ಮೆಹಬೂಬ ಮುಫ್ತಿಯ ಮನೆ ಮುಂದೆ ಕಾಗೆಗಳ ಸಾಮೂಹಿಕ ಸಾವು

ಕಾಶ್ಮೀರ, ನ. 19: ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬ ಮುಫ್ತಿಯವರ ಮನೆಯ ಮುಂದೆ ಹದಿನಾಲ್ಕು ಕಾಗೆಗಳು ಸಾಮೂಹಿಕವಾಗಿ ಸತ್ತು ಬಿದ್ದಿರುವ ಘಟನೆ ವರದಿಯಾಗಿದೆ. ವಿಷಪ್ರಾಶನ, ವಿದ್ಯುತ್ ಆಘಾತ, ಹಕ್ಕಿಜ್ವರ ಇತ್ಯಾದಿ ಸಾಧ್ಯತೆಗಳನ್ನು ಕಾಗೆಗಳ ಸಾಮೂಹಿಕ ಸಾವಿಗೆ ಶಂಕಿಸಲಾಗಿದೆ.
ಸತ್ತ ಕಾಗೆಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ರೀಜಿನಲ್ ವೈಲ್ಡ್ ಲೈಫ್ ವಾರ್ಡನ್ ವಿ.ಎಸ್. ಸೆಂಥಿಲ್‌ಕುಮಾರ್ ತಿಳಿಸಿದ್ದಾರೆ. ಸತ್ತಕಾಗೆಗಳಲ್ಲಿ ಕೆಲವನ್ನು ಪರೀಕ್ಷೆಗಾಗಿ ಶೇರ್ ಇ ಕಾಶ್ಮೀರ್ ವಿಶ್ವವಿದ್ಯಾನಿಲಯಕ್ಕೂ ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
Next Story





