ಕೇರಳಕ್ಕೆ 150 ಕೋಟಿಯ 500 ರ ನೋಟು

ತಿರುವನಂತಪುರಂ,ನ. 20: ಬ್ಯಾಂಕ್‌ಗಳಲ್ಲಿ ಮತ್ತು ಎಟಿಎಂಗಳಲ್ಲಿ ವಿತರಿಸಲು 150ಕೋಟಿರೂಪಾಯಿಯ 500ರೂಪಾಯಿ ಹೊಸ ನೋಟುಗಳು ರಿಸರ್ವ್‌ಬ್ಯಾಂಕ್‌ನ ತಿರುವನಂತಪುರಂ ಕಚೇರಿಗೆ ಬಂದಿದೆ ಎಂದು ವರದಿಯಾಗಿದೆ. ಕೇರಳದಾದ್ಯಂತ ವಿತರಣೆಗೆ ಇರುವ ನೋಟುಗಳಿವು.
ಆದರೆ ವಿತರಣೆ ಕಾರ್ಯ ಯಾವಾಗ ಆರಂಭಿಸಲಾಗುವುದೆಂದು ತೀರ್ಮಾನವಾಗಿಲ್ಲ. ಇದಕ್ಕೆ ರಿಸರ್ವ್‌ಬ್ಯಾಂಕ್ ಕೇಂದ್ರ ಕಚೇರಿಯ ಅನುಮತಿ ಅಗತ್ಯವಿದೆ. 500ರೂಪಾಯಿಯ ನೋಟುಗಳನ್ನು ವಿತರಿಸಿದರೆ ಈಗಿನ ಸಮಸ್ಯೆಗೆ ಪರಿಹಾರವಾಗಬಹುದೆಂದು ನಿರೀಕ್ಷಿಸಲಾಗುತ್ತಿದೆ.
ಆದರೆ, ಈಗ ಬಂದಿರುವ ಇವುಷ್ಟು ನೋಟುಗಳಿಂದ ಸಮಸ್ಯೆ ಪರಿಹಾರವಾಗದು. ಒಂದು ಪೆಟ್ಟಿಗೆಯಲ್ಲಿ ಐದುಕೋಟಿರೂಪಾಯಿಯಂತೆ ಮೂವತ್ತು ಪೆಟ್ಟಿಗೆಗಳು ಬಂದಿವೆ.
ಸೋಮವಾರದಿಂದ ಬ್ಯಾಂಕ್‌ಗಳಲ್ಲಿ ವಿತರಣೆಗೆ ನಿರ್ಧರಿಸಿದರೂ ಅಂದಿನಿಂದಲೇ ಈ ನೋಟುಗಳು ಎಟಿಎಂಗಳಲ್ಲಿ ಲಭ್ಯವಾಗುವುದಿಲ್ಲ. ಹಳೆ ನೋಟುಗಳಿಗಿಂತಗಾತ್ರದಲ್ಲಿ ಸಣ್ಣದು ಮತ್ತು ಕಡಿಮೆ ಭಾರ ಇರುವ ನೋಟುಗಳಿವು. ಆದ್ದರಿಂದ ಎಟಿಎಂಗಳ ಯಂತ್ರಗಳನ್ನು ನೋಟಿಗೆ ತಕ್ಕಂತೆ ಬದಲಾಯಿಸಬೇಕಾಗುತ್ತದೆ. ದೇಶದ ಹಲವು ಪ್ರಮುಖ ನಗರಗಳಿಗೆ ಈ ಹಿಂದೆ ಐನೂರರ ನೋಟುಗಳು ಬಂದಿದ್ದವು ಎಂದು ವರದಿ ತಿಳಿಸಿದೆ.





