ಕನ್ನಡವನ್ನು ಸಾಹಿತ್ಯಿಕವಾಗಿ ಶ್ರೀಮಂತಗೊಳಿಸಿದ ದೇಜಗೌ: ಡಾ.ಕೃಷ್ಣಕುಮಾರ್
.jpg)
ಮೂಡುಬಿದಿರೆ, ನ.19: ಕನ್ನಡ ಭಾಷೆಯನ್ನು ಸಾಹಿತ್ಯಿಕ, ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸಿದರಲ್ಲಿ ದೇಜವರೇಗೌಡರು ಪ್ರಮುಖರು ಎಂದು ಡಾ. ಸಿ.ಪಿ. ಕೃಷ್ಣಕುಮಾರ್ ಹೇಳಿದರು.
ಇಲ್ಲಿನ ರತ್ನಾಕರವರ್ಣಿ ವೇದಿಕೆ, ಪುಂಡಲೀಕ ಹಾಲಂಬಿ ಸಭಾಂಗಣದಲ್ಲಿ ಜರಗಿದ ‘ಶತಮಾನದ ನಮನ’ ವಿಷಯದ ಕುರಿತ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.
ಜಾನಪದ ನವೋದಯಕ್ಕೆ ಕಾರಣೀಭೂತರಾದ ದೇಜಗೌ ಅವರು ಭಾಷಾಂತರ, ಪ್ರವಾಸ ಸಾಹಿತ್ಯದಲ್ಲಿ ಕನ್ನಡಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಅವರು ವಿಶ್ವವಿದ್ಯಾನಿಲಯಗಳ ಮಟ್ಟದಲ್ಲಿ ಉನ್ನತವಾಗಿ ಕಾರ್ಯನಿರ್ವಹಿಸಿದ್ದು, ಪ್ರಸಾರಾಂಗದಲ್ಲಿ ತಮ್ಮನ್ನು ಹೆಚ್ಚು ತೊಡಗಿಸಿಕೊಂಡಿದ್ದರು. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕಿಸಿ ಕೊಡುವಲ್ಲಿ ಅವರ ಹೋರಾಟ ಅನನ್ಯವಾದುದು ಎಂದು ತಿಳಿಸಿದರು.
ಗದ್ಯ ಕಾವ್ಯದಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದ ಅವರು ಅಪ್ರತಿಮ ಶಿಲ್ಪಿಯಾಗಿದ್ದರು. ಮಹಾಕಾವ್ಯಗಳನ್ನು ಹೊರತುಪಡಿಸಿ ಎಲ್ಲ ರೀತಿಯ ಸಾಹಿತ್ಯ ಪ್ರಕಾರದಲ್ಲಿ ಕೃತಿಗಳನ್ನು ಹೊರ ತಂದಿದ್ದಾರೆ. ಕುವೆಂಪು ಸಾಹಿತ್ಯದ ಪ್ರಭಾವವು ದೇಜಗೌ ಅವರ ಕೃತಿಗಳಲ್ಲಿ ಕಂಡು ಬರುತ್ತದೆ. ಲೌಕಿಕ ವಿಷಯಗಳಲ್ಲಿ ಪಾರುಪತ್ಯ ಹೊಂದಿದ್ದರು ಎಂದು ಹೇಳಿದರು.





