ಮಲೇಶ್ಯ ಪ್ರಧಾನಿ ರಾಜೀನಾಮೆಗೆ ಒತ್ತಾಯಿಸಿ ಧರಣಿ

ಕ್ವಾಲಾಲಂಪುರ್, ನ. 20: ಭ್ರಷ್ಟಾಚಾರ ವಿವಾದದಲ್ಲಿ ಸಿಲುಕಿರುವ ಪ್ರಧಾನಿ ನಜೀಬ್ ರಝಾಕ್‌ರ ರಾಜಿನಾಮೆಗೆ ಆಗ್ರಹಿಸಿ ಕಾಲಾಲಂಪುರದಲ್ಲಿ ಸಾವಿರಾರು ಮಂದಿ ಬೀದಿಗಿಳಿದು ಧರಣಿ ನಡೆಸಿದ್ದಾರೆ ಎಂದು ವರದಿಯಾಗಿದೆ. ಜನರ ಕಲ್ಯಾಣಕ್ಕಾಗಿ ಖರ್ಚುಮಾಡಬೇಕಿದ್ದ ಕೋಟಿಗಟ್ಟಲೆ ಡಾಲರನ್ನುಪ್ರಧಾನಿ ತನ್ನ ಖಾಸಗಿ ಅಗತ್ಯಕ್ಕೆ ಬಳಸಿಕೊಂಡಿದ್ದಾರೆಂದು ರಝಾಕ್ ವಿರುದ್ಧ ಆರೋಪ ಭುಗಿಲೆದ್ದಿದೆ.
ಸರಕಾರದ ಬುಡಮೇಲಿಗೆ ಶ್ರಮಿಸುತ್ತಿದ್ದಾರೆಂದು ಆರೋಪಿಸಿ ಪ್ರತಿಪಕ್ಷ ನಾಯಕರನ್ನೂ , ಹೋರಾಟಗಾರರನ್ನೂ ಬಂಧಿಸಿದ ಬೆನ್ನಿಗೆ ಜನರು ರಾಜಧಾನಿ ಕಾಲಾಂಲಪುರದಲ್ಲಿ ಪ್ರತಿಭಟನೆಗಿಳಿದ್ದಾರೆ. ದೇಶದ ವಿವಿಧ ಕಡೆಯಿಂದ ಬಂದ ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಪ್ರತಿಭಟನಾ ರ‍್ಯಾಲಿಯ ಹಿನ್ನೆಲೆಯಲ್ಲಿ ಭಾರೀ ಸುರಕ್ಷೆಯನ್ನು ಏರ್ಪಡಿಸಲಾಗಿತ್ತು. 7,000 ಪೊಲೀಸರನ್ನು ಸುರಕ್ಷಾ ಕಾರ್ಯಕ್ಕಾಗಿ ನಿಯೋಜಿಸಲಾಗಿದೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆ ಬೆರ್ನಾಮ ವರದಿ ಮಾಡಿದೆ. ಶನಿವಾರ ರ‍್ಯಾಲಿಗೆ ಕರೆ ನೀಡಿದ್ದ ನಾಯಕರನ್ನು ಸರಕಾರ ಬಂಧಿಸಿತ್ತು. ರ‍್ಯಾಲಿ ಕಾನೂನು ಬಾಹಿರವೆಂದು ಆರೋಪಿಸಿ ಇವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಪ್ರತಿಪಕ್ಷ ಪ್ರತಿಭಟನಾಕಾರರನ್ನು ಬಳಸಿ ಆಟಕ್ಕಿಳಿದಿದೆ ಎಂದು ಪ್ರಧಾನಿ ನಜೀಬ್ ರಝಾಕ್ ಆರೋಪಿಸಿದ್ದಾರೆಂದು ವರದಿ ತಿಳಿಸಿದೆ.





