ನೋಟು ನಿಷೇಧ: ವಲಸಿಗರ ಬದುಕು ಚಿಂತಾಜನಕ
ಬೆಂಗಳೂರು, ನ.19: ಕೇಂದ್ರ ಸರಕಾರ 500ರೂ., ಹಾಗೂ 1000ರೂ ನೋಟುಗಳನ್ನು ನಿಷೇಧ ಮಾಡಿರುವುದರಿಂದ ಉದ್ಯೋಗ ಹುಡುಕಿಕೊಂಡು ನಗರಕ್ಕೆ ಬಂದಿದ್ದ ಜನ ಕೆಲಸವಿಲ್ಲದೆ ಚಿಂತಾಕ್ರಾಂತರಾಗಿದ್ದಾರೆ.
ಪ್ರಸಕ್ತ ವರ್ಷ ರಾಜ್ಯದಲ್ಲಿ ಬರಗಾಲ ತಲೆದೋರಿರುವುದರಿಂದ ಗ್ರಾಮಾಂತರ ಜನತೆ ಜೀವನೋಪಾಯಕ್ಕೆ ಬೆಂಗಳೂರು, ಮಂಗಳೂರು, ಮೈಸೂರು ಸೇರಿದಂತೆ ಗೋವಾದ ಭಾಗಗಳ ಕಡೆಗೆ ಹೊಲಸೆ ಹೋಗಿದ್ದಾರೆ. ಅಲ್ಲಿ ಸಿಗುವ ಕಟ್ಟಡ ಕೆಲಸ ಸೇರಿದಂತೆ ಹಲವಾರು ಸಣ್ಣ, ಪುಟ್ಟ ಕೆಲಸಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಈಗ ಕೇಂದ್ರ ಸರಕಾರದ ನೋಟು ನಿಷೇಧದಿಂದಾಗಿ ದಿನಗೂಲಿ ಕಾರ್ಮಿಕರ ಬದುಕು ಸಂಕಷ್ಟಕ್ಕೆ ಸಿಲುಕಿದೆ, ವಲಸಿಗರ ಬದುಕು ಆಯೋಮಯವಾಗಿದೆ.
ಕಾಣೆಯಾದ ಸಿಗ್ನಲ್ ಬಳಿಯ ವ್ಯಾಪಾರಿಗಳು: ಬೆಂಗಳೂರು ನಗರದ ಸಿಗ್ನಲ್‌ಗಳಲ್ಲಿ ವಾಹನಗಳ ಚಾಲಕರಿಗೆ ಮಾರಾಟ ಮಾಡುವ ವ್ಯಾಪಾರಿಗಳಿಗೆ ಕೆಲಸ ಇಲ್ಲವಾಗಿದೆ. ಇವರು ಮಕ್ಕಳಿಗೆ ಬೇಕಾದ ಆಟಿಕೆ ವಸ್ತುಗಳು, ವಾಹನಗಳಿಗೆ ಬಳಸುವ ಅಲಂಕಾರಿಕ ವಸ್ತುಗಳನ್ನು, ಪೆನ್ನು-ಪೆನ್ಸಿಲ್, ಛತ್ರಿ, ಚಾರ್ಜರ್ ಹಿಡಿದು ವ್ಯಾಪಾರ ಮಾಡುತ್ತಿದ್ದರು. ಆದರೆ, ನೋಟು ನಿಷೇಧದಿಂದಾಗಿ ತಲೆದೋರಿಸುವ ಚಿಲ್ಲರೆ ಸಮಸ್ಯೆಯಿಂದಾಗಿ ಇವರ ವಸ್ತುಗಳನ್ನು ಜನ ಕೊಂಡುಕೊಳ್ಳುತ್ತಿಲ್ಲ.