ಮರವನ್ನು ಹತ್ತಿ ಕಾರ್ಮಿಕನಿಂದ ಆತ್ಮಹತ್ಯೆ ಬೆದರಿಕೆ

ಮುಟ್ಟಂ(ತೊಡುಪುಝ), ನ. 20: ಎಸ್ಟೇಟ್‌ನ ರಬ್ಬರ್ ಮರಕ್ಕೆ ಹತ್ತಿ ಕಾರ್ಮಿಕನೊಬ್ಬ ಆತ್ಮಹತ್ಯೆಯ ಬೆದರಿಕೆಯೊಡ್ಡಿದ ಘಟನೆ ಇಲ್ಲಿಗೆ ಸಮೀಪದ ಮಲಂಕರ ಎಂಬಲ್ಲಿ ನಡೆದಿದೆ ಎಂದು ವರದಿಯಾಗಿದೆ. ಪತ್ನಿಯ ಚಿಕಿತ್ಸೆಗೆ ಅಗತ್ಯವಾದ ವರದಿಯನ್ನು ಮ್ಯಾನೇಜ್ ಮೆಂಟ್ ನೀಡುವುದಿಲ್ಲ ಎಂದು ಪ್ರತಿಭಟಿಸಿ ರಬ್ಬರ್ ಟಾಪಿಂಗ್ ಕಾರ್ಮಿಕ ಬಿನುಕುಮಾರ್(39) ಎಂಬವರು ಕೊರಳಿಗೆ ಉರುಳು ಸಿಕ್ಕಿಸಿ ಆತ್ಮಹತ್ಯೆ ಬೆದರಿಕೆಯೊಡ್ಡಿದ್ದು, ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕ ದಳ ಅಗಮಿಸಿದೆ. ಜನಪ್ರತಿನಿಧಿಗಳು ಕೂಡಾ ಬಿನುಕುಮಾರ್‌ರ ಮನವೊಲಿಸುವ ಪ್ರಯತ್ನವನ್ನು ಮುಂದುವರಿಸಿದ್ದಾರೆಂದು ವರದಿ ತಿಳಿಸಿದೆ.
ಎಸ್ಟೇಟ್‌ನ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಬರದೆ ಮರದಿಂದ ಕೆಳಗಿಳಿಯಲಾರ ಎಂದು ಬಿನುಕುಮಾರ್ ಹಟಹಿಡಿದ್ದಾರೆ. ರೋಗಿಯಾದ ಪತ್ನಿಯನ್ನು ಇನ್ನೊಂದು ಆಸ್ಪತ್ರೆಗೆ ಸೇರಿಸುವ ಅಗತ್ಯವಿದ್ದು ಅದಕ್ಕೆ ಎಸ್ಟೇಟ್ ಅಧಿಕಾರಿಗಳು ಅಡ್ಡಿಪಡಿಸುತ್ತಿದ್ದಾರೆಂದು ಅವರು ನೆರದವರ ಮುಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆಂದು ವರದಿ ತಿಳಿಸಿದೆ.
Next Story





