Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ಆಂಗ್ಲರಿಗೆ ಅಶ್ವಿನ್ ವಿರಾಟ ಪಂಚ್

ಆಂಗ್ಲರಿಗೆ ಅಶ್ವಿನ್ ವಿರಾಟ ಪಂಚ್

ವಾರ್ತಾಭಾರತಿವಾರ್ತಾಭಾರತಿ19 Nov 2016 11:35 PM IST
share
ಆಂಗ್ಲರಿಗೆ ಅಶ್ವಿನ್ ವಿರಾಟ ಪಂಚ್

 ವಿಶಾಖಪಟ್ಟಣ, ನ.18: ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್ ಸ್ಪಿನ್ ದಾಳಿ ಮತ್ತು ನಾಯಕ ವಿರಾಟ್ ಕೊಹ್ಲಿ ಅರ್ಧಶತಕ ಸಹಾಯದಿಂದ ಭಾರತ ಇಲ್ಲಿ ನಡೆಯುತ್ತಿರುವ ದ್ವಿತೀಯ ಕ್ರಿಕೆಟ್ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಮೇಲುಗೈ ಸಾಧಿಸಿದೆ.
ಡಾ.ವೈ.ಎಸ್.ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ಮೂರನೆ ದಿನದ ಆಟ ಕೊನೆಗೊಂಡಾಗ ಭಾರತ ಎರಡನೆ ಇನಿಂಗ್ಸ್‌ನಲ್ಲಿ 34 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 98 ರನ್ ಗಳಿಸಿತ್ತು. ಇದರೊಂದಿಗೆ ಭಾರತ 298 ರನ್‌ಗಳ ಮೇಲುಗೈ ಸಾಧಿಸಿದೆ.
ಇಂಗ್ಲೆಂಡ್‌ನ್ನು ಮೊದಲ ಇನಿಂಗ್ಸ್‌ನಲ್ಲಿ 102.5 ಓವರ್‌ಗಳಲ್ಲಿ 255 ರನ್‌ಗಳಿಗೆ ನಿಯಂತ್ರಿಸಿದ್ದ ಭಾರತ ಎರಡನೆ ಇನಿಂಗ್ಸ್‌ನಲ್ಲಿ ಆರಂಭಿಕ ಆಘಾತ ಅನುಭವಿಸಿದ್ದರೂ, ನಾಯಕ ವಿರಾಟ್ ಕೊಹ್ಲಿ (ಔಟಾಗದೆ 56 ರನ್) ಮತ್ತು ಅಜಿಂಕ್ಯ ರಹಾನೆ (ಔಟಾಗದೆ 22 ರನ್) ತಂಡವನ್ನು ಆಧರಿಸಿದ್ದಾರೆ.
ಭಾರತದ ಆರಂಭಿಕ ದಾಂಡಿಗರಾದ ಮುರಳಿ ವಿಜಯ್(3) ಮತ್ತು ಲೋಕೇಶ್ ರಾಹುಲ್(10) ಅವರನ್ನು ಸ್ಟುವರ್ಟ್ ಬ್ರಾಡ್ ಪೆವಿಲಿಯನ್‌ಗೆ ಅಟ್ಟಿದರು. ಬಳಿಕ ಕ್ರೀಸ್‌ಗೆ ಆಗಮಿಸಿದ ಮೊದಲ ಇನಿಂಗ್ಸ್‌ನಲ್ಲಿ ಶತಕ ದಾಖಲಿಸಿದ್ದ ಚೇತೇಶ್ವರ ಪೂಜಾರ(1) ಅವರಿಗೆ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ಆ್ಯಂಡರ್ಸನ್ ಅವಕಾಶ ನೀಡಲಿಲ್ಲ. ಪೂಜಾರ 24 ಎಸೆತಗಳನ್ನು ಎದುರಿಸಿದ್ದರೂ, ಖಾತೆಗೆ ಕೇವಲ 1 ರನ್ ಸೇರಿಸಿದರು.
16.5 ಓವರ್‌ಗಳಲ್ಲಿ 40ಕ್ಕೆ 3 ವಿಕೆಟ್ ಕಳೆದುಕೊಂಡಿದ್ದ ಭಾರತ ತಂಡವನ್ನು ಬಳಿಕ ನಾಯಕ ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ಆಧರಿಸಿದರು. ಕೊಹ್ಲಿ ಮತ್ತು ರಹಾನೆ ನಾಲ್ಕನೆ ವಿಕೆಟ್‌ಗೆ 58 ರನ್‌ಗಳ ಜೊತೆಯಾಟ ನೀಡಿದ್ದಾರೆ. ಕೊಹ್ಲಿ 70 ಎಸೆತಗಳಲ್ಲಿ 6 ಬೌಂಡರಿಗಳ ಸಹಾಯದಿಂದ 56 ರನ್ ಗಳಿಸಿದ್ದಾರೆ. ಕೊಹ್ಲಿ ಕಠಿಣ ಪರಿಸ್ಥಿತಿಯಲ್ಲೂ ಕ್ರೀಸ್‌ನಲ್ಲಿ ಭದ್ರವಾಗಿ ತಳವೂರಿದ್ದಾರೆ. ಕೊಹ್ಲಿ ಮೊದಲ ಇನಿಂಗ್ಸ್‌ನಲ್ಲಿ 167 ರನ್ ಗಳಿಸಿ ಔಟಾಗಿದ್ದರು. ಇದೀಗ ಎರಡನೆ ಇನಿಂಗ್ಸ್‌ನಲ್ಲೂ ಭರ್ಜರಿ ಬ್ಯಾಟಿಂಗ್‌ನ ಯೋಜನೆಯಲ್ಲಿದ್ದಾರೆ.
ಸ್ಟುವರ್ಟ್ ಬ್ರಾಡ್ 6ಕ್ಕೆ 2 ಮತ್ತು ಜೇಮ್ಸ್ ಆ್ಯಂಡರ್ಸನ್ 16ಕ್ಕೆ 1 ವಿಕೆಟ್ ಪಡೆದರು.
ಇಂಗ್ಲೆಂಡ್ ಆಲೌಟ್ 255: ಇಂಗ್ಲೆಂಡ್ ತಂಡ ಮೊದಲ ಇನಿಂಗ್ಸ್‌ನಲ್ಲಿ 102.5 ಓವರ್‌ಗಳಲ್ಲಿ 255 ರನ್‌ಗಳಿಗೆ ಆಲೌಟಾಗಿತ್ತು.
ಎರಡನೆ ದಿನದ ಕೊನೆಯಲ್ಲಿ ಮೊದಲ ಇನಿಂಗ್ಸ್‌ನಲ್ಲಿ 49 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 103 ರನ್ ಗಳಿಸಿದ್ದ ಇಂಗ್ಲೆಂಡ್ ಈ ಮೊತ್ತಕ್ಕೆ 152 ರನ್ ಸೇರಿಸುವಷ್ಟರಲ್ಲಿ ಆಲೌಟಾಗಿತ್ತು.
ಬೆನ್ ಸ್ಟೋಕ್ಸ್ 12 ರನ್ ಮತ್ತು ಬೈರ್‌ಸ್ಟೋವ್ 12 ರನ್ ಗಳಿಸಿ ಔಟಾಗದೆ ಕ್ರೀಸ್‌ನಲ್ಲಿದ್ದರು. ಇವರು ಬ್ಯಾಟಿಂಗ್ ಮುಂದುವರಿಸಿ ಭಾರತದ ಬೌಲರ್‌ಗಳ ಬೆವರಿಳಿಸಿದರು. ಇವರು ಆರನೆ ವಿಕೆಟ್‌ಗೆ 110 ರನ್‌ಗಳ ಜೊತೆಯಾಟ ನೀಡಿದ್ದರು.
ಶುಕ್ರವಾರ ಆಟದ ಕೊನೆಯಲ್ಲಿ ಚೊಚ್ಚಲ ಟೆಸ್ಟ್ ಆಡುತ್ತಿರುವ ಜಯಂತ್ ಯಾದವ್ ಎಸೆತದಲ್ಲಿ ಸ್ಟೋಕ್ಸ್ ಔಟಾಗುವ ಅವಕಾಶದಿಂದ ಪಾರಾಗಿದ್ದರು. ಇಂದು ಕೂಡಾ ಅವರು 21 ರನ್ ಗಳಿಸಿದ್ದಾಗ ಸ್ಟಂಪ್ ಆಗುವ ಅವಕಾಶದಿಂದ ಪಾರಾಗಿದ್ದರು. ಸ್ಟೋಕ್ಸ್ ಮತ್ತು ಬೈರ್‌ಸ್ಟೋವ್ ಅರ್ಧಶತಕ ದಾಖಲಿಸಿದರು. ಬೈರ್‌ಸ್ಟೋವ್ ಅವರು 18 ರನ್ ಗಳಿಸಿದ್ದಾಗ ಜೀವದಾನ ಪಡೆದಿದ್ದರು. ಅವರು 152 ಎಸೆತಗಳಲ್ಲಿ 5 ಬೌಂಡರಿಗಳ ಸಹಾಯದಿಂದ 53 ರನ್ ಗಳಿಸಿದರು. ಬೈರ್‌ಸ್ಟೋವ್ ಅವರು 78.3ನೆ ಓವರ್‌ನಲ್ಲಿ ಉಮೇಶ್ ಯಾದವ್ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರುವುದರೊಂದಿಗೆ ಭಾರತ ಲಂಚ್ ವಿರಾಮಕ್ಕಿಂತ 10ನಿಮಿಷ ಮೊದಲು ಯಶಸ್ಸು ಪಡೆಯಿತು.
ಬೈರ್‌ಸ್ಟೋವ್ ನಿರ್ಗಮಿಸಿದಾಗ ತಂಡದ ಸ್ಕೋರ್ 78.3 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ ಸ್ಕೋರ್ 190 ಆಗಿತ್ತು. ಬೆನ್‌ಸ್ಟೋಕ್ಸ್ ಮತ್ತು ಆದಿಲ್ ರಶೀದ್ ಜೊತೆಯಾಗಿ 35 ರನ್ ಸೇರಿಸಿದರು. ಬೆನ್ ಸ್ಟೋಕ್ಸ್ 90.4ನೆ ಓವರ್‌ನಲ್ಲಿ ಅಶ್ವಿನ್ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು. ಸ್ಟೋಕ್ಸ್ 70 ರನ್(157ಎ, 11ಬೌ) ಗಳಿಸಿದರು.
ಸ್ಟೋಕ್ಸ್ ನಿರ್ಗಮನದ ಬಳಿಕ ರವಿಂದ್ರ ಜಡೇಜ ಅವರು ಜಾಫರ್ ಅನ್ಸಾರಿ (4) ಅವರನ್ನು ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು. ಸ್ಟುವರ್ಟ್ ಬ್ರಾರ್ಡ್ (13) ಮತ್ತು ಜೇಮ್ಸ್ ಆ್ಯಂಡರ್ಸನ್(0)ಅವರನ್ನು ಎಲ್‌ಬಿಡಬ್ಲು ಬಲೆಗೆ ಬೀಳಿಸುವುದರೊಂದಿಗೆ ಇಂಗ್ಲೆಂಡ್ ಆಲೌಟಾಯಿತು.
ರಶೀದ್ ಔಟಾಗದೆ 32 ರನ್ ಗಳಿಸಿದರು.
ಭಾರತದ ರವಿಚಂದ್ರನ್ ಅಶ್ವಿನ್ 67ಕ್ಕೆ 5, ಮುಹಮ್ಮದ್ ಶಮಿ, ಉಮೇಶ್ ಯಾದವ್, ರವೀಂದ್ರ ಜಡೇಜ ಮತ್ತು ಜಯಂತ್ ಯಾದವ್ ತಲಾ 1 ವಿಕೆಟ್ ಗಳಿಸಿದರು.

ಸ್ಕೋರ್ ವಿವರ

ಭಾರತ ಪ್ರಥಮ ಇನಿಂಗ್ಸ್:

129.4 ಓವರ್‌ಗಳಲ್ಲಿ 455

ಇಂಗ್ಲೆಂಡ್ ಪ್ರಥಮ ಇನಿಂಗ್ಸ್: 102.5 ಓವರ್‌ಗಳಲ್ಲಿ 255

ಅಲಿಸ್ಟರ್ ಕುಕ್ ಬಿ ಶಮಿ 02

ಹಮೀದ್ ರನೌಟ್ 13

ರೂಟ್ ಸಿ ಯಾದವ್ ಬಿ ಅಶ್ವಿನ್ 53

ಡಕೆಟ್ ಬಿ ಅಶ್ವಿನ್ 05

ಮೊಯಿನ್ ಅಲಿ ಎಲ್‌ಬಿಡಬ್ಲು ಯಾದವ್ 01

ಸ್ಟೋಕ್ಸ್ ಎಲ್‌ಬಿಡಬ್ಲು ಬಿ ಅಶ್ವಿನ್ 70

ಬೈರ್‌ಸ್ಟೋವ್ ಬಿ ಯಾದವ್ 53

ರಶೀದ್ ಅಜೇಯ 32

ಅನ್ಸಾರಿ ಎಲ್‌ಬಿಡಬ್ಲು ಜಡೇಜ 04

ಬ್ರಾಡ್ ಎಲ್‌ಬಿಡಬ್ಲು ಅಶ್ವಿನ್ 13

ಆ್ಯಂಡರ್ಸನ್ ಎಲ್‌ಬಿಡಬ್ಲು ಅಶ್ವಿನ್ 00

ಇತರ 09

ವಿಕೆಟ್ ಪತನ: 1-4, 2-51, 3-72, 4-79, 5-80, 6-190, 7-225, 8-234, 9-255, 10-255.

ಬೌಲಿಂಗ್ ವಿವರ:

ಮುಹಮ್ಮದ್ ಶಮಿ 14-5-28-1

ಉಮೇಶ್ ಯಾದವ್ 18-2-56-1

ರವೀಂದ್ರ ಜಡೇಜ 29-10-57-1

ಅಶ್ವಿನ್ 29.5-6-67-5

ಜಯಂತ್ ಯಾದವ್ 12-3-38-1.

ಭಾರತ ದ್ವಿತೀಯ ಇನಿಂಗ್ಸ್: 34 ಓವರ್‌ಗಳಲ್ಲಿ 98/3

ಮುರಳಿ ವಿಜಯ್ ಸಿ ರೂಟ್ ಬಿ ಬ್ರಾಡ್ 03

ಕೆಎಲ್ ರಾಹುಲ್ ಸಿ ಬೈರ್‌ಸ್ಟೋವ್ ಬಿ ಬ್ರಾಡ್ 10

ಪೂಜಾರ ಬಿ ಆ್ಯಂಡರ್ಸನ್ 01

ವಿರಾಟ್ ಕೊಹ್ಲಿ ಅಜೇಯ 56

ಅಜಿಂಕ್ಯ ರಹಾನೆ ಅಜೇಯ 22

ಇತರ 06

ವಿಕೆಟ್ ಪತನ: 1-16, 2-17, 3-40

ಬೌಲಿಂಗ್ ವಿವರ:

ಜೇಮ್ಸ್ ಆ್ಯಂಡರ್ಸನ್ 8-1-16-1

ಸ್ಟುವರ್ಟ್ ಬ್ರಾಡ್ 6-5-6-2

ರಶೀದ್ 12-1-37-0

ಸ್ಟೋಕ್ಸ್ 5-0-25-0

ಮೊಯಿನ್ ಅಲಿ 3-1-9-0.

ಅಂಕಿ-ಅಂಶ

1,759: ಇಂಗ್ಲೆಂಡ್ ತಂಡ 2016ರಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಆರನೆ ವಿಕೆಟ್ ಜೊತೆಯಾಟದಲ್ಲಿ ಒಟ್ಟು 1,759 ರನ್ ಗಳಿಸಿದೆ. ಕ್ಯಾಲೆಂಡರ್ ವರ್ಷದಲ್ಲಿ ತಂಡವೊಂದು ದಾಖಲಿಸಿದ 4ನೆ ಗರಿಷ್ಠ ಜೊತೆಯಾಟ ಇದಾಗಿದೆ. 2006ರಲ್ಲಿ ಪಾಕಿಸ್ತಾನ 6ನೆ ವಿಕೆಟ್‌ಗೆ 2,341 ರನ್ ಗಳಿಸಿರುವುದು ಈವರೆಗಿನ ಗರಿಷ್ಠ ಜೊತೆಯಾಟ. ಮುಹಮ್ಮದ್ ಯೂಸೂಫ್ ಹಾಗೂ ಯೂನಿಸ್‌ಖಾನ್ 11 ಇನಿಂಗ್ಸ್‌ಗಳಲ್ಲಿ 1530 ರನ್ ಗಳಿಸಿದ್ದರು.

772: ಬೆನ್ ಸ್ಟೋಕ್ಸ್ ಹಾಗೂ ಜಾನ್ ಬೈರ್‌ಸ್ಟೋವ್ 2016ರಲ್ಲಿ 772 ರನ್ ಜೊತೆಯಾಟ ನಡೆಸಿದ್ದಾರೆ.

04: ನಾಲ್ಕು ತಂಡಗಳು 2016ರಲ್ಲಿ 6ನೆ ವಿಕೆಟ್‌ನಲ್ಲಿ 50ಕ್ಕೂ ಅಧಿಕ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿವೆ. ಇಂಗ್ಲೆಂಡ್, ಭಾರತ, ಶ್ರೀಲಂಕಾ ಹಾಗೂ ದಕ್ಷಿಣ ಆಫ್ರಿಕ ಈ ಸಾಧನೆ ಮಾಡಿವೆ.

60.46: ಬೆನ್ ಸ್ಟೋಕ್ಸ್ 2016ರಲ್ಲಿ 60.46ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಅವರು ಈ ವರ್ಷ 14 ಇನಿಂಗ್ಸ್‌ಗಳಲ್ಲಿ 786 ರನ್ ಗಳಿಸಿದ್ದಾರೆ. ಇತರ ಇಬ್ಬರು ಬ್ಯಾಟ್ಸ್‌ಮನ್‌ಗಳಾದ ಬೈರ್‌ಸ್ಟೋವ್ ಹಾಗೂ ವಿರಾಟ್ ಕೊಹ್ಲಿ ಈ ವರ್ಷ 60ರ ಸರಾಸರಿಯಲ್ಲಿ 750ಕ್ಕೂ ಅಧಿಕ ರನ್ ಗಳಿಸಿದ್ದಾರೆ.

09: ಬೈರ್‌ಸ್ಟೋವ್ 2016ರಲ್ಲಿ 9ನೆ ಬಾರಿ ಟೆಸ್ಟ್ ಕ್ರಿಕೆಟ್‌ನಲ್ಲಿ 50ಕ್ಕೂ ಅಧಿಕ ರನ್ ಗಳಿಸಿದ್ದಾರೆ. ಕ್ಯಾಲೆಂಡರ್ ವರ್ಷದಲ್ಲಿ ಗರಿಷ್ಠ ರನ್ ಗಳಿಸಿದ ವಿಕೆಟ್‌ಕೀಪರ್ ದಾಖಲೆಯನ್ನು ಸರಿಗಟ್ಟಿದ್ದಾರೆ. ದಕ್ಷಿಣ ಆಫ್ರಿಕದ ಎಬಿಡಿ ವಿಲಿಯರ್ಸ್ 2013ರಲ್ಲಿ 9 ಅರ್ಧಶತಕ ಬಾರಿಸಿದ್ದರು.

22: ಆರ್.ಅಶ್ವಿನ್ ಕೇವಲ 41 ಟೆಸ್ಟ್ ಪಂದ್ಯಗಳಲ್ಲಿ 22ನೆ ಬಾರಿ ಐದು ವಿಕೆಟ್ ಕಬಳಿಸಿದ್ದಾರೆ. ಭಾರತದ ಪರ ಕೇವಲ ಮೂರು ಬೌಲರ್‌ಗಳು ಮಾತ್ರ ಗರಿಷ್ಠ ಬಾರಿ ಐದು ವಿಕೆಟ್ ಗೊಂಚಲು ಪಡೆದಿದ್ದಾರೆ. ಅವರುಗಳೆಂದರೆ: ಅನಿಲ್ ಕುಂಬ್ಳೆ(132 ಪಂದ್ಯ, 32ಬಾರಿ 5 ವಿಕೆಟ್), ಹರ್ಭಜನ್ ಸಿಂಗ್(103 ಪಂದ್ಯ 25) ಹಾಗೂ ಕಪಿಲ್‌ದೇವ್(131 ಪಂದ್ಯ, 23). ಒಟ್ಟು 14 ಬೌಲರ್‌ಗಳು ಗರಿಷ್ಠ ಬಾರಿ ಐದು ವಿಕೆಟ್ ಗೊಂಚಲು ಕಬಳಿಸಿದ್ದಾರೆ. 22 ಬಾರಿ ಐದು ವಿಕೆಟ್ ಗೊಂಚಲು ಪಡೆದಿರುವ ಅಶ್ವಿನ್ ಅವರು ವಕಾರ್ ಯೂನಿಸ್, ಮಾಲ್ಕಂ ಮಾರ್ಷಲ್, ಕರ್ಟ್ಲಿ ಅಂಬ್ರೊಸ್ ಹಾಗೂ ಕರ್ಟ್ನಿ ವಾಲ್ಶ್ ದಾಖಲೆ ಸರಿಗಟ್ಟಿದ್ದಾರೆ.

ವಾಲ್ಶ್, ವಕಾರ್ ಕ್ಲಬ್‌ಗೆ ಅಶ್ವಿನ್ ಸೇರ್ಪಡೆ

ವಿಶಾಖಪಟ್ಟಣ, ನ.19: ಇಂಗ್ಲೆಂಡ್ ವಿರುದ್ಧ ಎರಡನೆ ಟೆಸ್ಟ್‌ನಲ್ಲಿ ಐದು ವಿಕೆಟ್ ಗೊಂಚಲನ್ನು ಕಬಳಿಸಿದ ಭಾರತದ ಪ್ರಮುಖ ಸ್ಪಿನ್ನರ್ ಆರ್.ಅಶ್ವಿನ್ ವಿಶ್ವಶ್ರೇಷ್ಠ ಬೌಲರ್‌ಗಳ ಪಟ್ಟಿಗೆ ಸೇರ್ಪಡೆಯಾದರು.

 ತಾನಾಡಿದ 41ನೆ ಟೆಸ್ಟ್‌ನಲ್ಲಿ 22ನೆ ಬಾರಿ ಐದು ವಿಕೆಟ್‌ಗಳ ಗೊಂಚಲು ಪಡೆದ ಅಶ್ವಿನ್ ವಿಶ್ವದ ಮಾಜಿ ಕ್ರಿಕೆಟಿಗರಾದ , ಕರ್ಟ್ಲಿ  ವಾಲ್ಶ್, ವಕಾರ್ ಯೂನಿಸ್, ಕರ್ಟ್ಲಿ ಆಂಬ್ರೊಸ್ ಹಾಗೂ ಮಾಲ್ಕಂ ಮಾರ್ಷಲ್‌ರ ಕ್ಲಬ್‌ಗೆ ಸೇರ್ಪಡೆಯಾದರು.

3ನೆ ದಿನದಾಟವಾದ ಶನಿವಾರ ಇಂಗ್ಲೆಂಡ್‌ನ ಪರ ಸರ್ವಾಧಿಕ ರನ್ ಬಾರಿಸಿದ ಬೆನ್ ಸ್ಟೋಕ್ಸ್ ವಿಕೆಟ್ ಕಬಳಿಸಿದ ಅಶ್ವಿನ್ ಭಾರತಕ್ಕೆ ಮೇಲುಗೈ ಒದಗಿಸಿಕೊಟ್ಟರು. ಸತತ ಎಸೆತಗಳಲ್ಲಿ ಸ್ಟುವರ್ಟ್ ಬ್ರಾಡ್ ಹಾಗೂ ಜೇಮ್ಸ್ ಆ್ಯಂಡರ್ಸನ್‌ರನ್ನು ಪೆವಿಲಿಯನ್‌ಗೆ ಕಳುಹಿಸಿದ ಅವರು ಐದು ವಿಕೆಟ್ ಪೂರೈಸಿದರು. ಅಶ್ವಿನ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ಬಾರಿ 5 ವಿಕೆಟ್ ಗೊಂಚಲು ಕಬಳಿಸಿದರು.

 ಅಶ್ವಿನ್ ಇದೀಗ ಪಾಕಿಸ್ತಾನ ಹಾಗೂ ಝಿಂಬಾಬ್ವೆ ಹೊರತುಪಡಿಸಿ ಟೆಸ್ಟ್ ಆಡುವ ಎಲ್ಲ ದೇಶಗಳ ವಿರುದ್ಧ ಐದು ವಿಕೆಟ್ ಗೊಂಚಲು ಪಡೆದ ಸಾಧನೆ ಮಾಡಿದ್ದಾರೆ. ಗರಿಷ್ಠ ಐದು ವಿಕೆಟ್ ಗೊಂಚಲು ಕಬಳಿಸಿದ ವಿಶ್ವ ಬೌಲರ್‌ಗಳ ಪಟ್ಟಿಯಲ್ಲಿ ಅಶ್ವಿನ್ 15ನೆ ಸ್ಥಾನದಲ್ಲಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X