ಸರಕಾರ ಬಾಡಿಗೆ ನೀಡಲಿಲ್ಲ; ಕಟ್ಟಡ ಮಾಲಕ ಆತ್ಮಹತ್ಯೆಗೆ ಶರಣು

ನೈಯಾಟ್ಟಿಕರ, ನ. 20: ಕಟ್ಟಡದ ಬಾಡಿಗೆಯನ್ನು ದೀರ್ಘಕಾಲದಿಂದ ಬಾಕಿ ಉಳಿಸಿಕೊಂಡದ್ದರಿಂದ ಮನನೊಂದ ಕಟ್ಟಡದ ಮಾಲಕರೊಬ್ಬರು ಆತ್ಮಹತ್ಯೆಮಾಡಿಕೊಂಡಿದ್ದಾರೆಂದು ವರದಿಯಾಗಿದೆ. ನೈಯಾಟ್ಟಿಕರ ಪೆರುಂಕಡವ್ ಎಂಬಲ್ಲಿನ ಮಾಜಿ ಸೈನಿಕ ಜಯಕುಮಾರ್(51) ಕಟ್ಟಡದ ಮುಂದೆ ನೇಣು ಹಾಕಿಕೊಂಡು ಸಾವಿಗೆ ಶರಣಾಗಿದ್ದಾರೆ.
ವಾಣಿಜ್ಯ ಚೆಕ್‌ಪೋಸ್ಟ್ ಇರುವುದು ಜಯಕುಮಾರ್‌ರ ಕಟ್ಟಡದಲ್ಲಾಗಿದೆ. ಏಳುವರ್ಷಗಳಿಂದ ಬಾಡಿಗೆ ನೀಡಿರಲಿಲ್ಲ. ಬಾಡಿಗೆ ಸ್ಥಗಿತಗೊಂಡು ಐದುವರ್ಷ ಆಗಿದ್ದಾಗ ಜಯಕುಮಾರ್ ಕಾನೂನುಹೋರಾಟಕ್ಕಿಳಿದಿದ್ದರು.
ಕೋರ್ಟು ವಿಚಾರಣೆಗೆತ್ತಿಕೊಂಡಿದ್ದರೂ ಮುಂದೂಡಿತ್ತು. ಈ ನಡುವೆ ಮಾಜಿಸೈನಿಕ ಜಯಕುಮಾರ್ ಆತ್ಮಹತ್ಯೆಗೈದಿದ್ದಾರೆಂದು ವರದಿ ತಿಳಿಸಿದೆ.
Next Story





