ಯುವಕನಿಗೆ ಹಲ್ಲೆ: ಬೈಕ್‌ಗೆ ಹಾನಿ
ಮಂಜೇಶ್ವರ, ನ.19: ಯುವಕನೋರ್ವನಿಗೆ ಆಟೊ ರಿಕ್ಷಾದಲ್ಲಿ ಬಂದ ನಾಲ್ವರ ತಂಡ ಹಲ್ಲೆ ನಡೆಸಿ, ಬೈಕ್‌ಗೆ ಹಾನಿಗೈದು ಪರಾರಿಯಾದ ಘಟನೆ ಶುಕ್ರವಾರ ರಾತ್ರಿ ಕುಂಬಳೆ ರೈಲು ನಿಲ್ದಾಣ ಬಳಿ ನಡೆದಿದೆ. ಕುಂಟಂಗೇರಡ್ಕ ನಿವಾಸಿ ಜವಾದ್(21) ಎಂಬವರು ಗಾಯಗೊಂಡಿದ್ದು, ಅವರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಜವಾದ್ ಶುಕ್ರವಾರ ರಾತ್ರಿ ಕುಂಬಳೆ ಪೇಟೆಯಲ್ಲಿರುವ ಸಹೋದರನ ಮೊಬೈಲ್ ಅಂಗಡಿಯಿಂದ ಕೆಲಸ ಮುಗಿಸಿ ಆಹಾರ ಸೇವಿಸಲೆಂದು ರೈಲು ನಿಲ್ದಾಣ ಬಳಿಯ ಗೂಡಂಗಡಿಗೆ ಬಂದಿದ್ದರು. ಆ ಸಂದರ್ಭ ಅಲ್ಲಿಗೆ ಬಂದ ತಂಡ ಜವಾದ್‌ರ ಮೇಲೆ ಹಲ್ಲೆ ನಡೆಸಿದೆ ಎನ್ನಲಾಗಿದೆ. ಆಗ ಜವಾದ್ ಬೈಕ್ ಹತ್ತಿ ಪಾರಾಗಲೆತ್ನಿಸಿದಾಗ ತಂಡ ಅವರನ್ನು ತಡೆದು ಮತ್ತೆ ಹಲ್ಲೆಗೈದು, ಬೈಕ್‌ಗೆ ಹಾನಿಗೈದಿದೆಯೆಂದು ದೂರಲಾಗಿದೆ. ಉಪ್ಪಳದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಗೂಂಡಾ ಆಕ್ರಮಣದ ಮಾದರಿಯಲ್ಲೇ ಕುಂಬಳೆಯಲ್ಲೂ ನಡೆದಿದ್ದು, ಈ ಘಟನೆ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Next Story





