ಆ್ಯಂಟಿ ಬಯಾಟಿಕ್ ಜಾಗೃತಿಗಾಗಿ ಸೈಕಲ್ ರ್ಯಾಲಿ

ಮಣಿಪಾಲ, ನ.20: ಮಣಿಪಾಲ ಕೆಎಂಸಿ ಆಸ್ಪತ್ರೆಯ ಸೋಂಕು ನಿಯಂತ್ರಣ ಸಮಿತಿ, ಡಾ.ಟಿಎಂಎ ಪೈ ಆಂಟಿಮೈಕ್ರೋಬಿಯಲ್ ಸ್ಟೀವರ್ಡ್ ಶಿಪ್ ದತ್ತಿ ಪೀಠ, ಉಡುಪಿ ಡಾ.ಟಿ.ಎಂ.ಎ.ಪೈ ಆಸ್ಪತ್ರೆಯ ಆಶ್ರಯದಲ್ಲಿ ಭಾರತೀಯ ವೈದ್ಯಕೀಯ ಸಂಸ್ಥೆ ಉಡುಪಿ-ಕರಾವಳಿ ಹಾಗೂ ಉಡುಪಿ ಸೈಕ್ಲಿಂಗ್ ಕ್ಲಬ್‌ಗಳ ಸಹಯೋಗದೊಂದಿಗೆ ಜಾಗತಿಕ ಆಂಟಿ ಬಯಾಟಿಕ್ ಜಾಗೃತಿ ಸಪ್ತಾಹದ ಪ್ರಯುಕ್ತ ಸೈಕಲ್ ರ್ಯಾಲಿಯನ್ನು ರವಿವಾರ ಹಮ್ಮಿಕೊಳ್ಳಲಾಗಿತ್ತು.
ಮಣಿಪಾಲ ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಎಂ.ದಯಾ ನಂದ ಆಸ್ಪತ್ರೆಯ ಹೊರರೋಗಿ ವಿಭಾಗದ ಎದುರು ರ್ಯಾಲಿಗೆ ಚಾಲನೆ ನೀಡಿದರು.
ಅಲ್ಲಿಂದ ಹೊರಟ ಸೈಕಲ್ ರ್ಯಾಲಿಯು ಇಂದ್ರಾಳಿ, ಕಡಿಯಾಳಿ ಮಾರ್ಗವಾಗಿ ಉಡುಪಿಯ ತಲುಪಿ, ನಂತರ ಉಡುಪಿಯಿಂದ ಮತ್ತೆ ಮಣಿಪಾಲಕ್ಕೆ ಆಗಮಿಸಿತು. ಇದರಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು.
ಆಂಟಿಬಯಾಟಿಕ್‌ಗಳ ದುರ್ಬಳಕೆ ಮತ್ತು ಇದರ ವಿವೇಚನಾಯುತ ಬಳಕೆಗೆ ಸಂಬಂಧಿಸಿದಂತೆ ವೈದ್ಯಕೀಯ ಹಿತಾಸಕ್ತಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುಸುವ ಉದ್ದೇಶದಿಂದ ಈ ರ್ಯಾಲಿಯನ್ನು ಉದ್ದೇಶಿಸಲಾಗಿದೆ ಎಂದು ಸಂಘಟಕರು ತಿಳಿಸಿದರು.





