ಶಿರೂರು: ‘ಗ್ರೀನ್‌ವ್ಯಾಲಿ’ ಸ್ಕೂಲ್, ಪಿಯು ಕಾಲೇಜಿನ ವಾರ್ಷಿಕ ಕ್ರೀಡಾಕೂಟ

ಉಡುಪಿ, ನ.19: ಶಿರೂರಿನ ಗ್ರೀನ್ ವ್ಯಾಲಿ ನ್ಯಾಶನಲ್ ಸ್ಕೂಲ್ ಮತ್ತು ಪಿಯು ಕಾಲೇಜಿನ ವಾರ್ಷಿಕ ಕ್ರೀಡಾಕೂಟವು ಕಾಲೇಜಿನ ಮೈದಾನದಲ್ಲಿ ಶನಿವಾರ ನೆರವೇರಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎಂ.ಐ.ಟಿ.ಯ ದೈಹಿಕ ಶಿಕ್ಷಣ ನಿರ್ದೇಶಕ ಹಾಗೂ ಮಣಿಪಾಲ ವಿವಿಯ ಮುಖ್ಯ ಕ್ರೀಡಾ ಸಂಯೋಜಕ ಡಾ.ಸತೀಶ್ ಮಲ್ಯರವರು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ‘ಗ್ರೀನ್‌ವ್ಯಾಲಿ’ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಉತ್ತಮ ಅವಕಾಶ ಮಾಡಿಕೊಡುತ್ತಿದ್ದು, ಇದನ್ನು ಬಳಸಿಕೊಳ್ಳುವಲ್ಲಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಬೈಂದೂರು ಸರ್ಕಲ್ ಇನ್‌ಸ್ಪೆಕ್ಟರ್ ರಾಘವ ಎಸ್. ಪಡೀಲ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಶಾಲಾ ನಾಯಕ ಮುಹಮ್ಮದ್ ಸುಹೈಲ್ ಪಥ ಸಂಚಲನಕ್ಕೆ ನೇತೃತ್ವ ನೀಡಿದರು. ಬಳಿಕ ಅತಿಥಿಗಳು ಪ್ರಜ್ವಲಿಸಿದ ಕ್ರೀಡಾಜ್ಯೋತಿಯ ರಿಲೇಯಲ್ಲಿ ಶಾಲಾ ಕ್ರೀಡಾ ತಂಡಗಳ ನಾಯಕರು ಭಾಗವಹಿಸಿದರು.
ಕ್ರೀಡಾ ವಿದ್ಯಾರ್ಥಿ ನಾಯಕ ಪ್ರಮಾಣವಚನ ಭೋದಿಸಿದರು. ದ್ವಿತೀಯ ಪಿಯು ವಿದ್ಯಾರ್ಥಿ ಸಮಿ ತಂಙಳ್ ಸ್ವಾಗತಿಸಿದರು. ಕ್ರೀಡಾಕೂಟ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು.







