನೈಟೆಡ್ ಟೊಯೋಟಾದ ಪಡೀಲ್‌ನ ಶೋರೂಂನಲ್ಲಿ ಗ್ರಾಹಕರಾದ ಕನ್ಸಲ್ಟೆಂಟ್ ರೇಡಿಯೋಲೊಜಿಸ್ಟ್ ಮತ್ತು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಮಂಗಳೂರು ಶಾಖೆಯ ಅಧ್ಯಕ್ಷ ಡಾ.ರಾಘವೇಂದ್ರ ಭಟ್ ಕೆ. ಮತ್ತು ಕ್ಲಾಸಿಕ್ ಪ್ರಮೋಟರ್ಸ್ ಆ್ಯಂಡ್ ಡೆವಲಪರ್ಸ್‌ನ ಮಾಲಕ ಕೆ.ಅಶೋಕಕುಮಾರ್ ಚೌಟರಿಗೆ ಕಾರಿನ ಕೀಲಿಕೈಯನ್ನು ಹಸ್ತಾಂತರಿಸಲಾಯಿತು.
ಉಡುಪಿಯ ಉದ್ಯಾವರದ ಯುನೈಟೆಡ್ ಟೊಯೋಟಾ ಶೋರೂಂನಲ್ಲಿ ಮೊದಲ ಗ್ರಾಹಕರಾದ ಕೊಲ್ಲೂರು ಮುಕಾಂಬಿಕಾ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಮತ್ತು ಕುಂದಾಪುರ ಎಜ್ಯುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಬಿ.ಎಂ.ಸುಕುಮಾರ ಶೆಟ್ಟಿಯವರಿಗೆ ಹಸ್ತಾಂತರಿಸಿದರು.
ಈ ಹೊಸ ಟೊಯೋಟಾ ಫಾರ್ಚುನರ್ ಅನೇಕ ವೈಶಿಷ್ಟ್ಯಗಳೊಂದಿಗೆ ಕೂಡಿದ್ದು ಡೀಸೆಲ್‌ನಲ್ಲಿ 2755 ಸಿಸಿ ಇಂಜಿನ್, ಪವರ್ 177 ಪಿಎಸ್ ಮತ್ತು ಟಾರ್ಕ್ 450 ಎನ್‌ಎಂ ಮತ್ತು ಪೆಟ್ರೋಲ್‌ನಲ್ಲಿ 2694 ಸಿಸಿ ಇಂಜಿನ್, ಪವರ್ 166 ಪಿಎಸ್ ಮತ್ತು ಟಾರ್ಕ್ 245 ಎನ್‌ಎಂ, 6 ಸ್ಪೀಡ್ ಸಿಕ್ವೆನ್ಶಿಯಲ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಅಥವಾ 6 ಸ್ಪೀಡ್ ಇಂಟೆಲಿಜೆಂಟ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಹೊಂದಿವೆ. ಅಲ್ಲದೇ ಇದರಲ್ಲಿ ಇಕೊ ಮತ್ತು ಪವರ್ ಡ್ರೈವ್ ಮೋಡ್, ಆ್ಯಕ್ಟೀವ್ ಟ್ರ್ಯಾಕ್ಸನ್ ಕಂಟ್ರೋಲ್, ಹಿಲ್ ಅಸಿಸ್ಟ್ ಕಂಟ್ರೋಲ್, ಎಲೆಕ್ಟ್ರಾನಿಕ್ ಡ್ರೈವ್ ಕಂಟ್ರೋಲ್, ಶಾರ್ಪ್ ಬೈ-ಬೀಮ್, ಎಲ್.ಇ.ಡಿ. ಹೆಡ್ ಲ್ಯಾಂಪ್ಸ್ ಮತ್ತು ಎಲ್.ಇ.ಡಿ. ಲೈಟ್ ಗೈಡ್ಸ್, ಟಫ್ ಮತ್ತು ಅರ್ಬನ್ ಕೂಲ್ 18 ಅಲೊ ವೀಲ್ಸ್, 7.0 ಇನ್ಫೋಟೈನ್‌ಮೆಂಟ್ ವಿದ್ ಸ್ಯಾಟ್ ನ್ಯಾವಿಗೇಶನ್, ಪಿಚ್ ಆ್ಯಂಡ್ ಬೌನ್ಸ್ ಕಂಟ್ರೋಲ್ ವಿದ್ ಸ್ಟೆಬಿಲೈಸರ್ ಹಾಗೂ ಇಂಟೆಲಿಜೆಂಟ್ ರೇ ಫಾರ್ ಸ್ಮಾಟ್ ಎಂಟ್ರಿ ಹೊಂದಿದೆ. ಈ ವಿನೂತನ ಟೊಯೋಟಾ ಫಾರ್ಚುನರ್ ಸೂಪರ್ ವೈಟ್, ಗ್ರೇ ಮೆಟಾಲಿಕ್, ಫ್ಯಾಂಟಮ್ ಬ್ರೌನ್, ಅಟಿಟ್ಯೂಡ್ ಬ್ಲಾಕ್, ಸಿಲ್ವರ್ ಮೆಟಾಲಿಕ್, ಆವಂತ್ ಗಾರ್ಡೆ ಬ್ರೋಂಜ್ ಹಾಗೂ ವೈಟ್ ಪರ್ಲ್ ಕ್ರಿಸ್ಟಲ್ ಶೈನ್ ಹೀಗೆ 7 ವಿವಿಧ ವರ್ಣಗಳಲ್ಲಿ ಲಭ್ಯವಿದೆ.
ಗ್ರಾಹಕರು ಈ ನೂತನ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಟೆಸ್ಟ್ ಡ್ರೈವ್‌ಗಾಗಿ ಮಂಗಳೂರು ನಗರದ ಬಂಟ್ಸ್ ಹಾಸ್ಟೆಲ್/ಪಡೀಲ್ ಟೊಯೋಟಾ ಶೋರೂಂ ಅಥವಾ ಉಡುಪಿ ಉದ್ಯಾವರದ ಟೊಯೋಟಾ ಶೋರೂಂನ್ನು ಸಂಪರ್ಕಿಸಲು ಕೋರಲಾಗಿದೆ.





