ಜೂನಿಯರ್ ಹಾಕಿ ವಿಶ್ವಕಪ್: ಭಾರತದ ಹಾಕಿ ತಂಡ ಪ್ರಕಟ

ಹೊಸದಿಲ್ಲಿ, ನ.19: ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆಯಲಿರುವ ಜೂನಿಯರ್ ವಿಶ್ವಕಪ್‌ಗೆ ಹಾಕಿ ಇಂಡಿಯಾ 18 ಸದಸ್ಯರನ್ನು ಒಳಗೊಂಡ ಜೂನಿಯರ್ ಪುರುಷರ ತಂಡವನ್ನು ಘೋಷಿಸಿದೆ.
ಜೂನಿಯರ್ ಹಾಕಿ ವಿಶ್ವಕಪ್ ಟೂರ್ನಿಯು ಲಕ್ನೋದಲ್ಲಿ ಡಿ.8 ರಿಂದ 18ರ ತನಕ ನಡೆಯಲಿದೆ.
ಅಂತಾರಾಷ್ಟ್ರಿಯ ಹಾಕಿ ಫೆಡರೇಶನ್‌ನಿಂದ 2016ರ ವರ್ಷದ ಉದಯೋನ್ಮುಖ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವ ಡಿಫೆಂಡರ್ ಹರ್ಮನ್‌ಪ್ರೀತ್ ಸಿಂಗ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಹರ್ಮನ್‌ಪ್ರೀತ್ 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದರು.
ಸ್ಟ್ರೈಕರ್ ಸಾಮರ್ಥ್ಯದಿಂದ ಗಮನ ಸೆಳೆದಿರುವ ಮನ್‌ದೀಪ್ ಸಿಂಗ್ ತಂಡದಲ್ಲಿದ್ದಾರೆ. ಸಿಂಗ್ ಈ ವರ್ಷಾರಂಭದಲ್ಲಿ ಲಂಡನ್‌ನಲ್ಲಿ ನಡೆದ ಎಫ್‌ಐಎಚ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡದಲ್ಲಿದ್ದರು.
ಡಿ ಗುಂಪಿನಲ್ಲಿರುವ ಭಾರತ ಡಿ.8ರಂದು ಕೆನಡಾವನ್ನು ಎದುರಿಸುವ ಮೂಲಕ ತನ್ನ ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಡಿ.10 ರಂದು ಇಂಗ್ಲೆಂಡ್ ಹಾಗೂ ಡಿ.12 ರಂದು ದಕ್ಷಿಣ ಆಫ್ರಿಕವನ್ನು ಎದುರಿಸಲಿದೆ. ವಿಶ್ವಕಪ್ ಪಂದ್ಯಗಳು ಸ್ಟಾರ್ ಸ್ಟೋರ್ಟ್ಸ್ 4 ಹಾಗೂ ಸ್ಟಾರ್ ಸ್ಟೋರ್ಟ್ಸ್ ಎಡ್‌ಡಿ 4ರಲ್ಲಿ ನೇರ ಪ್ರಸಾರವಾಗಲಿದೆ.
ಹಾಕಿ ತಂಡ
ಗೋಲ್‌ಕೀಪರ್‌ಗಳು: ವಿಕಾಸ್ ದಹಿಯಾ, ಕೃಷ್ಣನ್ ಬಿ ಪಾಠಕ್.
ಡಿಫೆಂಡರ್‌ಗಳು: ಡಿಪ್ಸನ್ ಟಿರ್ಕಿ, ಹರ್ಮನ್‌ಪ್ರೀತ್ ಸಿಂಗ್, ವರುಣ್ ಕುಮಾರ್, ವಿಕ್ರಮ್‌ಜೀತ್ ಸಿಂಗ್, ಗುರಿಂದರ್ ಸಿಂಗ್.
ಮಿಡ್‌ಫೀಲ್ಡರ್‌ಗಳು: ಹರ್ಜೀತ್ ಸಿಂಗ್, ಸಂತ ಸಿಂಗ್, ನೀಲಕಂಠ ಶರ್ಮ, ಮನ್‌ಪ್ರೀತ್, ಸುಮಿತ್.
ಫಾರ್ವರ್ಡ್‌ಗಳು: ಪರ್ವಿಂದರ್ ಸಿಂಗ್, ಗುರ್ಜಂತ್ ಸಿಂಗ್, ಅರ್ಮಾನ್ ಕುರೇಶಿ, ಮನ್‌ದೀಪ್ ಸಿಂಗ್, ಅಜಿತ್ ಕುಮಾರ್, ಸಿಮ್ರಾನ್‌ಜೀತ್ ಸಿಂಗ್.







