500, 2000 ರೂ. ನೋಟು ಸುಲಭವಾಗಿ ಸಿಗಲು ಎಷ್ಟು ಸಮಯ ಬೇಕು ಗೊತ್ತೆ?
ನೋಟು ರದ್ದತಿ

ತಜ್ಞರ ಪ್ರಕಾರ ನವಂಬರ್ 8ರಂದು ನೋಟು ರದ್ದತಿಗಾಗಿ ತೆಗೆದುಕೊಂಡಿರುವ ತೀರ್ಮಾನದಿಂದ ದೇಶದ ಶೇ. 86ರಷ್ಟು ಕರೆನ್ಸಿ ಪ್ರಸರಣ ಸ್ಥಗಿತಗೊಂಡಿದೆ. ಫಲಿತಾಂಶವಾಗಿ ರೂ. 500ರ 1658 ಕೋಟಿ ನೋಟುಗಳನ್ನು ಮತ್ತು ರೂ. 1000ದ 668 ಕೋಟಿ ನೋಟುಗಳನ್ನು ಅಂದರೆ, ಒಟ್ಟು ರೂ. 15 ಲಕ್ಷ ಕೋಟಿ ಮೌಲ್ಯದ 2327 ಕೋಟಿ ನೋಟುಗಳನ್ನು ಹಿಂಪಡೆದುಕೊಳ್ಳಲಾಗಿದೆ. ರೂ. 1000 ನೋಟುಗಳನ್ನು ಈಗ ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಪ್ರೈವೇಟ್ ಲಿಮಿಟೆಡ್‌ನಲ್ಲಿ ಮುದ್ರಿಸಲಾಗುತ್ತದೆ. ಅದರಲ್ಲಿ ತಿಂಗಳಿಗೆ ಎರಡು ಪಾಳಿಗಳಲ್ಲಿ 133 ಕೋಟಿ ನೋಟುಗನ್ನು ಮುದ್ರಿಸುವ ಸಾಮರ್ಥ್ಯವಿದೆ.
ಮೂರು ಪಾಳಿಗಳಲ್ಲಿ ಕೆಲಸ ಮಾಡಿದರೂ ಈ ಕಂಪನಿ ತಿಂಗಳಿಗೆ 200 ಕೋಟಿ ನೋಟುಗಳನ್ನಷ್ಟೇ ಮುದ್ರಿಸಬಲ್ಲುದು. ಹಿಂದಿನ ರೂ. 1000 ನೋಟುಗಳ ಬದಲಾಗಿ ಸರಕಾರವು ಹೊಸ ರೂ. 1000 ನೋಟುಗಳನ್ನು ಮುದ್ರಿಸಬೇಕೆಂದರೆ, ಅಂದರೆ 668 ಕೋಟಿಗಳಷ್ಟು ನೋಟುಗಳನ್ನು ಮುದ್ರಿಸಲು ಮೂರೂವರೆ ತಿಂಗಳುಗಳು ಬೇಕು. ರೂ. 500ರ ನೋಟುಗಳನ್ನು ಸೆಕ್ಯುರಿಟಿ ಪ್ರಿಂಟಿಂಗ್ ಮತ್ತು ಮಿಂಟಿಂಗ್ ಕಾರ್ಪೋರೇಶನ್ ಇಂಡಿಯಾ ಲಿಮಿಟೆಡ್ ಸಂಸ್ಥೆ ಮುದ್ರಿಸುತ್ತದೆ. ಅಲ್ಲಿ 100 ಕೋಟಿ ನೋಟುಗಳನ್ನು ತಿಂಗಳಿಗೆ ಮುದ್ರಿಸುವ ಸಾಮರ್ಥ್ಯವಿದೆ. ಇದನ್ನು ರಾತ್ರೋ ರಾತ್ರಿ ದುಪ್ಪಟ್ಟು ಪ್ರಮಾಣದಲ್ಲಿ ಮುದ್ರಣ ಮಾಡುವ ಸಾಮರ್ಥ್ಯಕ್ಕೆ ತಂದುಕೊಂಡಲ್ಲಿ, ರೂ. 500ರ 1658 ಕೋಟಿ ನೋಟುಗಳನ್ನು ಮುದ್ರಿಸಲು ಕನಿಷ್ಠ ಎಂಟು ತಿಂಗಳುಗಳು ಬೇಕು.
ರೂ. 500 ಮತ್ತು ರೂ. 1000 ಕರೆನ್ಸಿಗಳನ್ನು ನಿಷೇಧಿಸಿರುವ ಹಿನ್ನೆಲೆಯಲ್ಲಿ ಭಾರತ ದೊಡ್ಡ ಸಮಸ್ಯೆಯನ್ನು ಎದುರಿಸುತ್ತಿದೆ. ಆದರೆ ಹಿಂದೆ ಬೇರೆ ದೇಶಗಳೂ ಈ ಸಮಸ್ಯೆಯನ್ನು ಎದುರಿಸಿದ್ದವು. ಕೆಲವರು ತಮ್ಮ ಉದ್ದೇಶ ಈಡೇರಿಸಿಕೊಂಡಿದ್ದರೆ, ಇನ್ನು ಕೆಲವರು ಬಹಳ ದುರವಸ್ಥೆಯನ್ನು ಕಂಡಿದ್ದಾರೆ.







