Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಅಮೆರಿಕ: ಮಹತ್ವದ ಹುದ್ದೆಗಳಿಗೆ ನೇಮಕ

ಅಮೆರಿಕ: ಮಹತ್ವದ ಹುದ್ದೆಗಳಿಗೆ ನೇಮಕ

ಮುಸ್ಲಿಮ್ ಜಗತ್ತಿನಲ್ಲಿ ತಲ್ಲಣ

ವಾರ್ತಾಭಾರತಿವಾರ್ತಾಭಾರತಿ19 Nov 2016 8:32 PM IST
share
ಅಮೆರಿಕ: ಮಹತ್ವದ ಹುದ್ದೆಗಳಿಗೆ ನೇಮಕ

►ಚುನಾವಣಾ ಭರವಸೆಗಳನು ನಿಜವಾಗಿಯೂ ಈಡೇರಿಸಲು ಹೊರಟ ಟ್ರಂಪ್

ವಾಶಿಂಗ್ಟನ್, ನ. 19: ಹಲವು ಮಹತ್ವದ ವಿಷಯಗಳಲ್ಲಿ ಚುನಾವಣಾ ಪ್ರಚಾರದ ವೇಳೆ ತಾನು ನೀಡಿರುವ ‘ವಿಪರೀತದ’ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲ ಹೆಜ್ಜೆ ಇಟ್ಟಿದ್ದಾರೆ. ತನ್ನ ಆಡಳಿತದಲ್ಲಿನ ಹಿರಿಯ ರಾಷ್ಟ್ರೀಯ ಭದ್ರತಾ ಹುದ್ದೆಗಳಿಗೆ ಅವರು ಕಟ್ಟಾ ಸಂಪ್ರದಾಯವಾದಿ ನಿಲುವಿನ ಮೂವರನ್ನು ಆಯ್ಕೆ ಮಾಡಿದ್ದಾರೆ.

ವಲಸೆ ನೀತಿ ಮತ್ತು ಮತದಾನ ಹಕ್ಕುಗಳಲ್ಲಿ ಬದಲಾವಣೆ, ದೇಶದ ಮುಸ್ಲಿಮರು ಮತ್ತು ಇತರ ಶಂಕಿತ ಭಯೋತ್ಪಾದಕರ ಮೇಲೆ ಕಣ್ಗಾವಲು ಇಡುವುದು ಮುಂತಾದ ತೀವ್ರವಾದಿ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಟ್ರಂಪ್ ಭರವಸೆ ನೀಡಿದ್ದರು.


ಸೆನೆಟರ್ ಜೆಫ್ ಸೆಶನ್ಸ್ ಅವರನ್ನು ಅಟಾರ್ನಿ ಜನರಲ್ ಆಗಿ, ಮೈಕ್ ಪಾಂಪಿಯೊ ಅವರನ್ನು ಸಿಐಎ ನಿರ್ದೇಶಕರಾಗಿ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಮೈಕಲ್ ಟಿ. ಫ್ಲಿನ್‌ರನ್ನು ತನ್ನ ಶ್ವೇತಭವನದ ರಾಷ್ಟ್ರೀಯ ಭದ್ರತಾ ಸಲಹೆಕಾರರಾಗಿ ನೇಮಿಸಲು ತಾನು ಉದ್ದೇಶಿಸುವುದಾಗಿ ಟ್ರಂಪ್ ಘೋಷಿಸಿದ್ದಾರೆ.
ಟ್ರಂಪ್‌ರ ಆಯ್ಕೆಗಳನ್ನು ಅವರ ಕಟ್ಟಾ ಬೆಂಬಲಿಗರು ಹಾಗೂ ಇತರ ರಿಪಬ್ಲಿಕನ್ನರು ಭಾರೀ ಪ್ರಮಾಣದಲ್ಲಿ ಸ್ವಾಗತಿಸಿದ್ದಾರೆ. ಆದರೆ, ಸೆಶನ್ಸ್ ಮತ್ತು ಫ್ಲಿನ್‌ರ ನೇಮಕಗಳನ್ನು ಅವರ ವಿವಾದಾಸ್ಪದ ದಾಖಲೆಗಳ ಹಿನ್ನೆಲೆಯಲ್ಲಿ ಡೆಮಾಕ್ರಟ್‌ಗಳು ಮತ್ತು ನಾಗರಿಕ ಹಕ್ಕುಗಳ ಹೋರಾಟಗಾರರು ವಿರೋಧಿಸಿದ್ದಾರೆ.
 ವಿದೇಶ ಕಾರ್ಯದರ್ಶಿ ಮತ್ತು ರಕ್ಷಣಾ ಕಾರ್ಯದರ್ಶಿ ಎಂಬ ತನ್ನ ಸಂಪುಟದ ಅತ್ಯಂತ ಎರಡು ಮಹತ್ವದ ಹುದ್ದೆಗಳಿಗೆ ಅಭ್ಯರ್ಥಿ ಆಯ್ಕೆ ಕಸರತ್ತಿನಲ್ಲಿ ತೊಡಗಿರುವಂತೆಯೇ, ಈ ಮೂರು ಹುದ್ದೆಗಳಿಗಾಗಿ ತನ್ನ ಆಯ್ಕೆಗಳನ್ನು ಟ್ರಂಪ್ ಪ್ರಕಟಿಸಿದ್ದಾರೆ.


69 ವರ್ಷದ ಸೆಶನ್ಸ್ ಸೆನೆಟ್‌ನಲ್ಲಿ ಟ್ರಂಪ್‌ರನ್ನು ಪ್ರಥಮವಾಗಿ ಅನುಮೋದಿಸಿದವರು. ಅವರು ಶೀಘ್ರವೇ ರಿಪಬ್ಲಿಕನ್ ಅಭ್ಯರ್ಥಿಯ ಪ್ರಭಾವಿ ‘ನೀತಿ’ ಸಲಹೆಗಾರರಾದರು. ಅವರು ನಿರಂತರವಾಗಿ ಟ್ರಂಪ್‌ರನ್ನು ಸಮರ್ಥಿಸುತ್ತಾ ಬಂದರು. ಮಹಿಳೆಯರ ಬಗ್ಗೆ ಅವಹೇಳನದ ಮಾತುಗಳನ್ನು ಆಡುವ ವೀಡಿಯೊ ಹೊರಬಂದ ಬಳಿಕವೂ ಅವರು ಟ್ರಂಪ್‌ರನ್ನು ಬಿಟ್ಟುಕೊಡಲಿಲ್ಲ.


ಸೆಶನ್ಸ್ ತನ್ನ ವೃತ್ತಿ ಜೀವನದ ಉದ್ದಕ್ಕೂ ಜನಾಂಗೀಯವಾದಿಯಾಗಿ ವರ್ತಿಸಿದ್ದಾರೆ ಎಂಬ ಆರೋಪಗಳಿವೆ.
ಅದೇ ವೇಳೆ, ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಫ್ಲಿನ್‌ರನ್ನು ನೇಮಿಸಲು ಟ್ರಂಪ್ ಉದ್ದೇಶಿಸಿರುವುದೂ ಹಲವು ವಲಯಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.
ಫ್ಲಿನ್ ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಹಾಗೂ ನಿಂದನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ ಹಾಗೂ ಕಳೆದ ವರ್ಷ ಅವರು ಮಾಸ್ಕೊಗೆ ಭೇಟಿ ನೀಡಿ ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆಗೆ ಭೋಜನ ಮಾಡಿದ್ದಾರೆ ಎಂಬುದಾಗಿ ಸರಕಾರಿ ಒಡೆತನದ ಪ್ರಚಾರ ಟೆಲಿವಿಶನ್ ಜಾಲ ಹೇಳಿದೆ.
ಮುಸ್ಲಿಮರು ಅಮೆರಿಕ ಪ್ರವೇಶಿಸುವುದನ್ನು ತಾತ್ಕಾಲಿಕವಾಗಿ ನಿಷೇಧಿಸುವ ಟ್ರಂಪ್‌ರ ಪ್ರಸ್ತಾಪವನ್ನೂ ಫ್ಲಿನ್ ಬೆಂಬಲಿಸಿದ್ದರು.


►ಮುಸ್ಲಿಮ್ ಜಗತ್ತಿನಲ್ಲಿ ತಲ್ಲಣ
ರಾಷ್ಟ್ರೀಯ ಭದ್ರತಾ ಸಲಹೆಕಾರರ ಹುದ್ದೆಗಳಿಗಾಗಿ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿರುವ ಆಯ್ಕೆಗಳಿಗೆ ಸಂಬಂಧಿಸಿದ ಸುದ್ದಿ ಇಸ್ಲಾಮಿಕ್ ಜಗತ್ತಿನಲ್ಲಿ ತಲ್ಲಣವನ್ನು ಸೃಷ್ಟಿಸಿದೆ.


ತೀವ್ರವಾದಿ ಮುಸ್ಲಿಮ್-ವಿರೋಧಿ ಭಾವಾವೇಶದ ಮಾತುಗಳಿಗೆ ಖ್ಯಾತರಾಗಿರುವ ಸಲಹಾಕಾರರೊಡನೆ ವ್ಯವಹರಿಸುವುದನ್ನು ಅಮೆರಿಕದ ಮಧ್ಯಪ್ರಾಚ್ಯ ಮಿತ್ರರು ಮತ್ತು ಮುಸ್ಲಿಮ್ ಅಮೆರಿಕನ್ ಗುಂಪುಗಳು ಎದುರು ನೋಡುತ್ತಿವೆ.


ಇಸ್ಲಾಮಿಕ್ ಸ್ಟೇಟ್ ಮತ್ತು ಇತರ ಭಯೋತ್ಪಾದಕ ಗುಂಪುಗಳ ವಿರುದ್ಧದ ಹೋರಾಟದಲ್ಲಿ ಅಮೆರಿಕಕ್ಕೆ ನೆರವು ನೀಡುತ್ತಿರುವ ಹಲವಾರು ಅರಬ್ ದೇಶಗಳು, ಅಟಾರ್ನಿ ಜನರಲ್, ಸಿಐಎ ನಿರ್ದೇಶಕ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಹುದ್ದೆಗಳಿಗಾಗಿ ಟ್ರಂಪ್ ಪ್ರಸ್ತಾಪಿಸಿರುವ ಹೆಸರುಗಳ ಬಗ್ಗೆ ಕಳವಳ ವ್ಯಕ್ತಪಡಿಸಿವೆ.


 ಅಮೆರಿಕವು ಇಸ್ಲಾಮ್ ವಿರುದ್ಧವೇ ಯುದ್ಧದಲ್ಲಿ ತೊಡಗಿದೆ ಎಂಬ ಜಗತ್ತಿನ ಮುಸ್ಲಿಮರ ಸಂಶಯವನ್ನು ಈ ನೇಮಕಾತಿಗಳು ಇನ್ನಷ್ಟು ಬಲಪಡಿಸಬಹುದಾಗಿದೆ ಎಂದು ಹಲವಾರು ಹಾಲಿ ಹಾಗೂ ಮಾಜಿ ಸರಕಾರಿ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X