Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಪ್ರಧಾನಿಗೆ ಮಾಜಿ ಆಪ್ತನ ಬಹಿರಂಗ ಪತ್ರ

ಪ್ರಧಾನಿಗೆ ಮಾಜಿ ಆಪ್ತನ ಬಹಿರಂಗ ಪತ್ರ

ವಾರ್ತಾಭಾರತಿವಾರ್ತಾಭಾರತಿ19 Nov 2016 11:58 PM IST
share
ಪ್ರಧಾನಿಗೆ ಮಾಜಿ ಆಪ್ತನ ಬಹಿರಂಗ ಪತ್ರ

ಗುಜರಾತ್ ರಾಜ್ಯದ ಮಾಜಿ ಬಿಜೆಪಿ ಶಾಸಕ ಹಾಗೂ ಪ್ರಧಾನಿ ನರೇಂದ್ರ ಮೋದಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಒಂದೊಮ್ಮೆ ಅವರ ಆಪ್ತರಾಗಿದ್ದ ಯತಿನ್ ಓಝಾ ಅವರು ಪ್ರಧಾನಿಗೆ ಬಹಿರಂಗ ಪತ್ರವೊಂದನ್ನು ಬರೆದಿದ್ದು, ಅದರಲ್ಲಿ ಅವರು ಇತ್ತೀಚೆಗಿನ 500 ಹಾಗೂ 1000 ಮುಖಬೆಲೆಯ ರೂ. ನೋಟು ರದ್ದತಿಯ ಬಗ್ಗೆ ಪ್ರಸ್ತಾಪಿಸುತ್ತಾ ಪ್ರಧಾನಿ ದೇಶದ ಜನರನ್ನು ಮೂರ್ಖರನ್ನಾಗಿಸಿದ್ದಾರೆ ಎಂದು ಆರೋಪಿಸಿದ್ದಾರೆ.
 ಬಿಜೆಪಿಯೊಂದಿಗೆ ನಿಕಟ ಸಂಬಂಧ ಹೊಂದಿರುವ ಜನರಿಂದ ನಿಯಂತ್ರಿಸಲ್ಪಟ್ಟ ಗುಜರಾತ್ ರಾಜ್ಯದ ಹಲವು ಜಿಲ್ಲಾ ಸಹಕಾರಿ ಬ್ಯಾಂಕುಗಳು ನವೆಂಬರ್ 8 ರ ರಾತ್ರಿ 8 ಗಂಟೆಯಿಂದ ನವೆಂಬರ್ 9 ರ ಬೆಳಗ್ಗೆ 5 ಗಂಟೆಯ ತನಕ ರದ್ದಾದ 500 ಹಾಗೂ 1000 ರೂ. ನೋಟುಗಳನ್ನು ಸಣ್ಣ ಮುಖಬೆಲೆಯ ನೋಟುಗಳಿಗೆ ವಿನಿಮಯ ಮಾಡಿಕೊಟ್ಟಿದ್ದವು ಎಂದು ಅವರು ಅರೋಪಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಆಪ್ತರು ಪ್ರಧಾನಿ ನವೆಂಬರ್ 8ರಂದು ನೋಟು ರದ್ದತಿ ಬಗ್ಗೆ ಘೋಷಿಸಿದಂದಿನಿಂದ ಹಣ ವಿನಿಮಯ ದಂಧೆಯಲ್ಲಿ ತೊಡಗಿದ್ದಾರೆ ಹಾಗೂ ಈ ಬಗೆಗಿನ ವೀಡಿಯೊ ಆಧಾರ ತನ್ನ ಬಳಿ ಇದೆ ಎಂದು ಹೇಳಿದ ಅವರು, ತಾನು ತಪ್ಪು ಹೇಳಿದ್ದೇನೆಂದಾದರೆ ಪ್ರಧಾನಿ ಅದನ್ನು ಸಾಬೀತುಪಡಿಸಲಿ ಎಂದು ಪ್ರಧಾನಿಗೆ ಸವಾಲು ಹಾಕಿದ್ದಾರೆ. ನವೆಂಬರ್ 15 ದಿನಾಂಕ ನಮೂದಿಸಲ್ಪ ಟ್ಟಿರುವ ಈ ಪತ್ರ ಈಗ ಸಾಮಾಜಿಕ ಜಾಲತಾಣಗ ಲ್ಲಿ ವೈರಲ್ ಆಗಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ರಾಜಕೀಯ ಗುರುವೆಂದೇ ಯತಿ್ ಓಝಾ ಹಿಂದೆಲ್ಲಾ ಗುರುತಿಸಲ್ಪಡುತ್ತಿದ್ದರು. ಅವರು ಜುಲೈ 2016 ರಲ್ಲಿ ಆಮ್ ಆದ್ಮಿ ಪಕ್ಷ ಸೇರಿದ್ದರು.
*****

 ಯತಿನ್ ಓಝಾ ಅವರು ಪ್ರಧಾನಿ ನರೇಂದ್ರ ಮೋದಿಗೆ ಬರೆದ ಬಹಿರಂಗ ಪತ್ರದ ಕನ್ನಡಾನುವಾದ ಇಲ್ಲಿದೆ ಓದಿ : ಇಂಡಿಯಾ ಸಂವಾದ್ ಈ ಪತ್ರವನ್ನು ಫೇಸ್ಬುಕ್ ಪೋಸ್ಟ್ ಒಂದರಿಂದ ಎತ್ತಿದೆ.
 
ಪ್ರೀತಿಯ ನರೇಂದ್ರ ಭಾಯಿ,
 ಈ ಪತ್ರ ನಿಮ್ಮನ್ನು ತಲುಪಿದಾಗ ನೀವು ಆರೋಗ್ಯವಂತರಾಗಿಯೂ, ಸಂತಸದಿಂದಲೂ ಇರುತ್ತೀರೆಂದು ನಂಬುತ್ತೇನೆ.
  ನವೆಂಬರ್ 8, 2016 ರಂದು ನೋಟು ರದ್ದತಿ ಬಗ್ಗೆ ನಿಮ್ಮ ಭಾಷಣ ಆಲಿಸಿದ ನಂತರ ನನಗೆ ತುಂಬಾ ಸಂತೋಷವಾಗಿತ್ತು ಹಾಗೂ ಒಳಗಿಂದೊಳಗೇ ನಿಮ್ಮ ಈ ನಿರ್ಭೀತ ಹಾಗೂ ಐತಿಹಾಸಿಕ ಕ್ರಮಕ್ಕಾಗಿ ನಿಮಗೆ ಅಭಿನಂದನೆ ಸಲ್ಲಿಸಿದೆ. ಆದರೆ ದುರದೃಷ್ಟವೋ ಎಂಬಂತೆ ಆ ಸಂತಸ ಬಹಳ ಕಾಲ ಬಾಳಲಿಲ್ಲ. ನವೆಂಬರ್ 9 ರ ಬೆಳಗ್ಗೆ ತುಂಬಾ ಹತ್ತಿರದರೊಬ್ಬರು ನನಗೆ ನೀಡಿದ ಮಾಹಿತಿಯಂತೆ, ನಿನ್ನೆ, ಅಂದರೆ ನವೆಂಬರ್ 8 ರ ಅಪರಾಹ್ನ 12 ಗಂಟೆಯ ಹೊತ್ತಿಗೆ ಅಹ್ಮದಾಬಾದಿನ ಪ್ರಮುಖ ಕೈಗಾರಿಕೋದ್ಯಮಿಯೊಬ್ಬರ ಪತ್ನಿ ಖ್ಯಾತ ಚಿನ್ನಾಭರಣದ ಅಂಗಡಿಯೊಂದಕ್ಕೆ ಆಗಮಿಸಿ ಮುಂಚಿತವಾಗಿ ಆರ್ಡರ್ ನೀಡಿದಾನುಸಾರ 20 ಕೋಟಿ ರೂ. ವೌಲ್ಯದ ಚಿನ್ನಾಭರಣ ಖರೀದಿಸಿದ್ದರು. ಚಿನ್ನಾಭರಣ ತಯಾರಾಗಿತ್ತು ಹಾಗೂ ಅದನ್ನು ಪ್ಯಾಕ್ ಕೂಡ ಮಾಡಲಾಗಿತ್ತು. ಚಿನ್ನ ಹಾಗೂ ಹಣವನ್ನು ಅದಲು ಬದಲು ಮಾಡಲು ಕೇವಲ ಎರಡು ನಿಮಿಷ ತೆಗೆದುಕೊಂಡಿತು. ನನಗೆ ಹತ್ತಿರದವರೊಬ್ಬರು ಆ ಸಂದರ್ಭ ಆ ಅಂಗಡಿಯಲ್ಲಿದ್ದು ಆಕೆ ಮೊದಲೇ ಆರ್ಡರ್ ಕೊಡಲಾಗಿದ್ದ 5 ಲಕ್ಷ ರೂ. ವೌಲ್ಯದ ಚಿನ್ನಾಭರಣ ಖರೀದಿಸಲು ಆಗಮಿಸಿದ್ದರು. ಆಕೆ ಒಬ್ಬರು ಪ್ರಮುಖ ಹಾಗೂ ಗೌರವಾನ್ವಿತ ವೈದ್ಯೆಯಾಗಿದ್ದಾರೆ.
   ನಿಮ್ಮಂದಿಗೆ ನಿಕಟವಾಗಿ ಕೆಲಸ ಮಾಡಿದ ಅನುಭವವಿರುವ ನನಗೆ ಆಗ ನೋಟು ರದ್ದತಿಯ ವಿಚಾರ ಅದನ್ನು ಘೋಷಣೆ ಮಾಡುವ ಮುನ್ನವೇ ಈ ದೇಶದಲ್ಲಿರುವ ಶೇ.50 ರಷ್ಟು ಕಪ್ಪು ಹಣವನ್ನು ನಿಯಂತ್ರಿಸುವ ನಿಮ್ಮ ಆತ್ಮೀಯ ಕೈಗಾರಿಕೋದ್ಯಮಿಗಳಿಗೆ ಮೊದಲೇ ಮಾಹಿತಿ ನೀಡಲಾಗಿತ್ತು ಎಂದು ತಿಳಿದು ಬಂದಿತ್ತು. ಈ ಬಗ್ಗೆ ಇಡೀ ದಿನ ಯೋಚಿಸಿ ಈ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಆಶ್ಚರ್ಯವಾಗಿತ್ತು. ನೀವು ಇಂತಹ ಜನಪ್ರಿಯತೆ ಗಿಟ್ಟಿಸುವ ಕ್ರಮಕ್ಕೆ ಕೈಹಾಕಿ ದೇಶ ಜನರನ್ನು ಮೂರ್ಖರನ್ನಾಗಿಸಿದ್ದೀರಿ.
        ವಾಸ್ತವವಾಗಿ ನಿಮ್ಮ ಮೇಲಿನ ಕ್ರಮ ನಿಮ್ಮ ಹತ್ತಿರದವರನ್ನು ಹಾಗೂ ಪ್ರೀತಿಪಾತ್ರರನ್ನು, ನಿಮ್ಮ ಪಕ್ಷವನ್ನು ಹಾಗೂ ನಿಮ್ಮ ಪಕ್ಷದ ಸದಸ್ಯರನ್ನು ದೇಶದ ಹಿತಾಸಕ್ತಿಯನ್ನು ಬಲಿಗೊಟ್ಟು ಉದ್ಧಾರ ಮಾಡುವುದಾಗಿದೆ. ಶ್ರೀ ಅಮಿತ್ ಶಾ ಅವರ ಎಲ್ಲಾ ಆಪ್ತರು ನವೆಂಬರ್ 8 ರಿಂದ ಇಲ್ಲಿಯ ತನಕ ಹಣ ವಿನಿಮಯ ದಂಧೆಯಲ್ಲಿ ತೊಡಗಿದ್ದಾರೆಂಬುದನ್ನು ಸ್ಪಷ್ಟವಾಗಿ ತಿಳಿಸುವ ವೀಡಿಯೊ ರೆಕಾರ್ಡಿಂಗ್ ನನ್ನ ಬಳಿ ಇದೆ. ಅವರೆಲ್ಲರ ಕಚೇರಿ ಹಾಗೂ ನಿವಾಸಗಳ ಹೊರಗೆ ದೊಡ್ಡ ಸರತಿ ಸಾಲಿದ್ದು ಅಲ್ಲಿ ಕಪ್ಪು ಹಣವನ್ನು ಶೇ.37 ರಷ್ಟು ವಿನಾಯಿತಿ ದರದಲ್ಲಿ ಬಿಳಿಯಾಗಿಸಲಾಗುತ್ತದೆ. ಅಲ್ಲಿಗೆ ಒಬ್ಬರು ಯಾವುದೇ ಗುರುತು ಪತ್ರ ಇಲ್ಲದೆ ಕನಿಷ್ಠ ಒಂದು ಕೋಟಿ ರೂಪಾಯಿ ಹಿಡಿದುಕೊಂಡು ಹೋದರೆ ಅಲ್ಲಿ ಅದನ್ನು ಉದ್ಯೋಗಿಗಳು ಎಣಿಸಿ ನಂತರ ರೂ 63 ಲಕ್ಷ ರೂ. ವೌಲ್ಯದ ನೋಟುಗಳಿರುವ ಚೀಲಗಳನ್ನು ಅವರಿಗೆ ನೀಡಲಾಗುತ್ತಿದೆ. ಆ ವೀಡಿಯೊವನ್ನು ನಾನು ಸುಲಭವಾಗಿ ಬಹಿರಂಗಪಡಿಸಬಹುದಾಗಿತ್ತು, ಆದರೆ ನನಗೆ ನಿಮ್ಮ ಬಗ್ಗೆ ಗೊತ್ತಿದೆ. ನೀವು ಆ ಸರತಿಯಲ್ಲಿ ನಿಂತಿದ್ದವರನ್ನು ಶಿಕ್ಷಿಸಬಹುದೇ ವಿನಃ ಅಮಿತ್ ಶಾ ಅವರಿಗೆ ಹತ್ತಿರದವರಾಗಿರುವ ಹಾಗೂ ಈ ಹಣ ವಿನಿಮಯ ದಂಧೆಯಲ್ಲಿ ತೊಡಗಿರುವವರನ್ನು ನೀವು ಶಿಕ್ಷಿಸಲಿಕ್ಕಿಲ್ಲ. ಆದರೆ ಆ ವೀಡಿಯೊವನ್ನು ನಾನು ಇಬ್ಬರು ಮೂವರು ಹಿರಿಯ ಪತ್ರಕರ್ತರಿಗೆ ತೋರಿಸುತ್ತೇನೆ ಹಾಗೂ ನಂತರ ನಿಮಗೆ ಮಾಹಿತಿ ನೀಡುತ್ತೇನೆ, ನೀವು ಪತ್ರಕರ್ತರಿಂದ ನನ್ನ ಹೇಳಿಕೆಯಲ್ಲಿನ ವಾಸ್ತವಾಂಶಗಳನ್ನು ಪರಿಶೀಲಿಸಬಹುದು.
ಜಿಲ್ಲಾ ಸಹಕಾರಿ ಬ್ಯಾಂಕುಗಳ ಹಂತದಲ್ಲಿ ವ್ಯಾಪಕ ಅಕ್ರಮಗಳು ನಡೆಯುತ್ತವೆ ಎಂಬ ಮಾಹಿತಿ ದೊರೆತ ನಂತರ ನೀವು ಈ ಬ್ಯಾಂಕುಗಳು ನೋಟು ವಿನಿಮಯ ಮಾಡುವುದನ್ನು ನಿಷೇಧಿಸಿದ್ದೀರೆಂದು ನಿಮ್ಮನ್ನು ತಿಳಿದವರು ಒಪ್ಪಲು ನಿರಾಕರಿಸಬಹುದು. ನಿಮ್ಮ ವೈರಿ ಕೂಡ ನಿಮ್ಮ ಸಾಮರ್ಥ್ಯ ಹಾಗೂ ಬುದ್ಧಿವಂತಿಕೆಯನ್ನು ಗೌರವಿಸುತ್ತಾನೆ. ಇಂತಹ ಒಂದು ಪ್ರಮುಖ ವಿಚಾರ ನಿಮ್ಮ ಮನಸ್ಸಿನ ಹೊರಗಿರಲಿಕ್ಕಿಲ್ಲ ಎಂಬುದು ಸ್ಪಷ್ಟ. ನೀವು ಕೈಗೊಳ್ಳುವ ಕ್ರಮದ ಸಂಪೂರ್ಣ ಚಿತ್ರಣ ನಿಮ್ಮ ಮನಸ್ಸಿನಲ್ಲಿರುವ ತನಕ ನೀವು ಯಾವುದೇ ಕ್ರಮಕ್ಕೆ ಮುಂದಾಗುವುದಿಲ್ಲ ಎಂಬುದು ನನಗೆ ತಿಳಿದಿದೆ. ನೀವು ಯಾವುದೇ ಕ್ರಮ ಕೈಗೊಳ್ಳುವ ಮುನ್ನ ಅದರ ಉತ್ತಮ ಹಾಗೂ ಅಡ್ಡ ಪರಿಣಾಮಗಳೂ ನಿಮ್ಮ ಮನಸ್ಸಿನಲ್ಲಿರುತ್ತದೆ. ಗುಜರಾತ್ ರಾಜ್ಯದ ಎಲ್ಲಾ ಜಿಲ್ಲಾ ಸಹಕಾರಿ ಬ್ಯಾಂಕ್‌ಗಳು ಬಿಜೆಪಿಯ ಜನರ ನಿಯಂತ್ರಣದಲ್ಲಿರುವುದರಿಂದ ಈ ಬ್ಯಾಂಕ್‌ಗಳು 8-11-2016 ರ ರಾತ್ರಿ 9 ಗಂಟೆಯಿಂದ 9-11-2016 ರಂದು ಬೆಳಗ್ಗೆ 5 ಗಂಟೆಯ ತನಕ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ಸಣ್ಣ ವೌಲ್ಯದ ಸಮಾನ ವೌಲ್ಯದ ನೋಟುಗಳಿಗೆ ವಿನಿಮಯ ಮಾಡಿದೆ. ನೀವು ಆರ್‌ಬಿಐ ಮುಖಾಂತರ ದೇಶದ ಎಲ್ಲಾ ಬ್ಯಾಂಕುಗಳಲ್ಲಿ 8-11-2016 ರಂದು ಇದ್ದ ನಗದು ಹಾಗೂ ಅವು ಯಾವ ಮುಖಬೆಲೆಯ ನೋಟುಗಳು ಎಂಬ ಬಗ್ಗೆ ಮಾಹಿತಿ ಕೇಳಿದ್ದೀರಿ. ನನ್ನ ಮೇಲಿನ ಹೇಳಿಕೆಯ ಸತ್ಯಾಸತ್ಯತೆಯನ್ನು ನೀವು ಪರಿಶೀಲಿಸಬಹುದು. ನಾನು ಹೇಳಿದ್ದು ತಪ್ಪು ಎಂದು ಸಾಬೀತಾದರೆ ನಾನು ಸಾರ್ವಜನಿಕವಾಗಿ ಕ್ಷಮೆಯಾಚಿಸುತ್ತೇನೆ.
   ತಿಮಿಂಗಿಲಗಳನ್ನು ಬಿಟ್ಟು ಬಿಡಲಾಗಿದೆ ಹಾಗೂ ನಿಮ್ಮ ಆತ್ಮೀಯ ಕೈಗಾರಿಕೋದ್ಯಮಿಗಳಿಗೆ ನೋಟು ರದ್ದತಿಯ ವಿಚಾರ ಮೊದಲೇ ತಿಳಿಸಲಾಗಿದೆ ಯೆಂದು ಜನರ ಮನಸ್ಸಿನಲ್ಲಿರುವ ಸಂಶಯವನ್ನು ನಿವಾರಿಸಲು ಭಾರತ ಸರಕಾರದ ಅಧಿಕೃತ ವೆಬ್‌ಸೈಟಿನಲ್ಲಿ ನೀವು ಒಂದು ಕೋಟಿಗೂ ಅಧಿಕ ಹಣ ಠೇವಣಿಯಿಟ್ಟವರು ಮಾಹಿತಿ ಬಹಿರಂಗಪಡಿಸಬೇಕೆಂದು ತಿಳಿಸಬೇಕು. ಭಾರತದ ಮೊದಲ 300 ಫಾರ್ಚೂನ್ ಕಂಪೆನಿಗಳ ಒಬ್ಬನೇ ಒಬ್ಬ ಅಧ್ಯಕ್ಷ, ಆಡಳಿತ ನಿರ್ದೇಶಕ ಯಾ ನಿರ್ದೇಶಕರು ಮುಂದೆ ಬಂದು ಮಾಹಿತಿ ನೀಡದೇ ಇದ್ದರೆ ನನ್ನ ಆರೋಪ ಸಾಬೀತಾದಂತೆಯೇ ಸರಿ. ರೂ. 4,000 ಹಾಗೂ ಅದಕ್ಕಿಂತಲೂ ಕೆಳಗಿನ ಠೇವಣಾತಿಗಾಗಿ ಜನರು ಹಸಿವು ಬಾಯಾರಿಕೆಯನ್ನು ಲೆಕ್ಕಿಸದೆ ಸರತಿ ನಿಂತಿದ್ದನ್ನು ನಾನು ನೋಡಿದ್ದೇನೆ. ಆದರೆ ಒಂದೇ ಒಂದು ಮರ್ಸಿಡಿಸ್, ಬಿಎಂ ಡಬ್ಲ್ಯು, ಆಡಿ, ವೊಲ್ವೊ, ಪೋರ್ಶೆ ಯಾ ರೇಂಜ್ ರೋವರ್ ವಾಹನಗಳು ಯಾವುದೇ ಬ್ಯಾಂಕಿನ ಹೊರಗಿರಲಿಲ್ಲ ಹಾಗೂ ಇಂತಹ ವಾಹನದ ಯಾವನೇ ಮಾಲಕ ಸರತಿಯಲ್ಲಿ ನಿಂತು ಹಣ ಹಿಂಪಡೆಯಲು ನಿಲ್ಲಲಿಲ್ಲ. ನಿಮ್ಮ ಪ್ರಕಾರ ಕಪ್ಪು ಹಣವನ್ನು ಬ್ಯಾಂಕು ಅಥವಾ ಎಟಿಎಂ ಎದುರು ಕ್ಯೂ ನಿಂತವರೇ ಶೇಖರಿಸಿರಬಹುದಲ್ಲದೆ ಮೇಲೆ ತಿಳಿಸಲಾದ ವಾಹನಗಳ ಮಾಲಕರು ಅಲ್ಲ.  ಈ ಮೇಲಿನ ಫಾರ್ಚೂನ್ 300 ಕೈಗಾರಿ ಕೋದ್ಯಮಿಗಳ ಹೊರತಾಗಿ ಬಿಲ್ಡರುಗಳು, ಗುತ್ತಿಗೆದಾರರು, ಸರಕಾರಿ ಗುತ್ತಿಗೆ ಪಡೆದ ವರು, ಗಣಿ ಉದ್ಯಮಿಗಳು,ಮುಖ್ಯವಾಗಿ ಕಬ್ಬಿಣದ ಅದಿರು ಗಣಿಯವರು ಇತರ ಕೈಗಾರಿಕೋದ್ಯಮಿಗಳು ಹಾಗೂ ರಾಜಕಾರಣಿಗಳು ಮತ್ತು ಅಧಿಕಾರಿಗಳು ಎಷ್ಟು ಹಣ ಠೇವಣಿಯಿರಿಸಿದ್ದಾರೆಂಬುದನ್ನು ಈ ದೇಶದ ಜನರು ತಿಳಿಯ ಬಯಸುತ್ತಾರೆ,
          ಯಾರು ಎಷ್ಟು ಹಣ ಠೇವಣಿಯಿರಿಸಿದ್ದಾರೆಂಬ ಮಾಹಿತಿ ನೀಡದ ಹೊರತು ಶೇ.50 ರಷ್ಟು ಕಪ್ಪು ಹಣ ಶೇಖರಿಸಿರುವ 10-12 ಕೈಗಾರಿಕೆಗಳ ಮಂದಿಗೆ ಮುಂಚಿತವಾಗಿ ಮಾಹಿತಿ ನೀಡಿ ನೀವು ಆಶೀರ್ವಾದ ಮಾಡಿದ್ದೀರೆಂಬುದು ಸಾಬೀತಾಗುತ್ತದೆ. ನೀವು ಒಂದು ಲಕ್ಷ ಕೋಟಿ ರೂ. ವೌಲ್ಯದ ಭೂಮಿ ಮಂಜೂರು ಮಾಡಿದ ಹೊರತಾಗಿಯೂ 7,000 ಜನರಿಗೆ ಉದ್ಯೋಗ ಒದಗಿಸದ ಆ 10-12 ಕೈಗಾರಿಕೆಗಳು ಮಾಡಿದ ಠೇವಣಿಯೆಷ್ಟು ಎಂಬುದನ್ನು ಬ್ಯಾಂಕುಗಳ ಎದುರು ಸರತಿ ನಿಲ್ಲುವ ಜನರಿಗೆ ಕನಿಷ್ಠ ತಿಳಿಯುವಂತಾಗಬೇಕು. 300 ರಿಂದ 400 ಕೋಟಿ ರೂ. ಠೇವಣಿಯಿರಿಸಿದ ವ್ಯಕ್ತಿಗಳು ಯಾರು ಎಂದು ವೆಬ್‌ಸೈಟ್‌ನಲ್ಲಿ ಠೇವಣಿಗಳ ಬಗ್ಗೆ ಮಾಹಿತಿ ಹಾಕಿದರೆ ತಿಳಿಯುವುದಲ್ಲದೆ ಹಾಗೂ ಅವರ ಠೇವಣಿಗಳು ಅವರು ಪಾವತಿಸುವ ಆದಾಯ ತೆರಿಗೆಗೆ ಹೊಂದಾಣಿಕೆಯಾಗದೇ ಇದ್ದಲ್ಲಿ ಆದಾಯ ತೆರಿಗೆ ಇಲಾಖೆ ಅವರ ವಿರುದ್ಧ ಯಾವ ಕ್ರಮ ಕೈಗೊಳ್ಳುವುದೆಂದು ತಿಳಿಸಬೇಕು. ಯಾರೆಲ್ಲ ಚಿನ್ನಾಭರಣ ಹಾಗೂ ವಜ್ರಾಭರಣಗಳನ್ನು 7 ಹಾಗೂ 8 ತಾರೀಕಿನಂದು ರಾತ್ರಿ 8 ಗಂಟೆಯ ಮೊದಲು ಖರೀದಿಸಿದ್ದರೆಂಬುದನ್ನು ವಿಚಾರಿಸಬೇಕೆಂದು ನಿಮಗೆ ವಿನಂತಿ. ದೊಡ್ಡ ಕುಳಗಳು ದೊಡ್ಡ ವೌಲ್ಯದ ಚಿನ್ನ ಹಾಗೂ ವಜ್ರಾಭರಣಗಳನ್ನು ಏಕೆ ಖರೀದಿಸುವಂತಾಯಿತು ಎಂದು ಜನರಿಗೆ ಆಗ ತಿಳಿಯುತ್ತದೆ.
 ಮೇಲೆ ಕೇಳಲಾದ ಮಾಹಿತಿಯನ್ನು ಭಾರತ ಸರಕಾರದ ಅಧಿಕೃತ ವೆಬ್‌ಸೈಟಿನಲ್ಲಿ ಶೇರ್ ಮಾಡುವಷ್ಟು ಉದಾರಿ ನೀವಾಗಬೇಕು ಹಾಗೆ ಮಾಡಿದಲ್ಲಿ ನೋಟು ರದ್ದತಿಯು ದೇಶದ ಹಿತಾಸಕ್ತಿಗಾಗಿ ಮಾಡಲಾಗಿದೆಯೇ ಅಥವಾ ನೇರವಾಗಿ ನಿಮಗೆ, ನಿಮ್ಮ ಪ್ರೀತಿ ಪಾತ್ರರಿಗೆ ಹಾಗೂ ನಿಮ್ಮ ಪಕ್ಷ ಕಾರ್ಯಕರ್ತರಿಗೆ ಸಹಾಯ ಮಾಡಲು ಮಾಡಲಾಗಿದೆಯೇ ಎಂಬುದು ಸ್ಪಷ್ಟವಾಗುತ್ತದೆ.
                                                                                                                                                                                                                                  ನಿಮ್ಮವನೇ ಆದ
                                                                                                      ಯತಿನ್ ಓಝಾ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X