ಕಳ್ಳಭಟ್ಟಿ ದಂಧೆ: ಅಬಕಾರಿ ಪೊಲೀಸರಿಂದ ಕಾರ್ಯಾಚರಣೆ
ಮೂಡಿಗೆರೆ, ನ.19: ತಾಲೂಕಿನ ಕೆಸವಳಲು ಗ್ರಾಮದಲ್ಲಿ ಅಬಕಾರಿ ಪೊಲೀಸರು ದಾಳಿ ನಡೆಸಿದ್ದು, ಎರಡು ಪ್ರತ್ಯೇಕ ಸ್ಥಳಗಳಲ್ಲಿ ಕಳ್ಳಭಟ್ಟಿ ಸಾರಾಯಿ ತಯಾರಕರನ್ನು ಪತ್ತೆಹಚ್ಚಿ, ಮಾಲು ಸಹಿತ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೋರ್ವ ಆರೋಪಿ ತಲೆಮರೆಸಿ ಕೊಂಡಿದ್ದಾನೆ.
ಸ್ಥಳೀಯರಾದ ಚಂದ್ರಶೇಖರ, ಜಯರಾಮ್ ಎಂಬವರ ಎರಡು ಮನೆಗಳಿಗೆ ದಾಳಿ ನಡೆಸಿದ್ದು, ಒಟ್ಟು 8 ಲೀಟರ್ ಕಳ್ಳಭಟ್ಟಿ ಸಾರಾ ಯಿ, 130 ಲೀಟರ್ ಬೆಲ್ಲದ ಕೊಳೆ ಹಾಗೂ ಕಳ್ಳಭಟ್ಟಿ ತಯಾರಿಕಾ ಪರಿಕರಗಳನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ. ಚಂದ್ರಶೇಖರ್, ತ್ರಿವೇಣಿ, ರಚಿತಾ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದ್ದು, ತನಿಖೆ ಮುಂದುವರಿದಿದೆ. ಇನ್ನೋರ್ವ ಆರೋಪಿ ಜಯರಾಮ್ ಪರಾರಿಯಾಗಿದ್ದಾನೆ. ಚಿಕ್ಕಮಗಳೂರು ಉಪ ಆಯುಕ್ತ ಸ್ಯಾಮೂಲ್ ಮೋಸಸ್ ಮಾರ್ಗದರ್ಶನದಲ್ಲಿ, ಮೂಡಿಗೆರೆ ಉಪ ವಿಭಾಗದ ಉಪ ಅಧೀಕ್ಷಕ ಸಂತೋಷ್ ನೇತೃತ್ವದಲ್ಲಿ ದಾಳಿ ನಡೆಯಿತು. ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದರು.
Next Story





