ದಮ್ಮಾಮ್: ಕೆಸಿಎಫ್‌ನ ಅಲ್ ರಬೀ ಯೂನಿಟ್‌ಗೆ ಚಾಲನೆ

ದಮ್ಮಾಮ್, ನ.19: ಕೆಸಿಎಫ್ ದಮ್ಮಾಮ್ ಸೆಕ್ಟರ್ ಅಧೀನದಲ್ಲಿ 4ನೆ ಹೊಸ ಅಲ್ ರಬೀ ಯೂನಿಟ್‌ಗೆ ಚಾಲನೆಯನ್ನು ನೀಡಲಾಯಿತು.
ಝೋನ್ ಪ್ರಧಾನ ಕಾರ್ಯದರ್ಶಿ ಫೈಝಲ್ ಕೃಷ್ಣಾಪುರ ನೇತೃತ್ವದಲ್ಲಿ ಹೊಸ ಯೂನಿಟ್‌ನ್ನು ರಚಿಸಲಾಯಿತು. ನೂತನ ಅಲ್ ರಬೀ ಯೂನಿಟ್‌ನ ಅಧ್ಯಕ್ಷರಾಗಿ ಅಬೂಬಕರ್ ಕೋಡಿ, ಪ್ರಧಾನ ಕಾರ್ಯದಶಿಯಾಗಿ ನೌಷಾದ್ ತಲಪಾಡಿ ಹಾಗೂ ಕೋಶಾಧಿಕಾರಿಯಾಗಿ ನೌಷಾದ್ ಪೊಲ್ಯರನ್ನು ಆಯ್ಕೆ ಮಾಡಲಾಯಿತು.
ಕರ್ನಾಟಕ ಸುನ್ನಿ ವಿದ್ಯಾರ್ಥಿ ಸಂಘಟನೆಯ ಮಾಜಿ ರಾಜ್ಯಾಧ್ಯಕ್ಷ, ಸಅದಿಯ ದಮ್ಮಾಮ್ ಆರ್ಗನೈಸರ್ ಯೂಸುಫ್ ಸಅದಿ ಅಯ್ಯಂಗೇರಿ ಮಾತನಾಡಿ, ಕೆಸಿಎಫ್‌ನಲ್ಲಿರುವ ಸಂಸ್ಕೃತಿಯನ್ನುಜೀವನದಲ್ಲಿ ಅಳವಡಿಸಬೇಕೆಂದು ಕರೆ ನೀಡಿ ನೂತನ ಸಮಿತಿಗೆ ಶುಭಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೆಕ್ಟರ್ ಅಧ್ಯಕ್ಷ ಹಬೀಬ್ ಸಖಾಫಿ ವಹಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಸಲೀಂ ಮದನಿ ದುಆ ನೆರೆವೇರಿಸಿದರು. ಝೋನ್ ಅಧ್ಯಕ್ಷ ಅಝೀಝ್ ಸಅದಿ ಉದ್ಘಾಟಿಸಿದರು. ಐಎಫ್‌ಸಿ ನಾಯಕ ಅಬೂಬಕರ್ ಪಡುಬಿದ್ರೆ ಉಪಸ್ಥಿತರಿದ್ದರು.
ದವಾಸಿರ್ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಕೈರಂಗಳ ಸ್ವಾಗತಿಸಿದರು. ಸೌದಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಫಾರೂಕ್ ಕಾಟಿಪಳ್ಳ ಪ್ರಾಸ್ತಾವಿಕವಾಗಿ ಮಾತನಾಡಿದರು. ನೌಷಾದ್ ತಲಪಾಡಿ ಕಾರ್ಯಕ್ರಮ ನಿರೂಪಿಸಿದರು. ಹನೀಫ್ ಮಂಜನಾಡಿ ವಂದಿಸಿದರು.







