ಮಾನವ್‌ಜಿತ್ ಸಿಂಗ್ ಸಂಧುಗೆ ಚಿನ್ನ
ನ್ಯಾಶನಲ್ ಶೂಟಿಂಗ್ ಚಾಂಪಿಯನ್‌ಶಿಪ್

ಜೈಪುರ, ನ.19: ಮಾಜಿ ವಿಶ್ವ ಚಾಂಪಿಯನ್ ಮಾನವ್‌ಜಿತ್ ಸಿಂಗ್ ಸಂಧು 60ನೆ ಆವೃತ್ತಿಯ ನ್ಯಾಶನಲ್ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.
ಶನಿವಾರ ಇಲ್ಲಿ ನಡೆದ ಪುರುಷರ ಟ್ರಾಪ್ ಇವೆಂಟ್‌ನ ಶಾಟ್‌ಗನ್ ವಿಭಾಗದಲ್ಲಿ ನಾಲ್ಕು ಬಾರಿಯ ಒಲಿಂಪಿಯನ್ ಸಿಂಗ್ 117 ಅಂಕ ಗಳಿಸಿ ಆರು ಸ್ಪರ್ಧಿಗಳಿದ್ದ ಫೈನಲ್ ಸುತ್ತಿಗೆ ತಲುಪಿದರು. ಸೆಮಿ ಫೈನಲ್ ಹಂತದಲ್ಲಿ 15ರಲ್ಲಿ 12 ಅಂಕ ಗಳಿಸಿದ ಸಿಂಗ್ ಫೈನಲ್‌ಗೆ ಅರ್ಹತೆ ಪಡೆದರು. ಫೈನಲ್‌ನಲ್ಲಿ ಒಡಿಶಾವನ್ನು ಪ್ರತಿನಿಧಿಸುತ್ತಿರುವ ರಣಿಂದರ್ ಸಿಂಗ್‌ರನ್ನು 14-13 ಅಂತರದಿಂದ ಮಣಿಸಿ ಚಿನ್ನ ಜಯಿಸಿದರು.
ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ತೆಲಂಗಾಣದ ಯುವ ಶೂಟರ್ ಕಿನನ್ ಚೆನೈ ರಾಜಸ್ಥಾನದ ಅಧಿರಾಜ್ ಸಿಂಗ್ ರಾಥೋರ್‌ರನ್ನು 14-12 ರಿಂದ ಮಣಿಸಿ ಕಂಚಿನ ಪದಕ ಜಯಿಸಿದರು.
ಮಾನವ್‌ಜಿತ್ ಈ ಹಿಂದೆ ಹಲವಾರು ನ್ಯಾಶನಲ್ ಪ್ರಶಸ್ತಿಯನ್ನು ಜಯಿಸಿದ್ದಾರೆ. ನ್ಯಾಶನಲ್ ರೈಫಲ್ ಅಸೋಸಿಯೇಶನ್‌ನ ಅಧ್ಯಕ್ಷ ರಣಿಂದರ್ ಸಿಂಗ್ ಸತತ ಎರಡನೆ ಬಾರಿ ಬೆಳ್ಳಿ ಪದಕ ಜಯಿಸಿದರು.
Next Story





