ನೋಟು ರದ್ದತಿಗಿಂತ ದೊಡ್ಡ ಕಿರುಕುಳ ಈ 9 ಮಂದಿ ಅದರ ಬಗ್ಗೆ ಮಾತನಾಡುವುದನ್ನು ಸಹಿಸುವುದು

ನೋಟು ರದ್ದತಿ ಒಂದು ನರಕಸದೃಶ ನಡೆ. ಏಕೆಂದರೆ ಕೆಲವು ಕಪ್ಪು ಹಣ ಹೊಂದಿದವರಿಗೆ ನಷ್ಟವಾಗಬಹುದು ಅಥವಾ ಸಿಕ್ಕಿ ಬೀಳಲೂಬಹುದು. ಆದರೆ ಭ್ರಷ್ಟಾಚಾರದಲ್ಲಿ ಭಾರತದ ಅನುಭವ ನೋಡಿದಲ್ಲಿ ಅಂತಿಮವಾಗಿ ಬಡವರು ಮಾತ್ರ ಈ ನಡೆಯ ಬಲಿಪಶುಗಳಾಗುವುದು ಖಚಿತ.
ಆದರೆ ಈ ನಡೆಯ ಅಭಿಪ್ರಾಯದ ವಿಚಾರಕ್ಕೆ ಬಂದಲ್ಲಿ ಎಲ್ಲರೂ ಬುದ್ಧಿವಂತರಲ್ಲ. ಕೆಲವು ಬಹಳ ಅಜ್ಞಾನಿಗಳು ಮತ್ತು ತಿಳುವಳಿಕೆಯೇ ಇಲ್ಲದವರು. ಪತ್ರಕರ್ತರಿಂದ ಆರಂಭಿಸಿ ಶಾಸಕರು, ಉದ್ಯಮಿಗಳು ಮತ್ತು ನಟರೂ ಸಹ ಮೂರ್ಖ ಅಭಿಪ್ರಾಯಗಳನ್ನು ಪ್ರಕಟಿಸಿದ್ದಾರೆ. ಈ ಗೊಂದಲದ ದಿನಗಳ ನಡುವೆಯೂ ಅವರನ್ನು ನೋಡಿ ಒಮ್ಮೆ ನಗೋಣ. ವಾಸ್ತವದಲ್ಲಿ ಇವರೆಲ್ಲರೂ ಬಹಳ ಪ್ರಭಾವಶಾಲಿಗಳು. ಹಾಸ್ಯಕ್ಕಿಂತ ಹೆಚ್ಚಾಗಿ ಭಯಾನಕರು!
1. ಕಾಂಚನ ಗುಪ್ತಾರನ್ನು ನೋಡಿ. ಈಗ ಮುಚ್ಚಿ ಹೋಗಿರುವ ನಿಟಿ ಸೆಂಟ್ರಲ್ ಎನ್ನುವ ಮಾಜಿ ಬಲಪಂಥೀಯ ಪತ್ರಿಕೆಯ ಸಂಪಾದಕ ನಿರ್ದೇಶಕರಾಗಿದ್ದರು. ಅವರು ಪ್ರಸಿದ್ಧ ಅಂಕಣಕಾರ ಮತ್ತು ಎಬಿಪಿ ನ್ಯೂಸ್‌ನ ಕಾರ್ಯನಿರತ ಸಂಪಾದಕ. ಅವರ ಪ್ರಕಾರ ಬಡವರ ಬಳಿ ಈಗ ರದ್ದಾಗಿರುವ ರೂ. 500 ಮತ್ತು 1000ದ ನೋಟುಗಳೇ ಇಲ್ಲ! ಸಲೀಲ್ ತ್ರಿಪಾಠಿಗೆ ಅವರು ಏನು ಉತ್ತರಿಸಿದ್ದಾರೆ ಎನ್ನುವುದನ್ನು ಗಮನಿಸಿ.
ಸಲೀಲ್ ತ್ರಿಪಾಠಿ- ಬಡವರು ಹಸಿವೆಯಿಂದ ತೊಳಲಾಡಿ ಸರತಿಯಲ್ಲಿ ಸಾಯುತ್ತಿದ್ದಾರೆ. ಇದು ಸಂಕಷ್ಟವಲ್ಲವೆ? ಬೇಸರವಾದರೂ ಆಮ್ಲೆಟ್ ಮಾಡಲು ಮೊಟ್ಟೆಯನ್ನು ಒಡೆಯಲೇಬೇಕು ಎನ್ನುವಂತಿದೆ.
ಕಾಂಚನ ಗುಪ್ತಾ- ಬಡವರ ಬಳಿ 500/1000ದ ನೋಟುಗಳೇ ಇಲ್ಲ. ಹಿಂದೆಯೂ ನಾನು ಇದನ್ನೇ ಹೇಳಿರುವೆ. ಆದರೆ ವಾಸ್ತವಾಂಶಗಳು ಯಾರಿಗೆ ಬೇಕು? ಬಡವರಿಗೆ ಸಮಸ್ಯೆ ಎದುರಿಸುವುದು ಗೊತ್ತು. ಶ್ರೀಮಂತರಿಗೆ ತೊಂದರೆಯಾಗಿರುವುದರಿಂದ ಈಗ ಬಡವರು ಸಂಭ್ರಮಿಸುತ್ತಿದ್ದಾರೆ.
@saliltripathi No poor has 500/1000 notes. I mentioned this to you earlier too. But hey since when have facts mattered?
— কাঞ্চন গুপ্ত (@KanchanGupta) November 11, 2016
Poorer people don't have 500 or 1000 notes. Poorer people know how to cope. Poorer people are celebrating the richer have been shafted. https://t.co/HDaktBkqc3
— কাঞ্চন গুপ্ত (@KanchanGupta) November 11, 2016
2. ಝೀ ನ್ಯೂಸ್‌ನ ಸಂಪಾದಕ ಮುಖ್ಯಸ್ಥ ಸುಧೀರ್ ಚೌಧುರಿ ಮತ್ತೊಬ್ಬ ಪ್ರಸಿದ್ಧ ವ್ಯಕ್ತಿ. ಇವರು ರಾಮನಾಥ ಗೋಯೆಂಕ ಪ್ರಶಸ್ತಿ ಪಡೆದವರು. ರಾಷ್ಟ್ರಭಕ್ತರು. ಖಾಸಗಿ ಆಯ್ಕೆ ಮತ್ತು ರಾಷ್ಟ್ರ ಹೇರಿದ ಆದೇಶಗಳ ನಡುವೆ ಇವರಿಗೆ ವ್ಯತ್ಯಾಸ ಗೊತ್ತಿಲ್ಲ. "ಕಳೆದ ವರ್ಷ ಜನರು ಎಚ್&ಎಂ ಮಳಿಗೆಯ ಮುಂದೆ ರಿಯಾಯಿತಿಗಾಗಿ ಗಂಟೆಗಟ್ಟಲೆ ಕಾದಿದ್ದರು. ಆದರೆ ಅದೇ ಮಂದಿಗೆ ಎಟಿಎಂ ಮುಂದೆ ಕಾಯಲು ಸಮಸ್ಯೆಯಾಗುತ್ತಿದೆ" ಎಂದಿದ್ದಾರೆ ಸುಧೀರ್ ಚೌಧುರಿ. ಇದೇ ವ್ಯಕ್ತಿ ತಮ್ಮ ವಾಹಿನಿಯಲ್ಲಿ ಹೊಸ ರೂ.2000 ಕರೆನ್ಸಿ ನೋಟುಗಳಲ್ಲಿ ನ್ಯಾನೋ ಜಿಪಿಎಸ್ ಚಿಪ್‌ಗಳಿದ್ದು, ಸರ್ಕಾರಕ್ಕೆ ಕಪ್ಪು ಹಣ ಟ್ರಾಕ್ ಮಾಡಲು ನೆರವಾಗಲಿದೆ ಎಂದಿದ್ದರು.
People waited for hours outside H&M store last year to avail inaugural discounts.Same people have problems to wait at the ATM. pic.twitter.com/Jw1Yj89pYX
— Sudhir Chaudhary (@sudhirchaudhary) November 12, 2016
3. ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಮೇಲೆ ಟೀಕೆ ಮಾಡಿದಾಗ ರಾಷ್ಟ್ರಭಕ್ತ ಸೈನಿಕರು ಮತ್ತು ಸೇನೆಯ ವಿಷಯ ಬಾರದೆ ಇರುತ್ತದೆಯೆ? ನಮ್ಮ ಯೋಗಗುರು ಬಾಬಾ ರಾಮ್ ದೇವ್ ಅವರ ಲಾಜಿಕ್ ಇದಕ್ಕೂ ಮಿಗಿಲಾಗಿದೆ. ವಾರಗಟ್ಟಲೆ ಯುದ್ಧದ ಸಂದರ್ಭ ಸೈನಿಕರು ಹಸಿವೆಯಿಂದ ಇರುವಾಗ ಪ್ರಜೆಗಳು ಅಷ್ಟೂ ಮಾಡಲಾರರೆ? "ಯುದ್ಧದ ಸಮಯದಲ್ಲಿ ಸೈನಿಕರು 7-8 ದಿನ ಹಸಿವೆಯಿಂದ ಇರುತ್ತಾರೆ. ನಮ್ಮ ದೇಶಕ್ಕಾಗಿ ನಾವು ಅಷ್ಟೂ ಮಾಡಲಾರೆವೆ?" ಎಂದು ಬಾಬಾ ರಾಮ್ ದೇವ್ ಹೇಳಿದ್ದಾರೆ.
During war, our soldiers fight sans eating for 7-8 days; so can't we do the same for our nation?: Baba Ramdev #DeMonetisation pic.twitter.com/7kDz7dipVW
— ANI (@ANI_news) November 13, 2016
4. ರಾಜ್ಯಸಭಾ ಸಂಸದ ಡಾ ಸುಭಾಷ್ ಚಂದ್ರ ಪ್ರಕಾರ ಸರ್ಕಾರವು ಆದಾಯ ತೆರಿಗೆ ತಪ್ಪಿಸಿದವರನ್ನು ಹುಡುಕಲು ಮಾಡುತ್ತಿರುವ ರಹಸ್ಯ ಪರೀಕ್ಷೆಯಿದು. "ಅನನುಕೂಲ ಕೇವಲ ಕಪ್ಪು ಹಣ ಇರುವವರು, ಭ್ರಷ್ಟರು ಮತ್ತು ಮಾಫಿಯಾಗಳಿಗೆ ಮಾತ್ರ ಆಗಲಿದೆ. ಯಾರಿಗಾದರೂ ಅನನುಕೂಲವಾದಲ್ಲಿ ಅವರು ಯಾರೆಂದು ತಿಳಿಯಿತಲ್ಲ!" ಎಂದು ಅವರು ಹೇಳಿದ್ದಾರೆ.
‘Inconvenience’ is only to the black money hoarders, corrupts and mafias. So anyone who claims ‘inconvenience’, now you know he/she is!
— Dr. Subhash Chandra (@subhashchandra) November 12, 2016
5. ಸಂಸತ್ತಿನ ಎಲ್ಲಾ ಸದಸ್ಯರು ಹೀಗೇ ಏನೋ. ಒಡಿಶಾದ ಬೈಜಂತ ಪಾಂಡ (ಬಿಜು ಜನತಾ ದಳ) ಅವರಿಗೆ ಹಲವರು ಸಣ್ಣ ಅನನುಕೂಲವಾಗಿರುವ ಮರಣ ಹೊಂದಿರುವುದು ತಿಳಿದೇ ಇಲ್ಲವೇನೋ. "ಸಂಕಷ್ಟದ ಸಮಯದಲ್ಲಿ ಹತಾಶೆ ಸಾಮಾನ್ಯ. ಆದರೆ ಅತಿಯಾಗಿ ಇದನ್ನು ವೈಭವೀಕರಿಸಿದರೆ ಎಲ್ಲೋ ಸಂಶಯಕ್ಕೆ ಎಡೆಮಾಡುವ ವಿಷಯವಿದೆ ಎನ್ನಬಹುದು" ಎಂದಿದ್ದಾರೆ.
It's normal 2b frustrated at a cpl of days hassle. But if u go on & on, recall Shakespeare: thou "doth protest too much, methinks," ie fishy
— Baijayant Jay Panda (@PandaJay) November 11, 2016
6. ರಾಜಸ್ಥಾನ ಮೂಲದ ಐಎಎಸ್ ಅಧಿಕಾರಿ ಸಂಜಯ್ ದೀಕ್ಷಿತ್ ನೆನಪಿದೆಯೇ? ಪಾಕಿಸ್ತಾನದ ಜೊತೆಗೆ ಅಣುಯುದ್ಧಕ್ಕೆ ಭಾರತೀಯರು ಸಿದ್ಧರಾಗುವಂತೆ ಹೇಳಿದವರು. ಅವರ ಪ್ರಕಾರ ಭಾರತದಲ್ಲಿ ಬ್ಯಾಂಕ್ ಖಾತೆಯಿಲ್ಲದ ವ್ಯಕ್ತಿಯೇ ಇಲ್ಲ. "ಬ್ಯಾಂಕ್ ಖಾತೆ ಇಲ್ಲದ ಬಡವರು ದೇಶದಲ್ಲಿ ಈಗಿಲ್ಲ. ಗ್ರಾಮಗಳಲ್ಲಂತೂ ಇಲ್ಲವೇ ಇಲ್ಲ" ಎಂದಿದ್ದಾರೆ.
7. ಸೈನಿಕರನ್ನು ಉದಾಹರಿಸುವುದು ಬಿಜೆಪಿಯ ಎಲ್ಲರಿಗೂ ಫ್ಯಾಷನ್ ಆಗಿದೆ. ಮಾಜಿ ಬಿಜೆಪಿ ಸಂಸದ ತರುಣ್ ವಿಜಯ್ ಇನ್ನೊಂದು ಹೆಜ್ಜೆ ಹೋಗಿ ಸಿಯಾಚಿನ್ ಸೈನಿಕರಿಗೆ ಹೋಲಿಸಿದ್ದಾರೆ. ಸಿಯಾಚಿನ್‌ನಲ್ಲಿ ಸೈನಿಕರು, ಎಟಿಎಂನಲ್ಲಿ ಇಂದು ಪ್ರಜೆಗಳುಎಂದು ಟ್ಯಾಗ್‌ಲೈನ್ ಅಡಿ, ಇಬ್ಬರೂ ದೇಶಸೇವೆ ಮಾಡುತ್ತಿದ್ದಾರೆ. ಸಹನೆ ಇರಲಿ. ಪರಪಟ್ಟು ಜೀವಿಗಳಿಂದ ಭಾರತವನ್ನು ಕಾಪಾಡಿ ಎನ್ನುತ್ತಾರೆ ವಿಜಯ್! ಇಷ್ಟು ಸಾಲದೆಂಬಂತೆ ಅವರು ಜನರ ಅಭಿಪ್ರಾಯಗಳನ್ನು ತಾವೇ ತಿಳಿದುಕೊಂಡು 'ಸಣ್ಣ ಅನನುಕೂಲ' ಎಂದಿದ್ದಾರೆ. "ಕೂಲಿಗಳು, ರೈತರು, ಆಟೋ ರಿಕ್ಷಾ ಚಾಲಕರು, ಅಧ್ಯಾಪಕರು ಎಲ್ಲರೂ ಸಣ್ಣ ಅನನುಕೂಲ ಸಹಿಸಲು ಸಿದ್ಧರಿರುವುದಾಗಿ ಹೇಳಿದ್ದಾರೆ. ಮೋದಿಯ ನಿರ್ಧಾರ ರಾಷ್ಟ್ರ ಹಿತಕ್ಕಾಗಿ" ಎನ್ನುತ್ತಾರೆ ಇವರು.
Soldier at Siachin, citizen at ATM today, both serve the nation. have patience, save Indian from parasites
— Tarun Vijay (@Tarunvijay) November 12, 2016
8. ಕುರುಡಾಗಿ ಈ ನಿರ್ಧಾರವನ್ನು ಬೆಂಬಲಿಸುವ ಬಹಳಷ್ಟು ಮಂದಿ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಂಡವರು. ಹೀಗಾಗಿ ಐಶ್ವರ್ಯಾ ರೈ ಬಚ್ಚನ್‌ರಿಂದ ಇನ್ನೇನು ತಾನೇ ನಿರೀಕ್ಷಿಸಲು ಸಾಧ್ಯ? "ಭ್ರಷ್ಟಾಚಾರವನ್ನು ಎಲ್ಲಾ ಹಂತದಿಂದಲೂ ನಿವಾರಿಸುವ ಪ್ರಯತ್ನವಿದು. ಬದಲಾವಣೆಯಿಂದ ಸಣ್ಣ ಅನನುಕೂಲ ಇದ್ದೇ ಇರುತ್ತದೆ. ನಮ್ಮ ಗುರಿ ಇದಾಗಬಾರದು. ದೀರ್ಘಕಾಲೀನ ಸ್ಥಿತಿಯನ್ನು ನೋಡಿ. ರಾಷ್ಟ್ರದ ಮುಖ್ಯಸ್ಥರು ಅದನ್ನು ಮಾಡಿದಾಗ ನಾವು ಗೌರವಿಸಬೇಕು" ಎಂದಿದ್ದಾರೆ. ಮಾಜಿ ಭುವನಸುಂದರಿಗೆ ಭಾರತದಲ್ಲಿ ಎಲ್ಲರೂ ಅವರಂತಹ ವೈಭೋಗದ ಜೀವನ ನಡೆಸುತ್ತಿಲ್ಲ ಎನ್ನುವುದನ್ನು ನೆನಪಿಸಬೇಕು. ಇದು ಆಕೆಗೆ ಸಣ್ಣ ಅನನುಕೂಲವಾಗಬಹುದು. ಆಕೆಯ ವೈಭೋಗದ ನೂರರಲ್ಲಿ ಒಂದು ಭಾಗವೂ ಇಲ್ಲದ ಜನರ ಬಗ್ಗೆ ಅನುಕಂಪವಿರಬೇಕು.
9. ಪೇಟಿಮ್ ಎನ್ನುವ ಆನ್‌ಲೈನ್ ಹಣ ವರ್ಗಾವಣೆಯ ಆ್ಯಪ್ ಒಂದು ಹೆಜ್ಜೆ ಮುಂದೆ ಹೋಗಿ ಕರೆನ್ಸಿ ನೋಟು ರದ್ದು ತೀರ್ಮಾನದ ನಂತರ ತಮಗಾಗುತ್ತಿರುವ ಲಾಭದಿಂದ ಅಹಂ ತುಂಬಿಕೊಂಡಿದೆ. ಈ ಉದ್ಯಮ ಲಾಭದ ಸೊಕ್ಕಿನಿಂದ ಕಡಿಮೆ ಸೌಲಭ್ಯ ಹೊಂದಿರುವ ಜನರಿಗೆ ನೆರವಾಗುವವರನ್ನು ತಮಾಷೆಯಾಡಿದ್ದಾರೆ. ಬಡವರ ಕಷ್ಟವನ್ನು ಅವರು ಗಣನೆಗೇ ತೆಗೆದುಕೊಂಡಿಲ್ಲ.
ಕೃಪೆ: www.dailyo.in







